ಬಲೂಚಿಸ್ತಾನ: ಕಳೆದ 40 ಗಂಟೆಗಳಲ್ಲಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಾದ್ಯಂತ (Balochistan province) ನಡೆದ ಸಂಘಟಿತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ (counter-terrorism operations ) 145 ಭಯೋತ್ಪಾದಕರು, 17 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಬಲೂಚಿಸ್ತಾನ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ (Chief Minister Sarfaraz Bugti) ತಿಳಿಸಿದ್ದಾರೆ. ಕ್ವೆಟ್ಟಾದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಭಯೋತ್ಪಾದಕರ ಶವಗಳು ಪ್ರಸ್ತುತ ಅಧಿಕಾರಿಗಳ ವಶದಲ್ಲಿವೆ ಮತ್ತು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ನಡೆದ ಮಾರಕ ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದರು.
ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ, ಸಿಬಿ, ಗ್ವಾದರ್, ನೋಶ್ಕಿ ಮತ್ತು ಪಾಸ್ನಿ ಸೇರಿದಂತೆ ಹಲವು ಭಾಗಗಳಲ್ಲಿ ಭದ್ರತಾ ಪಡೆಗಳು ಭಯೋತ್ಪಾದನೆಯ ವಿರುದ್ಧ ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಅನಂತರ ಇದು ಅತ್ಯಂತ ಕಡಿಮೆ ಅವಧಿಯಲ್ಲಿ ನಡೆದ ಮಾರಕ ಕಾರ್ಯಾಚರಣೆಯಾಗಿದೆ. ಭಯೋತ್ಪಾದಕರೊಂದಿಗಿನ ಘರ್ಷಣೆಯಲ್ಲಿ ಕಾನೂನು ಜಾರಿ ಮತ್ತು ಭದ್ರತಾ ಪಡೆಗಳ 17 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬುಗ್ತಿ ತಿಳಿಸಿದರು.
ಬಲೂಚ್ ಮಹಿಳಾ ಆತ್ಮಾಹುತಿ ಬಾಂಬರ್ ಪಾಕಿಸ್ತಾನ ಸೇನೆ ಛಿದ್ರ-ಛಿದ್ರ; ಕಾರ್ಯಾಚರಣೆ ಕುರಿತು ನಾಯಕರು ಹೇಳಿದ್ದೇನು?
ಗುಪ್ತಚರ ಸಂಸ್ಥೆಗಳು ಕ್ವೆಟ್ಟಾವನ್ನು ಗುರಿಯಾಗಿಸಿಕೊಂಡು ನಡೆಯುವ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿತ್ತು. ಶನಿವಾರ ರಾತ್ರಿ 12 ವಿವಿಧ ಭಾಗಗಳಲ್ಲಿ ಪೊಲೀಸ್, ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿ ಸೇರಿದಂತೆ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ ಎಂದು ಬುಗ್ತಿ ತಿಳಿಸಿದ್ದಾರೆ.
ಪಂಜ್‌ಗುರ್ ಮತ್ತು ಶಾಬನ್ ಪ್ರದೇಶಗಳಲ್ಲಿ 41 ಭಯೋತ್ಪಾದಕರು ಸಾವನ್ನಪ್ಪಿದ ಬಳಿಕ ಕಳೆದ 40 ಗಂಟೆಗಳಲ್ಲಿ ಗ್ವಾದರ್‌ನಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳ ಹತ್ಯೆಯಾಗಿದೆ. ಭಯೋತ್ಪಾದಕರು ಭದ್ರತೆ ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಗುರಿ ಹೊಂದಿದ್ದಾರೆ. ಅವರಲ್ಲಿ ಕೆಲವರು ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.
ಬಲೂಚ್ ಲಿಬರೇಶನ್ ಆರ್ಮಿಯಂತಹ ದಂಗೆಕೋರ ಗುಂಪುಗಳೊಂದಿಗೆ ಮಾತುಕತೆ ಸಾಧ್ಯವಿಲ್ಲ. ಅವು ರಾಜಕೀಯ ಘಟಕಗಳಲ್ಲ ಎಂದು ಹೇಳಿದ ಅವರು, ಪಶ್ಚಾತ್ತಾಪಪಟ್ಟು ಅವರು ಶರಣಾದರೆ ಅವರನ್ನು ಸ್ವೀಕರಿಸಲು ಸರ್ಕಾರ ಮುಕ್ತವಾಗಿದೆ ಎಂದು ತಿಳಿಸಿದರು.
ದಂಗೆಕೋರ ಗುಂಪುಗಳು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಸುಳ್ಳು ಮಾಹಿತಿಯನ್ನು ಪ್ರಕ್ಚಾರ ಮಾಡುತ್ತಿದೆ. ಯುವಕರು ಮತ್ತು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಬುಗ್ತಿ ಆರೋಪಿಸಿದರು.
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ರಷ್ಯಾ ಡ್ರೋನ್ ದಾಳಿ; 15 ಉಕ್ರೇನಿಯನ್ನರು ಸಾವು
ಘಟನೆಯ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನ ಸೇನೆ, ಜನಾಂಗೀಯ ಬಲೂಚ್ ಉಗ್ರಗಾಮಿ ಗುಂಪುಗಳು ಶನಿವಾರ ಬಲೂಚಿಸ್ತಾನ ಪ್ರಾಂತ್ಯದಾದ್ಯಂತ ದಾಳಿಗಳನ್ನು ನಡೆಸಿದ ಬಳಿಕ ನಡೆಸಿದ ಹಲವು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಮಂದಿ ಸೈನಿಕರು ಮತ್ತು 92 ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಕ್ವೆಟ್ಟಾ, ಮಸ್ತುಂಗ್, ನುಷ್ಕಿ, ದಲ್ಬಂದಿನ್, ಖರನ್, ಪಂಜ್‌ಗುರ್, ಟಂಪ್, ಗ್ವಾದರ್ ಮತ್ತು ಪಾಸ್ನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉಗ್ರಗಾಮಿಗಳು ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಮೂವರು ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ 92 ಭಯೋತ್ಪಾದಕರನ್ನು ಪಾಕಿಸ್ತಾನ ಸೇನೆಯು ಕೊಂದು ಹಾಕಿತ್ತು. ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಕಾರ್ಮಿಕರು ಸೇರಿದಂತೆ 18 ನಾಗರಿಕರು ಕೂಡ ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.