Donald Trump: ಶ್ವೇತಭವನದ ಟೆರೇಸ್ ಮೇಲೆ ಕ್ಷಿಪಣಿ ಸ್ಥಾಪನೆ..? ರಷ್ಯಾಗೆ ಟಾಂಗ್ ಕೊಟ್ರಾ ಟ್ರಂಪ್?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮಂಗಳವಾರ ಶ್ವೇತಭವನದ ಟೆರೇಸ್ ಮೇಲೆ ಕ್ಷಿಪಣಿಗಳನ್ನು ಸ್ಥಾಪಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿ ಪರೋಕ್ಷವಾಗಿ ರಷ್ಯಾಕ್ಕೆ ಟಾಂಗ್ ನೀಡಿದರು. ಅನಿರೀಕ್ಷಿತವಾಗಿ ಅವರು ಶ್ವೇತಭವನದ ಟೆರೇಸ್ ಮೇಲೆ ಬಂದಿದ್ದು, ಕೆಲವರಲ್ಲಿ ಅಚ್ಚರಿ ಮೂಡಿಸಿತ್ತು. ಹೀಗಾಗಿ ಈ ಬಗ್ಗೆ ಪ್ರಶ್ನಿಸಿದವರಿಗೆ ಅವರು ಈ ರೀತಿ ಹಾಸ್ಯ ಮಾಡಿದರು.

-

ವಾಷಿಂಗ್ಟನ್: ರಷ್ಯಾದೊಂದಿಗಿನ (Russia) ಉದ್ವಿಗ್ನತೆಯ ನಡುವೆ ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಅವರು ಶ್ವೇತಭವನದ (White House) ಟೆರೇಸ್ ಮೇಲೆ ಕ್ಷಿಪಣಿಗಳನ್ನು ಸ್ಥಾಪಿಸುವ ವ್ಯವಸ್ಥೆ ಮಾಡಬೇಕು ಎಂದು ಪರೋಕ್ಷವಾಗಿ ರಷ್ಯಾಕ್ಕೆ ಟಾಂಗ್ ನೀಡಿದರು. ಮಂಗಳವಾರ ಶ್ವೇತಭವನದ ಟೆರೇಸ್ ಅಂಗರಕ್ಷಕರು, ಸ್ನೈಪರ್‌ಗಳೊಂದಿಗೆ ಕಾಣಿಸಿಕೊಂಡ ಅವರು, ಅಲ್ಲಿ ಸುಮಾರು 20 ನಿಮಿಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಅವರು ಪ್ರಸ್ತಾವಿತತ ಹೊಸ ಬಾಲ್ ರೂಂನ ಸ್ಥಳವನ್ನು ಕೂಡ ಪರಿಶೀಲನೆ ನಡೆಸಿದರು.
ಅನಿರೀಕ್ಷಿತವಾಗಿ ಮಂಗಳವಾರ ಟ್ರಂಪ್ ಅವರು ಶ್ವೇತಭವನದ ಟೆರೇಸ್ ಗೆ ಬಂದು ಅಲ್ಲಿ ಕೆಲ ಕ್ಷಣಗಳನ್ನು ಕಳೆದರು. ರಷ್ಯಾದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಅವರು ಇಲ್ಲಿ ಪರಮಾಣು ಕ್ಷಿಪಣಿಗಳನ್ನು ಸ್ಥಾಪಿಸುವ ಬಗ್ಗೆ ಹಾಸ್ಯ ಮಾಡಿದರು. ಅಂಗರಕ್ಷಕರು ಮತ್ತು ಸ್ನೈಪರ್‌ಗಳ ರಕ್ಷಣೆಯಲ್ಲಿ ಅವರು ತಮ್ಮ ಪ್ರಸ್ತಾವಿತ ಹೊಸ ಬಾಲ್ ರೂಂನ ಸ್ಥಳವನ್ನು ಕೂಡ ಪರಿಶೀಲಿಸಿದರು.
ಟ್ರಂಪ್ ಅವರು ಟೆರೇಸ್ ಮೇಲೆ ಏಕೆ ಬಂದಿದ್ದಾರೆ ಎಂದು ಕೆಲವರು ಪ್ರಶ್ನೆಗೆ ಅವರು, ಸ್ವಲ್ಪ ನಡೆಯುತ್ತಿರುವುದಾಗಿ ಹೇಳಿದರು. ಮತ್ತೆ ಕೆಲವರು ಏನು ನಿರ್ಮಿಸಲು ಉದ್ದೇಶಿಸಿದ್ದೀರಿ ಎಂದು ಪ್ರಶ್ನಿಸಿದಾಗ, ನಾನೇ ಶಸ್ತ್ರಾಸ್ತ್ರವನ್ನು ಉಡಾಯಿಸಲು ಪರಮಾಣು ಕ್ಷಿಪಣಿಗಳನ್ನುಇಲ್ಲಿ ಸ್ಥಾಪಿಸುವ ವ್ಯವಸ್ಥೆ ಮಾಡಬೇಕು ಎಂದುಕೊಂಡಿದ್ದೇನೆ ಎಂದು ತಮಾಷೆ ಮಾಡಿದರು.
ಇತ್ತೀಚಿನ ಕೆಲವು ದಿನಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾ ನಡುವೆ ತೀವ್ರ ವಾಗ್ವಾದಗಳು ಉಂಟಾಗಿವೆ. ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರ ಪ್ರಚೋದನಕಾರಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್, ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ರಷ್ಯಾದ ಬಳಿ ನಿಯೋಜಿಸಲು ಆದೇಶಿಸಿದರು.
Donald Trump has been taking questions from the press from the roof at the White House! Gotta love this guy! pic.twitter.com/1B4oFxW4hr
— The Crypto Guvnor (@TheCryptoGuvnor) August 5, 2025
ಬಾಲ್ ರೂಮ್ ಯೋಜನೆ
ಶ್ವೇತ ಭವನದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಟ್ರಂಪ್ ಸುಮಾರು 200 ಮಿಲಿಯನ್ ಡಾಲರ್ ವೆಚ್ಚದಲ್ಲಿ ಬಾಲ್ ರೂಂ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಅವರು ಪ್ರಸಿದ್ಧ ರೋಸ್ ಗಾರ್ಡನ್, ಓವಲ್ ಕಚೇರಿಯನ್ನು ನವೀಕರಣಗೊಳಿಸಿದ್ದಾರೆ. ಇತ್ತೀಚೆಗೆ ಅವರು ಬಾಲ್ ರೂಂ ಯೋಜನೆಯನ್ನು ಪ್ರಕಟಿಸಿದರು. ಇದು ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿನ ಒಂದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಖಾಸಗಿ ದಾನಿಗಳ ಸಹಾಯದಿಂದ ಇದನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರೂ ಎಲ್ಲಾ ಕೆಲಸಗಳಿಗೆ ತಾನು ಪಾವತಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Transport Workers Strike: ಸಾರಿಗೆ ಮುಷ್ಕರ ಮಾಡಿದ್ದ ನೌಕರರಿಗೆ ಶಾಕ್; ನಿಗಮಗಳಿಂದ ನೋಟಿಸ್
ಇದು ದೇಶಕ್ಕಾಗಿ ನನ್ನ ಹಣವನ್ನು ಖರ್ಚು ಮಾಡಲು ಮತ್ತೊಂದು ಮಾರ್ಗವಾಗಿದೆ ಎಂದು ಅವರು ಮಂಗಳವಾರ ಹೇಳಿದರು.