ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cockroach Janta Party: ದೇಶದ ಗಡಿ ದಾಟಿದ ಜಿರಳೆ; ಪಾಕಿಸ್ತಾನಕ್ಕೂ ತಲುಪಿದ ಭಾರತದ ಕಾಕ್ರೋಚ್‌ ಚಳುವಳಿ

Cockroach Janata Party: ಭಾರತದ ಜಿರಳೆ ಇದೀಗ ಗಡಿ ದಾಟಿ ಪಾಕಿಸ್ತಾನಕ್ಕೆ ಕಾಲಿಟ್ಟಿದೆ. ಹೌದು, ಭಾರತದ ಜಿರಳೆ ಚಳುವಳಿಯ ಚರ್ಚೆ ಇದೀಗ ಪಾಕಿಸ್ತಾನ ಸೋಷಿಯಲ್‌ ಮೀಡಿಯಾದಲ್ಲೂ ನಡೆಯುತ್ತಿದೆ. ಪಾಕಿಸ್ತಾನಾದಲ್ಲಿ ಒಂದಲ್ಲ ಹಲವು ಕಾಕ್ರೋಚ್‌ ಪಕ್ಷ ಆರಂಭವಾಗಿದೆ.

ಕಾಕ್ರೋಚ್‌ ಅವಾಮಿ ಪಾರ್ಟಿಯ ಲೋಗೋ

ಇಸ್ಲಾಮಾಬಾದ್‌, ಮೇ 22: ಭಾರತದ ಜಿರಳೆ ಇದೀಗ ಗಡಿ ದಾಟಿ ಪಾಕಿಸ್ತಾನಕ್ಕೆ ಕಾಲಿಟ್ಟಿದೆ. ನಾವೀಗ ಹೇಳಹೊರಟಿರುವುದು ನಮ್ಮ-ನಿಮ್ಮ ಮನೆಗಳಲ್ಲಿ ಕಾಣ ಸಿಗುವ ಸಾಮಾನ್ಯ ಜಿರಳೆಯ ಬಗ್ಗೆಯಲ್ಲ. ಬದಲಾಗಿ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುವ ಜಿರಳೆ ಚಳುವಳಿಯ ಬಗ್ಗೆ. ಹೌದು, ವಿಡಂಬನೆಗಾಗಿ ಆರಂಭವಾದ ಕಾಕ್ರೋಚ್‌ ಜನತಾ ಪಾರ್ಟಿ (Cockroach Janata Party-CJP) ಇದೀಗ ಎಲ್ಲರ ಊಹೆಯನ್ನೂ ಮೀಡಿ ಸೋಷಿಯಲ್‌ ಮೀಡಿಯಾ ಸೆನ್ಸೇಷನ್‌ ಆಗಿ ಬದಲಾಗಿದೆ. ಇದೀಗ ಅಭಿಜಿತ್‌ ದಿಪ್ಕೆ (Abhijeet Dipke) ಎನ್ನುವ ಆಮ್‌ ಆದ್ಮಿ ಪಾರ್ಟಿಯ ಮಾಜಿ ಕಾರ್ಯಕರ್ತ ಆರಂಭಿಸಿದ ಈ ಸಿಜೆಪಿ ಇದೀಗ ಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿದೆ.

ಭಾರತದ ಜಿರಳೆ ಚಳುವಳಿಯ ಚರ್ಚೆ ಇದೀಗ ಪಾಕಿಸ್ತಾನ ಸೋಷಿಯಲ್‌ ಮೀಡಿಯಾದಲ್ಲೂ ನಡೆಯುತ್ತಿದೆ. ಪಾಕಿಸ್ತಾನಾದಲ್ಲಿ ಒಂದಲ್ಲ ಹಲವು ಕಾಕ್ರೋಚ್‌ ಪಕ್ಷ ಆರಂಭವಾಗಿದೆ. ಆ ಮೂಲಕ ಪಾಕಿಸ್ತಾನದ ಜೆನ್‌ ಝೀ ಮಧ್ಯೆ ಜಿರಳೆ ಹರಿದಾಡತೊಡಗಿದೆ.

ಪಾಕಿಸ್ತಾನದಲ್ಲಿ ಕಾಕ್ರೋಚ್‌ ಪಕ್ಷ

ಅಚ್ಚರಿ ಎಂದರೆ ಕಾಕ್ರೋಚ್‌ ಜನತಾ ಪಕ್ಷದ ಹಲವು ಮಾದರಿ ಪಾಕಿಸ್ತಾನದಲ್ಲಿ ಇದೀಗ ತಲೆ ಎತ್ತುತ್ತಿದೆ. ಕಾಕ್ರೋಚ್‌ ಅವಾಮಿ ಪಾರ್ಟಿ, ಕಾಕ್ರೋಚ್‌ ಅವಾಮಿ ಲೀಗ್‌ ಮತ್ತು ಮಟ್ಟಹಿದಾ ಕಾಕ್ರೋಚ್‌ ಮೂಮೆಂಟ್‌ ಆರಂಭವಾಗಿದೆ. ʼʼಪಾಕಿಸ್ತಾನಕ್ಕಾಗಿ ಯುವ ಜನತೆಯಿಂದ ಯುವಜನತೆಗಾಗಿ ರಾಜಕೀಯ ರಂಗʼʼ-ಇದು ಕಾಕ್ರೋಚ್‌ ಅವಾಮಿ ಪಾರ್ಟಿಯ ಘೋಷ ವಾಕ್ಯ. ವ್ಯವಸ್ಥೆ ಯಾರನ್ನು ಜಿರಳೆಗಳೆಂದು ಪರಿಗಣಿಸಿದೆಯೋ ಅವರ ಧ್ವನಿ ತಾನು ಎಂದೂ ಹೇಳಿಕೊಂಡಿದೆ.

ಪಾಕಿಸ್ತಾನದಲ್ಲೂ ಕಾಕ್ರೋಚ್‌ ಪಕ್ಷ:



ಕಾಕ್ರೋಚ್‌ ಅವಾಮಿ ಪಾರ್ಟಿಯ ಲೋಗೋ ಭಾರತದ ಕಾಕ್ರೋಚ್‌ ಜನತಾ ಪಾರ್ಟಿಯ ಚಿಹ್ನೆಯನ್ನು ಹೋಲುವಂತಿದೆ. ಇದು ಹಸಿರು-ಬಿಳಿ ಬಣ್ಣದ ಸಂಯೋಜನೆಯನ್ನು ಹೊಂದಿದೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಂತಾದ ರಾಜಕೀಯ ಶಕ್ತಿಗಳಿಗೆ ಪರ್ಯಾಯವಾಗಿ ಬೆಳೆದು ನಿಲ್ಲುತ್ತ ಎನ್ನುವುದನ್ನು ಕಾದು ನೋಡಬೇಕಿದೆ.

ಕಾಕ್ರೋಚ್‌ ಜನತಾ ಪಾರ್ಟಿಗೆ ಶೇಕಡ 80ರಷ್ಟು ಪಾಕಿಸ್ತಾನ, ಬಾಂಗ್ಲಾದೇಶದವರೇ ಫಾಲೋವರ್ಸ್‌; ಜಿರಳೆಯ ಹಿನ್ನೆಲೆ ಪತ್ತೆ ಹಚ್ಚಿದ ನೆಟ್ಟಿಗರು

ಕಾಕ್ರೋಚ್‌ ಜನತಾ ಪಾರ್ಟಿ ಆರಂಭವಾಗಿದ್ದು ಹೇಗೆ?

ಭಾರತದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಆರಂಭವಾಗಿದ್ದರ ಹಿಂದೆ ರೋಚಕ ಕಥೆ ಇದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಉಪಯೋಗಿಸಿದ ʼಜಿರಳೆʼ ಪದವನ್ನೇ ಬಳಸಿ ಈ ಕಾಕ್ರೋಚ್‌ ಜನತಾ ಪಾರ್ಟಿ ಆರಂಭಿಸಲಾಗಿದೆ. ಇತ್ತೀಚೆಗೆ ಹಿರಿಯ ವಕೀಲರ ಹುದ್ದೆಯ ಪದನಾಮಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಸೂರ್ಯಕಾಂತ್‌ ನೇತೃತ್ವದ ನ್ಯಾಯಪೀಠ, ʼʼಉದ್ಯೋಗ ಸಿಗದ ಕೆಲವು ಯುವಕರು ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾರೆ. ಅವರು ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಆರ್‌ಟಿಐ ಕಾರ್ಯಕರ್ತರ ರೂಪದಲ್ಲಿ ಜಿರಳೆಗಳಂತೆ ಎಲ್ಲರ ಮೇಲೆ ದಾಳಿ ಮಾಡುತ್ತಾರೆʼʼ ಎಂದು ಟೀಕಿಸಿತ್ತು.

ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಮುಚ್ಚಿಸಲು ಸರ್ಕಾರ ಸೂಚಿಸಿದ್ದೇಕೆ?

ಈ ಹೇಳಿಕೆಯನ್ನೇ ಆನ್‌ಲೈನ್‌ ಮಾಧ್ಯಮವಾಗಿ ಪರಿವರ್ತಿಸಿದ ದೀಪಕ್‌ ದಿಪ್ಕೆ ಕಾಕ್ರೋಚ್‌ ಜನತಾ ಪಾರ್ಟಿ ಹೆಸರಿನಲ್ಲಿ ಎಕ್ಸ್‌, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾರಂಭಿಸಿದ್ದರು. ಇದು ಜೆನ್‌ ಝೀ ಸಮುದಾಯದವರನ್ನು ಆಕರ್ಷಿಸಿತು. ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ಫಾಲೋವರ್ಸ್‌ ಗಳಿಸಿತು.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author