ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶದಲ್ಲಿ ಹಿಂಸಾಚಾರ; ಬಿಎನ್‌ಪಿ ನಾಯಕ ಮುಸಬ್ಬೀರ್ ಗುಂಡಿಕ್ಕಿ ಹತ್ಯೆ

BNP leader Azizur Rahman Musabbir: ಫೆಬ್ರವರಿ 12 ರಂದು ನಡೆಯಲಿರುವ ಮತದಾನಕ್ಕೆ ಮುನ್ನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಮಧ್ಯೆ ಅಜೀಜುರ್ ರೆಹಮಾನ್ ಮುಸಬ್ಬೀರ್ ಹತ್ಯೆ ನಡೆದಿದೆ.

Rahman Musabbir shot dead

ಢಾಕಾ, ಜ.8: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಸ್ವೇಚ್ಛಾಸೇಬಕ್ ದಳದ ಮಾಜಿ ನಾಯಕ ಅಜೀಜುರ್ ರೆಹಮಾನ್ ಮುಸಬ್ಬೀರ್(BNP leader Azizur Rahman Musabbir) ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಚುನಾವಣೆಗೆ ಮುನ್ನ ನಡೆದ ರಾಜಕೀಯ ಹಿಂಸಾಚಾರದ ಇತ್ತೀಚಿನ ಘಟನೆ ಇದಾಗಿದೆ.

ಫೆಬ್ರವರಿ 12 ರಂದು ನಡೆಯಲಿರುವ ಮತದಾನಕ್ಕೆ ಮುನ್ನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಮಧ್ಯೆ ಅಜೀಜುರ್ ರೆಹಮಾನ್ ಮುಸಬ್ಬೀರ್ ಹತ್ಯೆ ನಡೆದಿದೆ. ಕೆಲವೇ ದಿನಗಳ ಹಿಂದೆ, ಪ್ರತ್ಯೇಕ ಘಟನೆಯಲ್ಲಿ ಜುಬೋ ದಳ ನಾಯಕನೊಬ್ಬನಿಗೆ ಗುಂಡು ಹಾರಿಸಲಾಗಿತ್ತು. ಇದಕ್ಕೂ ಮೊದಲು, ಡಿಸೆಂಬರ್ 12 ರಂದು, ಪ್ರಮುಖ ಭಾರತ ವಿರೋಧಿ ನಾಯಕ ಉಸ್ಮಾನ್ ಹಾದಿ ಅವರನ್ನು ಸಹ ಗುಂಡಿಕ್ಕಿ ಕೊಲ್ಲಲಾಗಿತ್ತು.

ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಸ್ವಯಂಸೇವಕ ವಿಭಾಗವಾದ ಢಾಕಾ ಮೆಟ್ರೋಪಾಲಿಟನ್ ನಾರ್ತ್ ಸ್ವೀಚ್ಛಸೇಬಕ್ ದಳದ ಪ್ರಧಾನ ಕಾರ್ಯದರ್ಶಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಅಜೀಜುರ್ ರೆಹಮಾನ್ ಮುಸಬ್ಬೀರ್ ಅವರನ್ನು ಢಾಕಾದ ಕಾರ್ವಾನ್ ಬಜಾರ್ ಪ್ರದೇಶದಲ್ಲಿ ಗುರಿಯಾಗಿಸಿಕೊಂಡರು. ಪ್ರಾಥಮಿಕ ವರದಿಗಳ ಪ್ರಕಾರ ದುಷ್ಕರ್ಮಿಗಳು ಹತ್ತಿರದಿಂದ ಗುಂಡು ಹಾರಿಸಿ ಮುಸಬ್ಬೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Bangladesh Unrest: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ನರಮೇಧ, 18 ದಿನಗಳಲ್ಲಿ 6ನೇ ಬಲಿ

ಈ ಮಧ್ಯೆ, ಗುಂಡಿನ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಗಾಯಗೊಂಡ ವ್ಯಕ್ತಿಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಕಾರ್ವಾನ್ ಬಜಾರ್‌ನ ಸ್ಟಾರ್ ಕಬಾಬ್ ಪಕ್ಕದ ಓಣಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಗುಂಡು ಹಾರಿಸಲಾಗಿದೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸ್‌ನ ತೇಜ್‌ಗಾಂವ್ ವಿಭಾಗದ ಹೆಚ್ಚುವರಿ ಉಪ ಆಯುಕ್ತ ಫಜ್ಲುಲ್ ಕರೀಮ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಬಲಿಪಶುಗಳನ್ನು ಮೊದಲು ಬಿಆರ್‌ಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದಾಳಿಕೋರರು ಪ್ರದೇಶದಿಂದ ಪಲಾಯನ ಮಾಡುವ ಮೊದಲು ಹಲವು ಸುತ್ತು ಗುಂಡು ಹಾರಿಸಿದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ದಾಳಿಕೋರರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಭದ್ರತಾ ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ.