ವಾಷಿಂಗ್ಟನ್: ಶ್ವೇತ ಭವನದ (White House) ಬಳಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ರಾಷ್ಟ್ರೀಯ ಗಾರ್ಡ್ ಸದಸ್ಯೆಯೊಬ್ಬರು (US military personnel) ಸಾವನ್ನಪ್ಪಿದ ಬಳಿಕ ವಲಸಿಗರ (US migration policy) ಮೇಲೆ ಬಿಗಿ ಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮುಂದಾಗಿದ್ದಾರೆ. ತೃತೀಯ ಜಗತ್ತಿನ ದೇಶಗಳಿಂದ (Third World countries) ವಲಸೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವುದಾಗಿ ಅವರು ಗುರುವಾರ ಘೋಷಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಇರುವ ವಿವಿಧ ರೀತಿಯ ಕ್ರಮಗಳ ಬಗ್ಗೆ ಪರಿಶೀಲಿಸುವುದಾಗಿ ಅವರು ಪ್ರಕಟಿಸಿದ್ದಾರೆ.
ದೇಶದಲ್ಲಿ ಭದ್ರತೆ ವ್ಯವಸ್ಥೆಯನ್ನು ಬಿಗಿ ಗೊಳಿಸಲಾಗುತ್ತಿದೆ. ಇದಕ್ಕಾಗಿ ಅನಧಿಕೃತ ವಲಸೆಯನ್ನು ತಡೆಯಲು ಕ್ರಮಕೈಗೊಳ್ಳಲಾಗುವುದು. ವಿದೇಶಿ ಪ್ರಜೆಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ ಅವರು ವಲಸಿಗರ ಪರಿಶೀಲನೆ ಕ್ರಮವನ್ನು ಬಿಗಿಗೊಳಿಸಲು ಯೋಜನೆ ಹಾಕಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಶ್ವೇತಭವನದ ಬಳಿ ಗುಂಡಿನ ದಾಳಿ- ಭದ್ರತಾ ಸಿಬ್ಬಂದಿ ಸಾವು
ಇದರ ಮೊದಲ ಹೆಜ್ಜೆಯಾಗಿ ಮೂರನೇ ಜಗತ್ತಿನ ದೇಶಗಳ ನಾಗರಿಕರ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸಲು ತಮ್ಮ ಆಡಳಿತವು ಕೆಲಸ ಮಾಡುತ್ತದೆ. ಇದಕ್ಕಾಗಿ ಅಮೆರಿಕದ ವಲಸೆ ನೀತಿಯಲ್ಲಿ ಕಠಿಣ ಕ್ರಮಗಳನ್ನು ಸೇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶ್ವೇತಭವನದ ಬಳಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಗಾರ್ಡ್ ಸದಸ್ಯರಲ್ಲಿ ಒಬ್ಬರಾದ ಯುಎಸ್ ಸೇನಾ ತಜ್ಞೆ ಸಾರಾ ಬೆಕ್‌ಸ್ಟ್ರೋಮ್ ಸಾವನ್ನಪ್ಪಿದ್ದು, ಇನ್ನೋರ್ವ ಸದಸ್ಯ ಆಂಡ್ರ್ಯೂ ವುಲ್ಫ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ದಾಳಿಯಲ್ಲಿ ಭಾಗಿಯಾಗಿದ್ದ ಫ್ಘಾನಿಸ್ತಾನ ಮೂಲದ ರಹಮಾನಲ್ಲಾ ಲಕನ್ವಾಲ್ ಎಂಬಾತನನ್ನು ಬಂಧಿಸಲಾಗಿದೆ.
ಈ ಘಟನೆಯ ಬಳಿಕ ಅಮೆರಿಕ ಅಧ್ಯಕ್ಷರು ಅಫ್ಘಾನಿಸ್ತಾನ ಸೇರಿದಂತೆ 19 ದೇಶಗಳ ವಲಸಿಗರ ಶಾಶ್ವತ ನಿವಾಸ ಸ್ಥಿತಿಯನ್ನು ಪರಿಶೀಲಿಸುವುದಾಗಿ ಘೋಷಿಸಿದರು. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಾದ ಟ್ರೂತ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಮೆರಿಕವು ಎಲ್ಲಾ ತೃತೀಯ ಜಗತ್ತಿನ ದೇಶಗಳಿಂದ ವಲಸೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಿದೆ. ಇದು ಲಕ್ಷಾಂತರ ಬಿಡೆನ್ ಅಕ್ರಮ ಪ್ರವೇಶಗಳನ್ನು ಕೊನೆಗೊಳಿಸುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ನಿವ್ವಳ ಆಸ್ತಿಯಲ್ಲದ ಅಥವಾ ನಮ್ಮ ದೇಶವನ್ನು ಪ್ರೀತಿಸಲು ಅಸಮರ್ಥರಾಗಿರುವರನ್ನು ನಾವು ಇಲ್ಲಿಂದ ಹೊರಹಾಕುವುದಾಗಿ ಅವರು ತಿಳಿಸಿದ್ದಾರೆ.
ನಾಗರಿಕರಲ್ಲದವರಿಗೆ ಎಲ್ಲಾ ಫೆಡರಲ್ ಪ್ರಯೋಜನಗಳು ಮತ್ತು ಸಬ್ಸಿಡಿಗಳನ್ನು ಯುಎಸ್ ಕೊನೆಗೊಳಿಸುತ್ತದೆ. ದೇಶೀಯ ಶಾಂತಿಯನ್ನು ಹಾಳು ಮಾಡುವ ವಲಸಿಗರನ್ನು ಗಡೀಪಾರು ಮಾಡಲಾಗುವುದು. ಇದರಲ್ಲಿ ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಓಷಿಯಾನಿಯಾದ ಕೆಲವು ರಾಷ್ಟ್ರಗಳ ವಲಸಿಗರು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೈಲಿನಲ್ಲಿರುವ ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ವದಂತಿ- ಪಾಕ್ ಮಾಜಿ ಪ್ರಧಾನಿಯ ಸಹೋದರಿ ಹೇಳಿದ್ದೇನು?
ಇಂತಹ ನಿರಾಶ್ರಿತರು ಅಮೆರಿಕಕ್ಕೆ ಹೊರೆ ಎಂದ ಅವರು, ಇವರನ್ನು ಇಲ್ಲಿಂದ ಹೊರಗೆ ಹಾಕಿದರೆ ಮಾತ್ರ ಈ ಪರಿಸ್ಥಿತಿಯನ್ನು ನಾವು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ. ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು ಸೇರಿದಂತೆ ವಿದೇಶಿಯರಿಗೆ ನೀಡಲಾಗಿರುವ ಪ್ರತಿ ಗ್ರೀನ್ ಕಾರ್ಡ್‌ನ ಪೂರ್ಣ ಪ್ರಮಾಣದ, ಕಠಿಣ ಮರುಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ಜೂನ್ ನಲ್ಲೇ ಅಫ್ಘಾನಿಸ್ತಾನ, ಮ್ಯಾನ್ಮಾರ್, ಬುರುಂಡಿ, ಚಾಡ್, ಕಾಂಗೋ ಗಣರಾಜ್ಯ, ಕ್ಯೂಬಾ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಾವೋಸ್, ಲಿಬಿಯಾ, ಸಿಯೆರಾ ಲಿಯೋನ್, ಸೊಮಾಲಿಯಾ, ಸುಡಾನ್, ಟೋಗೊ, ತುರ್ಕಮೆನಿಸ್ತಾನ್, ವೆನೆಜುವೆಲಾ ಮತ್ತು ಯೆಮೆನ್ ರಾಷ್ಟ್ರಗಳ ನಾಗರಿಕರ ವಲಸೆಗೆ ಅಮೆರಿಕ ನಿರ್ಬಂಧ ಹೇರಿತ್ತು. ಇದು ಈಗ ಕಠಿಣ ಕ್ರಮದ ರೂಪದಲ್ಲಿ ಮತ್ತೆ ಮರು ಪರಿಶೀಲಿಸಲು ಟ್ರಂಪ್ ಆದೇಶಿಸಿದ್ದಾರೆ.