ಕಾಕ್ರೋಚ್ ಜನತಾ ಪಾರ್ಟಿಗೆ ಶೇಕಡ 80ರಷ್ಟು ಪಾಕಿಸ್ತಾನ, ಬಾಂಗ್ಲಾದೇಶದವರೇ ಫಾಲೋವರ್ಸ್; ಜಿರಳೆಯ ಹಿನ್ನೆಲೆ ಪತ್ತೆ ಹಚ್ಚಿದ ನೆಟ್ಟಿಗರು
Cockroach Janta Party: ಸದ್ಯ ಇಂಟರ್‌ನೆಟ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಇದರ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದವರೆಲ್ಲ ಇದೀಗ ಅನುಮಾನದಿಂದ ನೋಡ ತೊಡಗಿದ್ದಾರೆ. ಇದು ಟೂಲ್ ಕಿಟ್‌ನ ಭಾಗವೇ ಎನ್ನುವ ಅನುಮಾನ ಕಾಡತೊಡಗಿದೆ. ಈ ಬಗ್ಗೆ ವಿವರ ಇಲ್ಲಿದೆ.
ಸಿಜೆಪಿ ಲೋಗೋ -
ದೆಹಲಿ, ಮೇ 22: ಸದ್ಯ ದೇಶಾದ್ಯಂತ ಜಿರಳೆಯದ್ದೇ ಹಾವಳಿ. ಸೋಷಿಯಲ್ ಮೀಡಿಯಾ ತೆರೆದರೆ ಸಾಕು ವಿವಿಧ ಬಗೆಯ ಜಿರಳೆ ಕಣ್ಣಿಗೆ ರಾಚುತ್ತದೆ. ಹೌದು, ಸದ್ಯ ಇಂಟರ್‌ನೆಟ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party-CJP) ಭಾರಿ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಂತೂ ಐದೇ ದಿನಕ್ಕೆ ಬಿಜೆಪಿಯನ್ನು ಹಿಂದಿಕ್ಕಿ ಸಿಜೆಪಿ ಹೊಸ ದಾಖಲೆ ಬರೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಗೆ 87 ಲಕ್ಷ ಫಾಲೋವರ್ಸ್ ಇದ್ದರೆ, ಸಿಜೆಪಿಯ ಫಾಲೋವರ್ಸ್ ಐದೇ ದಿನಗಳಲ್ಲಿ 1.5 ಕೋಟಿ ದಾಟಿದೆ. ಸಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾದ ವಿಡಂಬನಾತ್ಮಕ ಅಭಿಯಾನವಾದರೂ ಮುಂದೊಂದು ದಿನ ದೇಶದ ರಾಜಕೀಯದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಬಹುದೇ ಎನ್ನುವ ಚರ್ಚೆಯೂ ಆರಂಭವಾಗಿದೆ. ಈ ಮಧ್ಯೆ ಸಿಜೆಪಿಯ ಉದ್ದೇಶದ ಬಗ್ಗೆಯೂ ಅನುಮಾನ ಮೂಡತೊಡಗಿದೆ.
ಆರಂಭದಲ್ಲಿ ಸಿಜೆಪಿಯ ಜನಪ್ರಿಯತೆಗೆ ಬೆರಗಾಗಿದ್ದ ನೆಟ್ಟಿರು ಇದೀಗ ಅದರ ಉದ್ದೇಶ, ಕಾರ್ಯ ವೈಖರಿಯತ್ತ ಅನುಮಾನ ವ್ಯಕ್ತಪಡಿಸತೊಡಗಿದ್ದಾರೆ. ದೇಶದ ವ್ಯವಸ್ಥೆಯಿಂದ ಬೇಸತ್ತ ಯುವ ಜನತೆ ಈ ಅಭಿಯಾನ ಆರಂಭಿಸಿದ್ದಾರೆ ಎಂದು ಹೇಳಲಾಗಿತ್ತಾದರೂ ಸದ್ಯ ಇದರ ಕಾರ್ಯ ವೈಖರಿ ಕೇಂದ್ರ ಸರ್ಕಾರದ ವಿರುದ್ಧವಾಗಿಯಷ್ಟೇ ಇರುವುದು ಹಲವರ ಅನುಮಾನಕ್ಕೆ ಕಾರಣವಾಗಿದೆ. ವ್ಯವಸ್ಥೆಯ ವಿರುದ್ಧ ಆಕ್ರೋಶವಾಗಿದ್ದರೆ ಎಲ್ಲ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಬೇಕಿತ್ತು. ಆದರೆ ಇದಕ್ಕೆ ವಿಪಕ್ಷ ನಾಯಕರು ಬೆಂಬಲ ಸೂಚಿಸುತ್ತಿದ್ದಾರೆ. ಅಲ್ಲದೆ ಸಿಜೆಪಿಯು ಬಿಜೆಪಿಯನ್ನು ಮಾತ್ರ ಗುರಿಯಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ಹಲವರ ವಾದ.
ಅಭಿಜಿತ್ ದಿಪ್ಕೆ ಎಕ್ಸ್ ಪೋಸ್ಟ್:
I know you are desperately trying to hack the account but since you have failed to do so. Let me share the real data.
— Abhijeet Dipke (@abhijeet_dipke) May 21, 2026
Why would you call 94% of Indian youth as Pakistanis? https://t.co/547NtEP934 pic.twitter.com/9DRTx6l96e
ನೆಟ್ಟಿಗರು ಹೇಳೋದೇನು?
ಸಿಜೆಪಿ ವಿಪಕ್ಷಗಳ ಟೂಲ್‌ಕಿಟ್‌ನ ಭಾಗ ಎನ್ನುತ್ತಾರೆ ಕೆಲವರು. ಅದಕ್ಕೆ ತಕ್ಕಂತೆ ಇದೀಗ ನೆಟ್ಟಿಗರು ಸಿಜೆಪಿಯ ಫಾಲೋವರ್ಸ್‌ಗಳಲ್ಲಿ ಶೇಕಡ 80ರಷ್ಟು ಮಂದಿ ಮುಸ್ಲಿಂ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿಯವರೇ ಇದ್ದಾರೆ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಹಲವರು ಸಿಜೆಪಿಯನ್ನು ವಿದೇಶಿಗರು ಅದರಲ್ಲಿ ಹೆಚ್ಚಾಗಿ ಪಾಕಿಸ್ತಾನದವರು ಫಾಲೋ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಸೌದಿ ಅರೇಬಿಯಾ ಮತ್ತು ಟರ್ಕಿಯ ಫಾಲೋವರ್ಸ್ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳುವ ಹಲವು ಪೋಸ್ಟ್‌ಗಳು ಸದ್ದು ಮಾಡುತ್ತಿವೆ. ಇನ್‌ಸ್ಟಗ್ರಾಮ್‌ನಲ್ಲಿ ಸಿಜೆಪಿಯ ಫಾಲೋವರ್ಸ್‌ಗಳಲ್ಲಿ ಶೇಕಡ 49ರಷ್ಟು ಮಂದಿ ಪಾಕಿಸ್ತಾನದವರು. ಅಮೆರಿಕ ಮತ್ತು ಬಾಂಗ್ಲಾದೇಶದ ಪ್ರಜೆಗಳು ಶೇಕಡ 14ರಷ್ಟಿದ್ದಾರೆ. ಭಾರತ-ಶೇಕಡ 9, ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ-ತಲಾ ಶೇಕಡ 3, ಯುಎಇ-ಶೇಕಡ 2ರಷ್ಟು ಮಂದಿ ಇದ್ದಾರೆ ಎನ್ನುವ ಪೋಸ್ಟ್ ವೈರಲ್ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಮುಚ್ಚಿಸಲು ಸರ್ಕಾರ ಸೂಚಿಸಿದ್ದೇಕೆ?
ಇದೊಂದು ದೊಡ್ಡ ಸಂಚು. ಪಾಕಿಸ್ತಾನ, ಅಮೆರಿಕ, ಬಾಂಗ್ಲಾದೇಶ ದೊಡ್ಡ ರಾಜತಾಂತ್ರಿಕ ಸಂಚು ರೂಪಿಸಿದೆ. ಮೋದಿ ಸರ್ಕಾರವದ ವಿರುದ್ಧ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನು ಯಾವ ಕಾರಣಕ್ಕೂ ಫಾಲೋ ಮಾಡಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಸದ್ಯ ಈ ಎಲ್ಲ ಆರೋಪಗಳಿಗೆ ಯಾವುದೇ ಸ್ವತಂತ್ರ ಹಾಗೂ ಅಧಿಕೃತ ಪರಿಶೀಲನೆ ಸಾರ್ವಜನಿಕವಾಗಿ ಲಭ್ಯವಾಗಿಲ್ಲದಿದ್ದರೂ ತೀವ್ರ ಸಂಚಲನ ಮೂಡಿಸಿದೆ.
ಸಿಜೆಪಿ ಕುರಿತಾದ ಎಕ್ಸ್ ಪೋಸ್ಟ್:
Supporters of the so-called new hope of the opposition (INDI Alliance)...CJP
— Rupsy Saini (@ZiviiBloom) May 21, 2026
all hype, zero ground reality.
And interestingly, a lot of their loudest cheerleaders don’t even seem to be from here… showing up from Pakistan, Bangladesh, Turkey, etc.
Anyway… not like they’re… pic.twitter.com/GhuRMFiyvp
ಅಲ್ಲದೆ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಮತ್ತು ಎಸ್‌ಡಿಪಿಐ ಮುಂತಾದ ಪಕ್ಷಗಳು ಸಿಜೆಪಿಗೆ ಸಹಾಯ ಮಾಡುತ್ತವೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಚ್ಚರಿ ಎಂದರೆ ಸಿಜೆಪಿಯನ್ನು ಹುಟ್ಟು ಹಾಕಿದ ಅಭಿಜಿತ್ ದಿಪ್ಕೆ ಮೊದಲು ಆಮ್ ಆದ್ಮಿ ಪಾರ್ಟಿಯಲ್ಲಿದ್ದರು. ಸದ್ಯ ಅವರು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ
ಸಿಜೆಪಿಯ ಫಾಲೋವರ್ಸ್‌ಗಳ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೆ ಅಭಿಜಿತ್ ದಿಪ್ಕೆ ಇದೀಗ ತಿರುಗೇಟು ನೀಡಿದ್ದಾರೆ. ಫಾಲೋವರ್ಸ್ ಪೈಕಿ ಭಾರತೀಯರು ಶೇಕಡ 94ರಷ್ಟಿದ್ದಾರೆ ಎಂದು ಅಭಿಜಿತ್ ದಿಪ್ಕೆ ಹೇಳಿದ್ದಾರೆ. ಒಟ್ಟಿನಲ್ಲಿ ಸದ್ಯ ಸಿಜೆಪಿ ಪರ-ವಿರೋಧ ಚರ್ಚೆ ಜೋರಾಗಿದೆ. ಮುಂದೆ ಇದು ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.