Longest Road: 14 ದೇಶಗಳ ಮೂಲಕ ಹಾದು ಹೋಗುವ ವಿಶ್ವದ ಅತ್ಯಂತ ಉದ್ದದ ರಸ್ತೆ; 30,600 ಕಿ.ಮೀ. ನೋ ಯೂ ಟರ್ನ್!
ದೇಶದ ಅತೀ ಉದ್ದದ ರಸ್ತೆ(Longest Road) ನಿರ್ಮಿಸಿ ದಾಖಲೆ ಬರೆದಿರುವ ಭಾರತದ ರಾಷ್ಟ್ರೀಯ ಹೆದ್ದಾರಿ 44 (National Highway 44)ಕ್ಕಿಂತಲೂ ಉದ್ದದ ರಸ್ತೆಯೊಂದು ವಿಶ್ವದಲ್ಲಿದೆ. ಇದನ್ನು ಹಲವು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. 30,600 ಕಿ.ಮೀ. ಉದ್ದ ಹೊಂದಿರುವ ಈ ರಸ್ತೆ 14 ದೇಶಗಳ ಮೂಲಕ ಹಾದು ಹೋಗುತ್ತದೆ. ಆ ದೇಶಗಳು ಯಾವುವು? ಆ ರಸ್ತೆ ಎಲ್ಲಿದೆ ಗೊತ್ತೆ?


ಬೆಂಗಳೂರು: ಅತೀ ಉದ್ದದ ರಸ್ತೆ ನಿರ್ಮಾಣ ಕಾರ್ಯದಲ್ಲಿ ಹಲವಾರು ದೇಶಗಳು ಪ್ರಸಿದ್ದಿ ಪಡೆದಿದ್ದರೂ ಭಾರತವು ಇದರಲ್ಲಿ ಸ್ಥಾನ ಪಡೆದಿದೆ. ದೇಶದ ಅತಿ ಉದ್ದದ ರಸ್ತೆಯಾಗಿ(World's Longest Road) ರಾಷ್ಟ್ರೀಯ ಹೆದ್ದಾರಿ 44 ವಿಶ್ವದಲ್ಲೇ ಗುರುತಿಸಿಕೊಂಡಿದೆ. ಆದರೆ ಇದಕ್ಕಿಂತಲೂ ಹೆಚ್ಚು ಉದ್ದವಿರುವ ರಸ್ತೆಯೂ ಇದೆ. ಇದನ್ನು ಹಲವು ದಶಕಗಳ ಹಿಂದೆಯೇ ನಿರ್ಮಿಸಲಾಗಿತ್ತು ಎಂಬುದು ವಿಶೇಷ. ಸುಮಾರು 30,600 ಕಿ.ಮೀ. ಉದ್ದವಿರುವ ಈ ರಸ್ತೆಯ ಮೂಲಕ 14 ದೇಶಗಳನ್ನು ನೋಡಬಹುದು. ಆದರೆ ಈ ರಸ್ತೆಯ ಮೂಲಕ ಮುಂದೆ ಸಾಗುತ್ತೇವೆ ಅದು ಯಾವುದೇ ಯೂಟರ್ನ್ ತೆಗೆದುಕೊಳ್ಳದೆ ಎಂಬುದು ವಿಶೇಷ.
ದೇಶದ ಅತಿ ಉದ್ದದ ರಸ್ತೆ ಎಂಬ ವಿಶ್ವ ಖ್ಯಾತಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ 44 ಗುರುತಿಸಿಕೊಂಡಿದೆ. ಇದು 4,112 ಕಿಲೋ ಮೀಟರ್‌ಗಳನ್ನು ವ್ಯಾಪಿಸಿದೆ. ಇದಕ್ಕಿಂತಲೂ ಉದ್ದದ ರಸ್ತೆ ವಿಶ್ವದಲ್ಲಿ ಇದೆ. ಅದುವೇ ಪ್ಯಾನ್-ಅಮೆರಿಕನ್ ಹೆದ್ದಾರಿ.
30,600 ಕಿಲೋ ಮೀಟರ್ ವಿಸ್ತರಿಸಿರುವ ಪ್ಯಾನ್ ಅಮೆರಿಕನ್ ಹೆದ್ದಾರಿಯು ವಿಶ್ವದ ಅತಿ ಉದ್ದದ ರಸ್ತೆಯಾಗಿದೆ. ಇದು ಅಮೆರಿಕನ್ ಖಂಡಗಳ ವಿವಿಧ ದೇಶಗಳ ಮೂಲಕ ಹಾದುಹೋಗುತ್ತದೆ. ಇದರ ಆರಂಭ ಅಲಾಸ್ಕಾದ ಪ್ರುಧೋ ಕೊಲ್ಲಿಯಲ್ಲಿದ್ದರೆ ಅಂತ್ಯ ದಕ್ಷಿಣ ಅಮೆರಿಕಾದ ದಕ್ಷಿಣ ತುದಿಯಲ್ಲಿರುವ ಅರ್ಜೆಂಟೀನಾದ ಉಶುಯಾನಲ್ಲಿ ಇದೆ. ಈ ದಾರಿಯಲ್ಲಿ 14 ದೇಶಗಳನ್ನು ಸುತ್ತಬಹುದು. ಆದರೆ ಇದರ ವೈಶಿಷ್ಟ್ಯವೆಂದರೆ ಈ ದಾರಿಯಲ್ಲಿ ಸಾಗುವ ಪ್ರಯಾಣಿಕರು ಎಲ್ಲಿಯೂ ಯು ಟರ್ನ್ ಪಡೆಯದೆ 14 ದೇಶಗಳನ್ನು ಸುತ್ತಬಹುದು.

ಎಂಜಿನಿಯರಿಂಗ್‌ನ ಅದ್ಬುತ ಈ ರಸ್ತೆ
1920ರ ದಶಕದ ಆರಂಭದಲ್ಲಿ ಅಮೆರಿಕಾದಾದ್ಯಂತ ಪ್ರವಾಸೋದ್ಯಮ ಮತ್ತು ಸಂಪರ್ಕವನ್ನು ಉತ್ತೇಜಿಸಲು ಪ್ಯಾನ್-ಅಮೆರಿಕನ್ ಹೆದ್ದಾರಿಯನ್ನು ನಿರ್ಮಿಸಲಾಗಿತ್ತು. 1937ರ ವೇಳೆಗೆ ಈ ಯೋಜನೆಗೆ 14 ರಾಷ್ಟ್ರಗಳು ಸಾಥ್ ನೀಡಿದವು. ಹೀಗಾಗಿ ಈ ರಸ್ತೆಯನ್ನು 1960ರ ವೇಳೆಗೆ ಸಂಚಾರಕ್ಕೆ ಬಳಸಲು ಪ್ರಾರಂಭಿಸಲಾಯಿತು.
ಈ ರಸ್ತೆಯು ಕೆನಡಾ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ, ಗ್ವಾಟೆಮಾಲಾ, ಎಲ್ ಸಾಲ್ವಡಾರ್, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ, ಕೊಲಂಬಿಯಾ, ಈಕ್ವೆಡಾರ್, ಪೆರು, ಚಿಲಿ ಮತ್ತು ಅರ್ಜೆಂಟೀನಾ ಮೂಲಕ ಹಾದುಹೋಗುತ್ತವೆ. ತನ್ನ ಭಾಗದ ಹೆದ್ದಾರಿಯ ನಿರ್ವಹಣೆಯನ್ನು ಆಯಾಯ ರಾಷ್ಟ್ರಗಳ ಜವಾಬ್ದಾರಿಯಾಗಿದೆ.
ಇದು ಕೇವಲ ಸಾರಿಗೆ ಮಾತ್ರವಲ್ಲ ಪ್ರಯಾಣಿಕರಿಗೆ ವಿಶ್ವದ ಅತ್ಯಂತ ವೈವಿಧ್ಯಮಯ ಭೂದೃಶ್ಯಗಳ ಅನುಭವವನ್ನು ಕೊಡುತ್ತದೆ. ಈ ರಸ್ತೆಯಲ್ಲಿ ಸಾಗುವಾಗ ಹಿಮದಿಂದ ಆವೃತವಾದ ಪರ್ವತಗಳು, ಮರುಭೂಮಿ, ಹಚ್ಚ ಹಸಿರಿನ ಕಾಡುಗಳು, ಕರಾವಳಿ ಪ್ರದೇಶಗಳನ್ನು ಕಣ್ತುಂಬಿಕೊಳ್ಳಬಹುದು.
ದಿನಕ್ಕೆ 500 ಕಿಲೋಮೀಟರ್ ವೇಗದಲ್ಲಿ ಈ ರಸ್ತೆಯ ಪೂರ್ಣ ಪ್ರಯಾಣ ಮಾಡಲು ಎರಡು ತಿಂಗಳು ಬೇಕಾಗುತ್ತದೆ. ಇದರಲ್ಲಿ ಕಠಿಣ ತಿರುವುಗಳು, ಅಡ್ಡದಾರಿಗಳು ಇಲ್ಲ. ಇದು ಕೇವಲ ಉದ್ದವಾದ ರಸ್ತೆ ಮಾತ್ರವಲ್ಲ ನೇರ ಹೆದ್ದಾರಿಗಳಲ್ಲಿ ಒಂದಾಗಿದೆ.