ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಿಜ್ಬುಲ್ಲಾ ಹಿರಿಯ ನಾಯಕ ಸೇರಿ 10 ಮಂದಿಯ ಹತ್ಯೆ
Israel strikes Lebanon: ಲೆಬನಾನ್ ಬೆಕಾ ಕಣಿವೆಯಲ್ಲಿ ನಡೆದ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇತ್ತೀಚಿನ ವಾರಗಳಲ್ಲಿ ಪೂರ್ವ ಲೆಬನಾನ್‍ನಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದು ಒಂದಾಗಿದೆ. ಪೂರ್ವ ಲೆಬನಾನ್‌ನ ಬೆಕಾ ಕಣಿವೆಯ ಭಾಗವಾಗಿರುವ ಬಾಲ್‌ಬೆಕ್ ಪ್ರದೇಶದಲ್ಲಿರುವ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ (ಸಂಗ್ರಹ ಚಿತ್ರ) -
ಬೈರುತ್, ಫೆ. 21: ಲೆಬನಾನ್‌ನ ಬೆಕಾ ಕಣಿವೆಯಲ್ಲಿ (Lebanon's Bekaa Valley) ನಡೆದ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇಸ್ರೇಲ್ ಸೇನೆ (Israeli strikes) ಹಿಜ್ಬುಲ್ಲಾ ಗುರಿಯಾಗಿಸಿಕೊಂಡು ಬಾಲ್ಬೆಕ್ ಪ್ರದೇಶದಲ್ಲಿ ಈ ದಾಳಿ ನಡೆಸಿರುವುದಾಗಿ ಹೇಳಿದೆ. ಇತ್ತೀಚಿನ ವಾರಗಳಲ್ಲಿ ಪೂರ್ವ ಲೆಬನಾನ್‍ನಲ್ಲಿ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಇದು ಒಂದಾಗಿದೆ.
ಪೂರ್ವ ಲೆಬನಾನ್‌ನ ಬೆಕಾ ಕಣಿವೆಯ ಭಾಗವಾಗಿರುವ ಬಾಲ್‌ಬೆಕ್ ಪ್ರದೇಶದಲ್ಲಿರುವ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಮೃತರಲ್ಲಿ ಹಿಜ್ಬುಲ್ಲಾದ ಹಿರಿಯ ನಾಯಕನೊಬ್ಬ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ 2024ರಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮಕ್ಕೆ ಒಪ್ಪಿಕೊಂಡವು. ಇದು ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಗಡಿಯಾಚೆಗಿನ ಗುಂಡಿನ ದಾಳಿಯನ್ನು ಕೊನೆಗೊಳಿಸುವ ಉದ್ದೇಶವನ್ನು ಹೊಂದಿತ್ತು. ಇಸ್ರೇಲ್ ದಾಳಿಗಳಿಂದ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ದುರ್ಬಲಗೊಂಡಿತ್ತು. ಆದರೆ ಎರಡೂ ಕಡೆಗಳಿಂದಲೂ ಮತ್ತೆ-ಮತ್ತೆ ಕದನ ವಿರಾಮ ಉಲ್ಲಂಘನೆ ನಡೆಯುತ್ತಿವೆ.
ಲೆಬನಾನ್ ಮೇಲೆ ಇಸ್ರೇಲ್ ಸೇನೆಯ ದಾಳಿ:
Lebanon was hit particulalry hard yesterday, short thread🧵
— Theti Mapping (@ThetiMapping) February 21, 2026
Overnight the IDF conducted airstrikes on 3 command centers in Tamnine El Tahta, Riyaq, and Bednayel in the Beqaa Valley. At least 10 people were killed and 30 wounded, including 8 Hezbollah operatives, with some from… pic.twitter.com/fI11bSyild
ಹಮಾಸ್‌ನ ಮೋಸ್ಟ್ ವಾಂಟೆಡ್ ಟನಲ್ ಪತ್ತೆ ಹಚ್ಚಿದ ಇಸ್ರೇಲ್ ಸೇನೆ
ಹಿಜ್ಬುಲ್ಲಾದ ಶಸ್ತ್ರಾಗಾರವನ್ನು ನಿಗ್ರಹಿಸುವಂತೆ ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು ಲೆಬನಾನ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ವ್ಯಾಪಕ ಇಸ್ರೇಲಿ ದಾಳಿಗಳು ಈಗಾಗಲೇ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದ ಜರ್ಜರಿತವಾಗಿರುವ ದೇಶವನ್ನು ಮತ್ತಷ್ಟು ಅಸ್ಥಿರಗೊಳಿಸಬಹುದು ಎಂದು ಲೆಬನಾನ್ ನಾಯಕರು ಎಚ್ಚರಿಸಿದ್ದಾರೆ.
ಇಸ್ರೇಲ್ ಸೇನೆಯು, ದಕ್ಷಿಣ ಲೆಬನಾನ್‌ನ ಐನ್ ಅಲ್-ಹಿಲ್ವೆ ಪ್ರದೇಶದಲ್ಲಿ ಉಗ್ರಗಾಮಿಗಳು ಕಾರ್ಯ ನಿರ್ವಹಿಸುತ್ತಿದ್ದ ಹಮಾಸ್ ಕಮಾಂಡ್ ಸೆಂಟರ್ ಅನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಐನ್ ಅಲ್-ಹಿಲ್ವೆಯು ಸಿಡಾನ್ ಬಳಿಯ ಪ್ಯಾಲೆಸ್ತೇನಿಯರ ನಿರಾಶ್ರಿತರ ಶಿಬಿರವಾಗಿದೆ. ಐನ್ ಅಲ್-ಹಿಲ್ವೆ ಮೇಲೆ ಇಸ್ರೇಲಿ ನಡೆಸಿದ ದಾಳಿಯನ್ನು ಹಮಾಸ್ ಖಂಡಿಸಿದೆ.
ಹಮಾಸ್ ಮೇಲೆ ದಾಳಿ ಮಾಡಿದ್ದ ಇಸ್ರೇಲ್
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಸ್ರೇಲ್ ಮಿಲಿಟರಿ ಪ್ಯಾಲೆಸ್ತೇನಿಯನ್ ಪ್ರದೇಶದ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 30 ಮಂದಿ ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಯುಎಸ್‌ನ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಮಿಲಿಟರಿಯು ಹಮಾಸ್ ಪಡೆಗಳ ಮೇಲೆ ವಾಯುದಾಳಿ ನಡೆಸಿತ್ತು.
2024ರ ಅಕ್ಟೋಬರ್ 10ರಂದು ಅಮೆರಿಕ ನೇತೃತ್ವದಲ್ಲಿ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿತ್ತು. ಕದನ ವಿರಾಮದ ನಿಯಮಗಳ ಪ್ರಕಾರ ಹಮಾಸ್ ಸುಮಾರು 2,000 ಪ್ಯಾಲೆಸ್ತೀನ್ ಅಪರಾಧಿಗಳು ಮತ್ತು ಯುದ್ಧಕಾಲದ ಬಂಧಿತರಿಗೆ ಪ್ರತಿಯಾಗಿ ಎಲ್ಲ ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿ ದಾಳಿಯನ್ನು ನಿಲ್ಲಿಸಿತ್ತು. ಈ ಮೂಲಕ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪ್ರಾರಂಭವಾದ ಯುದ್ಧ ಎರಡು ವರ್ಷಗಳ ಬಳಿಕ ನಿಂತಿತ್ತು.