ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡ ಯುವತಿ; ಕಾರಣ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ

ಮಾದಕ ವ್ಯಸನಿಯಾಗಿದ್ದ ಯುವತಿಯೊಬ್ಬಳು ತನ್ನ ಜೀವನವನ್ನು ತಾನೇ ಕತ್ತಲೆ ಕೂಪಕ್ಕೆ ತಳ್ಳಿದ ಘಟನೆ ಇದು. ಒಂದು ಕಾಲದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಮತ್ತು ನ್ಯಾಷನಲ್ ಆನರ್ ಸೊಸೈಟಿಯ ಸದಸ್ಯೆಯಾಗಿದ್ದ ಮುತಾರ್ಟ್, ಮಾದಕ ವ್ಯಸನ ಮತ್ತು ಮಾನಸಿಕ ಒತ್ತಡದಿಂದ ತನ್ನ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.

ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡ ಯುವತಿ!

-

Priyanka P Priyanka P Aug 30, 2025 7:59 PM

ವಾಷಿಂಗ್ಟನ್: ಮಾದಕ ವ್ಯಸನ ಎಷ್ಟೊಂದು ಕೆಟ್ಟದ್ದು ಎಂಬುದನ್ನು ಜಗತ್ತಿಗೆ ಸಾರುವ ಸ್ಟೋರಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಾದಕ ವ್ಯಸನಿಯಾಗಿದ್ದ (Drug addiction) ಯುವತಿಯೊಬ್ಬಳು ತನ್ನ ಜೀವನವನ್ನು ತಾನೇ ಕತ್ತಲ ಕೂಪಕ್ಕೆ ತಳ್ಳಿದ ಘಟನೆ ನಡೆದಿದೆ. ಅಮೆರಿಕದ ಕೈಲಿ ಮುಥಾರ್ಟ್ ಎಂಬ 20 ವರ್ಷದ ಯುವತಿ ತನ್ನ ಜೀವಕ್ಕೆ ಸಂಚಕಾರ ತಂದೊಡ್ಡಿದ್ದಾಳೆ. ತಾನು ತ್ಯಾಗ ಮಾಡುತ್ತಿದ್ದೇನೆ ಎಂದು ನಂಬಿ ಚರ್ಚ್‌ನ ಹೊರಗೆ ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡಿದ್ದಾಳೆ.

ಒಂದು ಕಾಲದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಮತ್ತು ನ್ಯಾಷನಲ್ ಆನರ್ ಸೊಸೈಟಿಯ ಸದಸ್ಯೆಯಾಗಿದ್ದ ಮುತಾರ್ಟ್, ಮಾದಕ ವ್ಯಸನ ಮತ್ತು ಮಾನಸಿಕ ಒತ್ತಡದಿಂದ ತನ್ನ ಜೀವನವನ್ನು ಸಂಪೂರ್ಣವಾಗಿ ತನ್ನ ಕೈಯಾರೆ ಹಾಳುಮಾಡಿಕೊಂಡಿದ್ದಾಳೆ. 17ನೇ ವಯಸ್ಸಿನಲ್ಲಿ, ಹಣ ಸಂಪಾದಿಸುವುದಕ್ಕಾಗಿ ಶಾಲೆಯನ್ನು ತೊರೆದಳು. ಆದರೆ 19ನೇ ವಯಸ್ಸಿನಲ್ಲಿ ಸಹವಾಸ ದೋಷದಿಂದ ಮಾದಕ ದ್ರವ್ಯ ವ್ಯಸನಿಯಾದಳು.

ಮುತಾರ್ಟ್ ಪರಿಸ್ಥಿತಿ ತಾಯಿಗೆ ಅರಿವಾದಾಗ ಕೂಡಲೇ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಪ್ರಯತ್ನಿಸಿದರು. ಅತಿಯಾದ ಪ್ರಮಾಣದ ಮಾದಕ ದ್ರವ್ಯ ಸೇವಿಸಿದ್ದರಿಂದ ಮುತಾರ್ಟ್ ಮಾನಸಿಕ ಸ್ಥಿತಿ ಕಳೆದುಕೊಂಡಳು. ಅಲ್ಲದೆ, ಭ್ರಮೆಯಲ್ಲಿ ಬದುಕುತ್ತಿದ್ದಳು. ನಿಯತಕಾಲಿಕೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಯುವತಿ ಮುತಾರ್ಟ್ ಆ ಭಯಾನಕ ಘಟನೆಯನ್ನು ವಿವರಿಸಿದ್ದಾಳೆ.

“ಜಗತ್ತನ್ನು ಉಳಿಸಲು ಮುಖ್ಯವಾದದ್ದನ್ನು ತ್ಯಾಗ ಮಾಡಬೇಕೆಂದು ನಾನು ಭಾವಿಸಿದೆ. ಆದ್ದರಿಂದ ನಾನು ನನ್ನ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳಿನಿಂದ ಕಣ್ಣನ್ನು ಹಿಡಿದು, ಕಣ್ಣು ಹೊರಬರುವವರೆಗೂ ಅದನ್ನು ತಿರುಚಿ ಎಳೆದಿದ್ದೇನೆ. ಇದು ನಾನು ಮಾಡಬೇಕಾದ ಅತ್ಯಂತ ಕಷ್ಟದ ಕೆಲಸ ಎಂದು ನಾನು ಭಾವಿಸಿದೆ” ಎಂದು ಆಘಾತಕಾರಿ ಘಟನೆಯನ್ನು ತಿಳಿಸಿದ್ದಾಳೆ.

ಕಣ್ಣಿಗೆ ತನ್ನ ಕೈಯಾರೆ ನೋವುಂಟು ಮಾಡುತ್ತಿದ್ದಾಗ ಜೋರಾಗಿ ಕಿರುಚಿದ್ದೆ. ಇದನ್ನು ಚರ್ಚ್‌ನ ಪಾದ್ರಿ ಗಮನಿಸಿದ್ರು. ಅವರು ನೋಡಿದಾಗ ತನ್ನ ಕಣ್ಣುಗಳು ಕೈಯಲ್ಲಿತ್ತು. ನಂತರ ಅದನ್ನು ತಾನು ತಲೆಗೆ ಅಂಟಿಸಿ ಒತ್ತಿ ಹಿಡಿಯುತ್ತಿದ್ದೆ. ಈ ವೇಳೆ ಪಾದ್ರಿ ಮಧ್ಯಪ್ರವೇಶಿಸಿ ತಡೆದರು ಎಂದು ಹೇಳಿದ್ದಾಳೆ. ಕೂಡಲೇ ಮುತಾರ್ಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆ ನೆರವೇರಿಸಿತು. ಸೋಂಕುಂಟಾಗದಂತೆ ತಡೆಯಿತು. ಆದರೆ, ಶಾಶ್ವತ ಅಂಧತ್ವ ಆವರಿಸಿತು.

ಇದನ್ನೂ ಓದಿ: Viral Video: ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡಿದ ಸರ್ಕಾರಿ ಶಾಲಾ ಶಿಕ್ಷಕ; ವಿಡಿಯೊ ವೈರಲ್ ಬೆನ್ನಲ್ಲೇ ಅಮಾನತು

ಆ ಭಯಾನಕ ಘಟನೆಯ ನಂತರ ಜೀವನ ಏನು ಎಂಬುದು ಅರ್ಥವಾಯಿತು ಎಂದು ಮುತಾರ್ಟ್ ತಿಳಿಸಿದ್ದಾಳೆ. ಆಕೆ ಬ್ರೈಲ್ ಲಿಪಿಯನ್ನು ಕಲಿತಿದ್ದು, ಇದೀಗ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಕುರುಡುತನವನ್ನು ವಿಚಿತ್ರವಾದ ರಕ್ಷಣೆಯ ರೂಪವೆಂದು ಪರಿಗಣಿಸಿದ್ದಾಳೆ. “ಕೆಲವೊಮ್ಮೆ ಕುರುಡಳಾಗಿರುವುದು ನನಗೆ ಒಂದು ಆಶೀರ್ವಾದ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ನೋಡಲು ಸಾಧ್ಯವಾದರೆ ನಾನು ಮತ್ತೆ ಮಾದಕ ದ್ರವ್ಯಗಳಿಗೆ ವ್ಯಸನಿಯಾಗಬಹುದಿತ್ತು. ನನಗೆ ಈಗ ನೋಡಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಸಂತೋಷವಾಗಿದೆ. ಇಲ್ಲದಿದ್ದರೆ ಅದರಿಂದ ಹೊರಬರುವುದು ನನಗೆ ತುಂಬಾ ಕಷ್ಟವಾಗುತ್ತಿತ್ತು” ಎಂದು ಅವಳು ಹೇಳಿದ್ದಾಳೆ.

ಒಟ್ಟಿನಲ್ಲಿ ಮುತಾರ್ಟ್‌ಳ ಕಥೆಯು ಮಾದಕ ವ್ಯಸನದ ಅಪಾಯಗಳು ಮತ್ತು ಅದು ಉಂಟು ಮಾಡಬಹುದಾದ ತೀವ್ರ ಮಾನಸಿಕ ಆರೋಗ್ಯ ಬಿಕ್ಕಟ್ಟುಗಳ ಬಗ್ಗೆ ಎಚ್ಚರಿಕೆ ನೀಡಿದೆ.