ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bondi beach shooting: ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಯಹೂದಿಯರ ರಕ್ತಪಾತಗೈದ ಹಂತಕನಿಗೆ ಭಾರತೀಯ ಲಿಂಕ್‌

ಹಂತಕ ಸಾಜೀದ್ ಅಕ್ರಂ 25 ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ಹೊರಟು ಹೋಗಿದ್ದ, ಅಲ್ಲಿ ಆತ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದ. ಇದೇ ಕಾರಣಕ್ಕೆ ಆತನನ್ನು ಆತನ ಕುಟುಂಬ ದೂರ ಇಟ್ಟಿದೆ ಎಂದು ಅವರು ಹೇಳಿದ್ದಾರೆ. ಕಳೆದ 27 ವರ್ಷಗಳಲ್ಲಿ ಸಾಜೀದ್ ಹೆಚ್ಚೆಂದರೆ ಮೂರು ಬಾರಿ ಭಾರತಕ್ಕೆ ಬಂದಿರಬಹುದು. 2022ರಲ್ಲಿ ಆತ ಕೊನೆಯ ಬಾರಿ ಭಾರತಕ್ಕೆ ಬಂದಿದ್ದ.

ಬೊಂಡಿ ಬೀಚ್‌ನಲ್ಲಿ ಯಹೂದಿಯರ ರಕ್ತಪಾತಗೈದ ಹಂತಕನಿಗೆ ಭಾರತೀಯ ಲಿಂಕ್‌

ಬೊಂಡಿ ಬೀಚ್‌ ಹಂತಕರು -

ಹರೀಶ್‌ ಕೇರ
ಹರೀಶ್‌ ಕೇರ Dec 17, 2025 7:38 AM

ಸಿಡ್ನಿ, ಡಿ.17: ಆಸ್ಟೇಲಿಯಾದ (Australia) ಬೊಂಡಿ ಬೀಚ್‌ನಲ್ಲಿ (Bondi beach shooting) ಯಹೂದಿಯರ ಹಬ್ಬದ ವೇಳೆ ಗುಂಡಿನ ದಾಳಿ ನಡೆಸಿ 16 ಜನರ ಬಲಿ ಪಡೆದ ಹಂತಕ (killer) ಸಾಜೀದ್ ಅಕ್ರಮ್‌ ಮೂಲತಃ ಭಾರತದ (India) ಹೈದರಾಬಾದ್‌ ಮೂಲದವನು. ಹೈದರಾಬಾದ್‌ನ ಓಲ್ಡ್‌ ಸಿಟಿ ನಿವಾಸಿಯಾಗಿದ್ದು, ಈತ ಯುರೋಪಿಯನ್ ಮೂಲದ ಕ್ರಿಶ್ಚಿಯನ್‌ ಮಹಿಳೆಯನ್ನು ಮದುವೆಯಾದ ನಂತರ ಹೈದರಾಬಾದ್‌ನಲ್ಲಿದ್ದ ಕುಟುಂಬದವರು ಆತನೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ.

ಸಾಜೀದ್ ಖಾನ್ ಈಗಲೂ ಭಾರತದ ಪಾಸ್‌ಪೋರ್ಟ್ ಹೊಂದಿದ್ದು, ಈತನ ಮಗ ಹಾಗೂ ಮಗಳು ಆಸ್ಟ್ರೇಲಿಯಾದಲ್ಲೇ ಜನಿಸಿದ್ದು, ಆಸ್ಟ್ರೇಲಿಯಾದ ಪ್ರಜೆಗಳಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಓಲ್ಡ್ ಸಿಟಿಯಲ್ಲಿರುವ ಆತನ ಕುಟುಂಬದ ಸದಸ್ಯರು ಮಾತನಾಡಿದ್ದು, ಕುಟುಂಬದವರು ಹಲವು ವರ್ಷಗಳ ಹಿಂದೆಯೇ ಆತನ ಜೊತೆ ಸಂಪರ್ಕ ಕಡಿತಗೊಳಿಸಿದ್ದಾರೆ. ಸಾಜೀದ್ ಅಕ್ರಮ್ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿದ್ದರಿಂದ ಕುಟುಂಬವೂ ಆತನ ಜೊತೆ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ಸಾಜೀದ್‌ನ ಸಂಬಂಧಿಕರೊಬ್ಬರು ಹೇಳಿದ್ದಾರೆ. ಸಾಜೀದ್ ಹಾಗೂ ಆತನ ಪುತ್ರ ನಾವೀದ್ ಅಕ್ರಮ ಇಬ್ಬರೂ ಸಿಡ್ನಿ ಬೀಚ್‌ನಲ್ಲಿ ನಡೆಯುತ್ತಿದ್ದ ಯಹೂಡಿಯರ ಹನುಕ್ಕಾ ಹಬ್ಬದ ವೇಳೆ ಗುಂಡಿನ ದಾಳಿ ನಡೆಸಿದ್ದರಿಂದ 16 ಜನ ಮೃತಪಟ್ಟು ಅನೇಕರು ಗಾಯಗೊಂಡಿದ್ದರು.

ಸಾಜೀದ್ ತಾನು ಹೊಂದಿದ್ದ ಭಾರತೀಯ ಪಾಸ್‌ಪೋರ್ಟ್ ಬಳಸಿಯೇ ಈ ಕೃತ್ಯ ನಡೆಸುವುದಕ್ಕೆ ಕೆಲ ವಾರಗಳ ಹಿಂದಷ್ಟೇ ಫಿಲಿಫೈನ್ಸ್‌ಗೆ ಹೋಗಿದ್ದ. ಈ ವೇಳೆ ಆತ ಆಸ್ಟ್ರೇಲಿಯಾದ ಟ್ರಾವೆಲ್ ದಾಖಲೆಗಳನ್ನು ಬಳಸಿದ್ದ. ಆಸ್ಟ್ರೇಲಿಯಾದ ನೆಲದಲ್ಲಿ 30 ವರ್ಷಗಳ ನಂತರ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿಂದೆ ಈ ಅಪ್ಪ ಮಗನ ಕೈವಾಡವಿರೋದು ಸಾಬೀತಾಗಿದೆ. ಕೃತ್ಯದ ನಂತರ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸಾಜೀದ್‌ ಅಕ್ರಮ್ ಮೃತಪಟ್ಟಿದ್ದಾನೆ. ಆದರೆ ನಾವೀದ್ ಗುಂಡಿನ ದಾಳಿಯಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾಜೀದ್ 1998ರಲ್ಲಿ ಭಾರತದಿಂದ ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದ. ಅಲ್ಲೇ ಯುರೋಪಿಯನ್ ಮಹಿಳೆಯನ್ನು ಮದುವೆಯಾಗಿದ್ದ ಸಾಜೀದ್‌ಗೆ ಅಲ್ಲೇ ಮಗ ಹಾಗೂ ಮಗಳು ಜನಿಸಿದ್ದರು. ನಿನ್ನೆ ಸಾಜೀದ್‌ ಅಕ್ರಮ್ ಹಾಗೂ ಆತನ ಪುತ್ರ ಪಾಕಿಸ್ತಾನ ಮೂಲದವರು ಎಂದು ಆಸ್ಟ್ರೇಲಿಯನ್ ಮಾಧ್ಯಮಗಳು ವರದಿ ಮಾಡಿದ್ದವು.

Bondi beach shooting: ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಉಗ್ರರು ಭಾರತೀಯರೇ? ವರದಿ ಹೇಳಿದ್ದೇನು?

ಸಾಜೀದ್ ಅಕ್ರಮ್‌ನ ಸಹೋದರ ಹೈದರಾಬಾದ್‌ನಲ್ಲಿದ್ದು, ಮಾಧ್ಯಮವೊಂದಕ್ಕೆ ಅವರು ನೀಡಿದ ಹೇಳಿಕೆಯ ಪ್ರಕಾರ, ಸಾಜೀದ್ ಅಕ್ರಂ 25 ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ಹೊರಟು ಹೋಗಿದ್ದ, ಅಲ್ಲಿ ಆತ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದ. ಇದೇ ಕಾರಣಕ್ಕೆ ಆತನನ್ನು ಆತನ ಕುಟುಂಬ ದೂರ ಇಟ್ಟಿದೆ ಎಂದು ಅವರು ಹೇಳಿದ್ದಾರೆ. ಕಳೆದ 27 ವರ್ಷಗಳಲ್ಲಿ ಸಾಜೀದ್ ಹೆಚ್ಚೆಂದರೆ ಮೂರು ಬಾರಿ ಭಾರತಕ್ಕೆ ಬಂದಿರಬಹುದು. 2022ರಲ್ಲಿ ಆತ ಕೊನೆಯ ಬಾರಿ ಭಾರತಕ್ಕೆ ಬಂದಿದ್ದ.

ಅವನು ಹೈದರಾಬಾದ್ ಓಲ್ಡ್ ಸಿಟಿ ನಿವಾಸಿ, ಆತನಿಗೂ ಈಗಲೂ ಕುಟುಂಬವಿದೆ. ಆತನಿಗೆ ಇಬ್ಬರು ಸೋದರರಿದ್ದಾರೆ ಇಲ್ಲಿ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. 2009ರಲ್ಲಿ ಸಾಜೀದ್‌ನ ತಂದೆ ತೀರಿಕೊಂಡಾಗಲೂ ಆತ ಭಾರತಕ್ಕೆ ಬರಲಿಲ್ಲ ಎಂದು ಅವರು ಹೇಳಿದ್ದಾರೆ. ಹಾಗೂ ಅನಾರೋಗ್ಯಪೀಡಿತರಾಗಿರುವ ಆತನ ವೃದ್ಧ ತಾಯಿಯ ಬಗ್ಗೆಯೂ ಆತ ವಿಚಾರಿಸಿಲ್ಲ ಎಂದು ಸಾಜೀದ್ ಸೋದರ ಹೇಳಿದ್ದಾರೆ. ಸೌದಿ ಅರೇಬಿಯಾದಿಂದ ಭಾರತಕ್ಕೆ ಬಂದ ಮೇಲೆ ಸಾಜೀದ್ ಅವರ ತಂದೆ ಹೈದರಾಬಾದ್‌ನಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿ ಮಾಡಿದ್ದರು. ಅದೇ ಸಮಯದಲ್ಲಿ ಸಾಜೀದ್‌ 1998ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದ. ಭಾರತೀಯ ತನಿಖಾ ಏಜೆನ್ಸಿಗಳ ಪ್ರಾಥಮಿಕ ತನಿಖೆಯ ಪ್ರಕಾರ ಸಾಜೀದ್ ಕೆಲ ವರ್ಷಗಳ ಹಿಂದೆ ಹೈದರಾಬಾದ್‌ಗೆ ಭೇಟಿ ನೀಡಿದ್ದ.