Shehbaz Sharif: ಹಿಂದೂ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು; ದೀಪಾವಳಿಗೆ ವಿಶ್ ಮಾಡಿದ ಪಾಕ್ ಪ್ರಧಾನಿ!
ಇಡೀ ದೇಶದಾದ್ಯಂತ ದೀಪಾವಳಿಯನ್ನು (Deepavali) ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿವಿಧ ದೇಶದ ನಾಯಕರು ಬೆಳಕಿನ ಹಬ್ಬಕ್ಕೆ ಭಾರತೀಯರಿಗೆ ಶುಭ ಕೋರಿದ್ದಾರೆ. ವಿಷೇಶವೇನೆಂದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಹ ದೀಪಾವಳಿಯ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

-

ಇಸ್ಲಾಮಾಬಾದ್: ಇಡೀ ದೇಶದಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿವಿಧ ದೇಶದ ನಾಯಕರು ಬೆಳಕಿನ ಹಬ್ಬಕ್ಕೆ ಭಾರತೀಯರಿಗೆ ಶುಭ ಕೋರಿದ್ದಾರೆ. ವಿಷೇಶವೇನೆಂದರೆ ಪಾಕಿಸ್ತಾನದ (pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಸಹ ದೀಪಾವಳಿಯ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಶೆಹಬಾಜ್ ಷರೀಫ್ ಕೂಡ ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದರು.
"ದೀಪಾವಳಿಯ ಶುಭ ಸಂದರ್ಭದಲ್ಲಿ, ಪಾಕಿಸ್ತಾನ ಮತ್ತು ಪ್ರಪಂಚದಾದ್ಯಂತದ ನಮ್ಮ ಹಿಂದೂ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಮನೆಗಳು ಮತ್ತು ಹೃದಯಗಳು ದೀಪಾವಳಿಯ ಬೆಳಕಿನಿಂದ ಬೆಳಗುತ್ತಿರುವಂತೆ, ಈ ಹಬ್ಬವು ಕತ್ತಲೆಯನ್ನು ಹೋಗಲಾಡಿಸಿ, ಸಾಮರಸ್ಯವನ್ನು ಬೆಳೆಸಲಿ ಮತ್ತು ಶಾಂತಿ, ಸಹಾನುಭೂತಿ ಮತ್ತು ಹಂಚಿಕೆಯ ಸಮೃದ್ಧಿಯ ಭವಿಷ್ಯದತ್ತ ನಮ್ಮೆಲ್ಲರನ್ನೂ ಮಾರ್ಗದರ್ಶಿಸಲಿ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
On the auspicious occasion of Diwali, I extend my heartfelt greetings to our Hindu community in Pakistan and around the world.
— Shehbaz Sharif (@CMShehbaz) October 20, 2025
As homes and hearts are illuminated with the light of Diwali, may this festival dispel darkness, foster harmony, and guide us all toward a future of…
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಕೂಡ ದೀಪಾವಳಿ ಶುಭಾಶಯಗಳನ್ನು ಕೋರಿದರು. "ಇಂದು ರಾತ್ರಿ, ಕೆನಡಾದಾದ್ಯಂತ ಕುಟುಂಬಗಳು ಮತ್ತು ಸಮುದಾಯಗಳು ದೀಪಗಳನ್ನು ಬೆಳಗಿಸಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಆಚರಿಸುತ್ತವೆ - ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ. ದೀಪಾವಳಿಯನ್ನು ಆಚರಿಸುವ ಎಲ್ಲರಿಗೂ ಬೆಳಕಿನ ಹಬ್ಬವನ್ನು ಸಂತೋಷದಿಂದ ಆಚರಿಸಲಿ ಎಂದು ಹಾರೈಸುತ್ತೇನೆ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Deepavali 2025: ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ದೀಪಾವಳಿಗೆ ಶುಭ ಹಾರೈಸಿದ ವಿಶ್ವ ನಾಯಕರು
"ನನ್ನ ಸ್ನೇಹಿತ ನರೇಂದ್ರ ಮೋದಿ ಮತ್ತು ಭಾರತದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು! ಬೆಳಕಿನ ಹಬ್ಬವು ನಿಮ್ಮ ಮಹಾನ್ ರಾಷ್ಟ್ರಕ್ಕೆ ಭರವಸೆ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಇಸ್ರೇಲ್ ಮತ್ತು ಭಾರತ ಒಟ್ಟಾಗಿ ನಿಲ್ಲುತ್ತವೆ - ನಾವೀನ್ಯತೆ, ಸ್ನೇಹ, ರಕ್ಷಣೆ ಮತ್ತು ಉಜ್ವಲ ಭವಿಷ್ಯದಲ್ಲಿ ಪಾಲುದಾರರು," ಎಂದು ಅವರು ಹೇಳಿದರು. ದುಬೈ ಆಡಳಿತಗಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಯುಎಇ ಮತ್ತು ಪ್ರಪಂಚದಾದ್ಯಂತ ದೀಪಾವಳಿ ಆಚರಿಸುವ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ.