ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Canada Election: ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿತ ಪಕ್ಷ NDPಗೆ ಹೀನಾಯ ಸೋಲು; ʻರಾಷ್ಟ್ರೀಯ ಪಕ್ಷʼ ಸ್ಥಾನಮಾನಕ್ಕೂ ಕುತ್ತು

Canada Election Results 2025: ಕೆನಡಾ ಚುನಾವಣೆಯಲ್ಲಿ ಖನಿಸ್ತಾನಿ ಪರ ಚಿಂತನೆ ಇರುವ ಜಗ್ಮೀತ್‌ ಸಿಂಗ್‌(Jagmeet Singh) ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಪಕ್ಷ (NDP) ಹೀನಾಯ ಸೋಲುಂಡಿದೆ, ಕೇವಲ 12 ಸ್ಥಾನಗಳನ್ನು ಗಳಿಸುವಲ್ಲಿಯೂ ವಿಫಲವಾಗಿರುವ NDP, ರಾಷ್ಟ್ರೀಯ ಸ್ಥಾನಮಾನ ಕಳೆದುಕೊಂಡಿದೆ.

ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿತ ಪಕ್ಷ NDPಗೆ ಹೀನಾಯ ಸೋಲು

Profile Rakshita Karkera Apr 29, 2025 9:52 AM

ಕೆನಡಾ: ಚುನಾವಣೆ ರಂಗೇರಿರುವ ಕೆನಡಾದಲ್ಲಿ ಸೋಮವಾರ ಮತದಾನ ಪೂರ್ಣಗೊಂಡಿದ್ದು,(Canada Election Results 2025) ಆಡಳಿತರೂಢ ಲಿಬರಲ್ಸ್‌ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದಲ್ಲಿ, ಲಿಬರಲ್ಸ್‌ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಆಗಿದೆ. ಈ ನಡುವೆ ಖನಿಸ್ತಾನಿ ಪರ ಚಿಂತನೆ ಇರುವ ಜಗ್ಮೀತ್‌ ಸಿಂಗ್‌(Jagmeet Singh) ನೇತೃತ್ವದ ನ್ಯೂ ಡೆಮಾಕ್ರಟ್‌ ಪಕ್ಷ (NDP) ಹೀನಾಯ ಸೋಲುಂಡಿದೆ, ಕೇವಲ 12 ಸ್ಥಾನಗಳನ್ನು ಗಳಿಸುವಲ್ಲಿಯೂ ವಿಫಲವಾಗಿರುವ NDP, ರಾಷ್ಟ್ರೀಯ ಸ್ಥಾನಮಾನ ಕಳೆದುಕೊಂಡಿದೆ. ಎನ್‌ಡಿಪಿ ಒಟ್ಟು 343 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಕೇವಲ 8ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ಇದರಿಂದ ಪಕ್ಷ ತೀವ್ರ ಮುಜುಗರಕ್ಕೀಡಾಗಿದೆ.

ಇನ್ನು ಬ್ರಿಟೀಷ್‌ ಕೊಲಂಬಿಯಾದ ಬರ್ನನೇ ಸೆಂಟ್ರಲ್‌ ರೈಡಿಂಗ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಗ್ಮೀತ್‌ ಸಿಂಗ್‌ ಕೂಡ ಭಾರೀ ಹಿನ್ನಡೆಯನ್ನು ಅನುಭವಿಸಿದ್ದಾರೆ. ಅವರು ಲಿಬಲರ್‌ ಪಕ್ಷದ ಅಭ್ಯರ್ಥಿ ವಾಡೆ ಚ್ಯಾಂಗ್‌ ಅವರಿಂದ 4,500 ಮತಗಳು ಮತ್ತು ಕನ್ಸರ್ವೇಟಿವ್‌ ಅಭ್ಯರ್ಥಿ ಜೇಮ್ಸ್‌ ಯಾನ್‌ ಅವರಿಂದ 3,356 ಮತಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಎನ್ನಲಾಗಿದೆ.

ಹಿಂದಿನ ಚುನಾವಣೆಯಲ್ಲಿ ಪಕ್ಷವು 24 ಸ್ಥಾನಗಳನ್ನು ಗಳಿಸಿತ್ತು. ಈ ಭಾರೀ ಕೇವಲ 8ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ. ಎನ್‌ಡಿಪಿ ನಾಯಕರಾದ ಜಗ್ಮೀತ್ ಸಿಂಗ್ ಅವರನ್ನು ಖಲಿಸ್ತಾನಿ ಬೆಂಬಲಿಗರೆಂದು ಗುರುತಿಸಲಾಗಿರುವುದರಿಂದ ಈ ಬೆಳವಣಿಗೆಯಿಂದ ಕೆನಡಾದಲ್ಲಿ ಖಾಲಿಸ್ತಾನ ಬೆಂಬಲಿಗರಿಗೆ ಬಹುದೊಡ್ಡ ಪಟ್ಟದ ಹೊಡೆತ ಎನ್ನಲಾಗಿದೆ. ಇನ್ನು ಕೆನಡಾದಲ್ಲಿ ಸಿಖ್‌ ಸಮುದಾಯ ಕೇವಲ ಶೇ.2ರಷ್ಟಿದ್ದು, ಇದು ಕೆನಡಾ ರಾಜಕೀಯ ವಲಯದ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಇದಕ್ಕೂ ಮುನ್ನ ಭಾರತದ ವಿರುದ್ಧ ಸಮರ ಸಾರಿದ್ದ ಅಂದಿನ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರಿಗೆ ಇದೇ ಜಗ್ಮೀತ್‌ ಸಿಂಗ್‌ ಅವರು ಪಕ್ಷ ಬೆಂಬಲ ಸೂಚಿಸಿತ್ತು.

ಈ ಸುದ್ದಿಯನ್ನೂ ಓದಿ: Canada Election: ಕೆನಡಾ ಚುನಾವಣೆ: ಮಾರ್ಕ್ ಕಾರ್ನಿ ಲಿಬರಲ್ ಪಕ್ಷಕ್ಕೆ ಆರಂಭಿಕ ಮುನ್ನಡೆ