ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ರಷ್ಯಾ ಡ್ರೋನ್‌ ದಾಳಿ; 15 ಉಕ್ರೇನಿಯನ್ನರು ಸಾವು

ಉಕ್ರೇನ್‌ನ ಪಾವ್ಲೋಹ್ರಾಡ್ ಜಿಲ್ಲೆಯಲ್ಲಿ ಶನಿವಾರ ರಷ್ಯಾ ಡ್ರೋನ್‌ ಮೂಲಕ ದಾಳಿ ನಡೆಸಿದ್ದು, ಡ್ರೋನ್ ಗಣಿಗಾರರನ್ನು ಸಾಗಿಸುತ್ತಿದ್ದ ಸರ್ವಿಸ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ.

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ರಷ್ಯಾ ಡ್ರೋನ್‌ ದಾಳಿ

ಸಂಗ್ರಹ ಚಿತ್ರ -

Vishakha Bhat
Vishakha Bhat Feb 2, 2026 9:12 AM

ಕೀವ್‌: ಉಕ್ರೇನ್‌ನ ಪಾವ್ಲೋಹ್ರಾಡ್ ಜಿಲ್ಲೆಯಲ್ಲಿ ಶನಿವಾರ ರಷ್ಯಾ ಡ್ರೋನ್‌ ಮೂಲಕ ದಾಳಿ ನಡೆಸಿದ್ದು, ಡ್ರೋನ್ ಗಣಿಗಾರರನ್ನು ಸಾಗಿಸುತ್ತಿದ್ದ (Russia-Ukraine War) ಸರ್ವಿಸ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ. X ನಲ್ಲಿ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ದಾಳಿಯ ಬಳಿಕ ತೀವ್ರವಾಗಿ ಬೆಂಕಿ ಹತ್ತಿಕೊಂಡಿತು. ಆದರೆ ಅಗ್ನಿಶಾಮಕ ದಳದವರು ಅದನ್ನು ತಕ್ಷಣವೇ ನಂದಿಸಿದರು.

"ಪಾವ್ಲೋಹ್ರಾದ್ ಜಿಲ್ಲೆಯಲ್ಲಿ ಕಂಪನಿಯ ಸರ್ವಿಸ್ ಬಸ್ ಮೇಲೆ ರಷ್ಯಾದ ಡ್ರೋನ್ ದಾಳಿ ಮಾಡಿದೆ! ಪ್ರಾಥಮಿಕ ವರದಿಗಳು 15 ಜನರು ಸಾವನ್ನಪ್ಪಿದ್ದಾರೆ ಎಂದು ಸೂಚಿಸುತ್ತವೆ. ಇತರ ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಕಿ ಕಾಣಿಸಿಕೊಂಡಿತು, ಅದನ್ನು ಅಗ್ನಿಶಾಮಕ ದಳದವರು ನಂದಿಸಿದರು" ಎಂದು ತುರ್ತು ಸೇವೆ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ. ಡಿಟಿಇಕೆ ಕಲ್ಲಿದ್ದಲು ಘಟಕದ ಬಳಿ ಕಂಪನಿಯ ಬಸ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಡಿಟಿಇಕೆ ಸಿಇಒ ಮ್ಯಾಕ್ಸಿಮ್ ಟಿಮ್ಚೆಂಕೊ ಈ ಘಟನೆಯನ್ನು "ಸಂಪೂರ್ಣವಾಗಿ ನಾಗರಿಕ ಗುರಿಯ ಮೇಲೆ ನಡೆದ ಅಪ್ರಚೋದಿತ ಭಯೋತ್ಪಾದಕ ದಾಳಿ" ಎಂದು ಬಣ್ಣಿಸಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಡ್ನಿಪ್ರೊ ಪ್ರದೇಶದಲ್ಲಿ, ರಷ್ಯಾದ ಡ್ರೋನ್‌ಗಳು ಗಣಿಗಾರರನ್ನು ಸಾಗಿಸುತ್ತಿದ್ದ ಸಾಮಾನ್ಯ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅನೇಕ ಜನರು ಸಾವನ್ನಪ್ಪಿದರು. ಎಲ್ಲಾ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು" ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಮುಂದಿನ ವಾರ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಗಳು ನಡೆಯಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ನಿ ತಿಳಿಸಿದ್ದಾರೆ. ಆದರೆ, ಒಂದು ಕಡೆ ಮಾತುಕತೆಯ ಭರವಸೆ ನೀಡುತ್ತಿರುವಾಗಲೇ ಮತ್ತೊಂದೆಡೆ ಅಮಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ದಾಳಿಗಳು ಶಾಂತಿ ಸ್ಥಾಪನೆಗೆ ಅಡ್ಡಿಯಾಗುವ ಆತಂಕ ಮೂಡಿಸಿವೆ.

ಯುದ್ಧ ನಿಲ್ಲಿಸದಿದ್ದರೆ ಮೂರನೇ ಮಹಾಯುದ್ಧ ಫಿಕ್ಸ್‌; ರಷ್ಯಾ- ಉಕ್ರೇನ್‌ಗೆ ನೇರ ಎಚ್ಚರಿಕೆ ಕೊಟ್ಟ ಟ್ರಂಪ್‌

ನಾಲ್ಕು ವರ್ಷಗಳ ಬಳಿಕ ರಷ್ಯಾವು ಉಕ್ರೇನ್ ಅಧ್ಯಕ್ಷರನ್ನು ಶಾಂತಿ ಮಾತುಕತೆಗಾಗಿ ಆಹ್ವಾನಿಸಿದೆ. 2022ರ ಫೆಬ್ರವರಿ 24ರಂದು ಪ್ರಾರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೂ ಒಂದು ಮುಕ್ತಾಯ ಹಂತ ತಲುಪುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್ ಯುದ್ಧ ಕೊನೆಗೊಳಿಸಲು ಅಮೆರಿಕ ತೀವ್ರ ಪ್ರಯತ್ನ ನಡೆಸುತ್ತಿದೆ. ಇದೀಗ ಉಕ್ರೇನ್ ಅನ್ನು ರಷ್ಯಾ ಶಾಂತಿ ಮಾತುಕತೆಗೆ ಆಹ್ವಾನಿಸಿದೆ.