ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nithyananda: ಭೂ ಕಬಳಿಕೆ ಪ್ರಕರಣ ; ನಿತ್ಯಾನಂದನ ಕೈಲಾಸದಿಂದ 20 ಜನರ ಗಡಿಪಾರು

ಭಾರತದಿಂದ ಪರಾರಿಯಾಗಿ ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವ ನಿತ್ಯಾನಂದನ ವಿರುದ್ಧ ಭೂ ವಂಚನೆ (Land Scam) ಯತ್ನ ಆರೋಪ ಕೇಳಿ ಬಂದಿದೆ. ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ 20 ಸದಸ್ಯರನ್ನು ಗಡಿಪಾರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೈಲಾಸ: ಭಾರತದಿಂದ ಪರಾರಿಯಾಗಿ ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವ ನಿತ್ಯಾನಂದ (Nithyananda) ವಿರುದ್ಧ ಭೂ ವಂಚನೆ (Land Scam) ಯತ್ನ ಆರೋಪ ಕೇಳಿ ಬಂದಿದೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ (Bolivia) ಬೊಲಿವಿಯಾದ ಅಮೇಜಾನ್ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಅಸ್ತಿತ್ವದಲ್ಲಿಲ್ಲದ ಕೈಲಾಸ ದೇಶ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಅಮೆಜಾನ್ ಮಳೆ ಕಾಡು ಪ್ರದೇಶದ ಭೂಮಿಯನ್ನು ನಿತ್ಯಾನಂದ ಗ್ಯಾಂಗ್ 1 ಸಾವಿರ ವರ್ಷ ಲೀಸ್‌ಗೆ ಪಡೆದು ವಂಚಿಸಿದ ಆರೋಪ ಕೇಳಿಬಂದಿದೆ. ದೇಶದಲ್ಲಿ 3,900 ಚದರ ಕಿಲೋಮೀಟರ್ ಭೂ ಕಬಳಿಕೆ ಆರೋಪ ಎದುರಿಸುತ್ತಿದ್ದಾರೆ.

ನಿತ್ಯಾನಂದ ಮತ್ತು ಅವರ ಶಿಷ್ಯರು ಬೊಲಿವಿಯಾದ 4.8 ಲಕ್ಷ ಹೆಕ್ಟೇರ್ (ಅಂದರೆ 4 ಲಕ್ಷ 80 ಸಾವಿರ ಎಕರೆ) ಸರ್ಕಾರಿ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಭೂಮಿಯನ್ನು 1000 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದೀಗ ಸ್ಥಳೀಯ ಸಮುದಾಯಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದಕ್ಕಾಗಿ ಬೊಲಿವಿಯಾದ ಅಧಿಕಾರಿಗಳು ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ 20 ಸದಸ್ಯರನ್ನು ಗಡಿಪಾರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯ ದಕ್ಷಿಣ ಅಮೆರಿಕಾದ ದೇಶದ ವಲಸೆ ನಿರ್ದೇಶಕಿ ಕ್ಯಾಥರೀನ್ ಕಾಲ್ಡೆರಾನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 20 ಸದಸ್ಯರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ಬಹುತೇಕ ಮಹಿಳೆಯರಿದ್ದಾರೆ ಎಂದು ತಿಳಿದು ಬಂದಿದೆ. ನಿತ್ಯಾನಂದ ತಂಡ ಆರೋಪ ನಿರಾಕರಿಸಿದೆ. ತಪ್ಪು ವರದಿಯಿಂದ ಹಿಂದು ಸನ್ಯಾಸಿಗಳನ್ನ ಬಂಧಿಸಿ ಹಲ್ಲೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದೆ.

ಈ ಸುದ್ದಿಯನ್ನೂ ಓದಿ: US Gold Card Scheme: ಅಮೆರಿಕದ ಗೋಲ್ಡ್ ಕಾರ್ಡ್ ಯೋಜನೆ ಬಿಗ್‌ ಹಿಟ್‌? ಒಂದೇ ದಿನ 1,000 ಕಾರ್ಡ್ ಮಾರಾಟ?

ಭಾರತದಲ್ಲಿ ಅತ್ಯಾಚಾರ ಆರೋಪ ಹೊತ್ತಿರುವ ನಿತ್ಯಾನಂದ, ಈಕ್ವೆಡಾರ್ ಕರಾವಳಿಯಲ್ಲಿ ಒಂದು ದ್ವೀಪ ಎಂದು ಹೇಳಲಾದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ದೇಶವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾರೆ. ವರದಿಯ ಪ್ರಕಾರ, ಕೈಲಾಸದ ಪ್ರತಿನಿಧಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೊಲಿವಿಯಾದಲ್ಲಿ ಹಲವಾರು ತಿಂಗಳುಗಳ ಕಾಲ ಇದ್ದರು. ಭೂಮಿಯನ್ನು ವಶಪಡಿಸಿಕೊಳ್ಳಲು ಸ್ಥಳೀಯ ನಾಯಕರ ಸಹಾಯ ಪಡೆಯಲಾಯಿತು. ಒಪ್ಪಂದ ಅಂತಿಮವಾದ ನಂತರ, ನಿತ್ಯಾನಂದನ ತಂಡವು ಜನರಿಂದ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿತು.