ವಾಷಿಂಗ್ಟನ್: ಮಾದಕ ವಸ್ತು ಕಳ್ಳಸಾಗಾಣೆದಾರರ (Drug trafficking) ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಅಮೆರಿಕ (America) ಇದೀಗ ಕೊಲಂಬಿಯಾದ ಅಧ್ಯಕ್ಷರಿಗೆ (Colombian president) ಎಚ್ಚರಿಕೆ ನೀಡಿದೆ. ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪದಲ್ಲಿ ಶನಿವಾರ ವೆನೆಜುವೆಲಾ (Venezuela) ಮೇಲೆ ದಾಳಿ ನಡೆಸಿದ ಅಮೆರಿಕ ಸೇನಾ ಪದೇ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಮತ್ತು ಅವರ ಪತ್ನಿಯನ್ನು ಬಂಧಿಸಿತ್ತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರಿಗೂ ಎಚ್ಚರಿಕೆಯನ್ನು ನೀಡಿದ್ದಾರೆ.
ವೆನೆಜುವೆಲಾದ ಮೇಲೆ ದಾಳಿ ನಡೆಸಿದ ಮರುದಿನವೇ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ನ್ಯೂಯಾರ್ಕ್‌ನ ಜೈಲಿಗೆ ಕರೆದುಕೊಂಡು ಬರಲಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರಿಗೆ ಎಚ್ಚರಿಕೆ ನೀಡಿ, ಮಡುರೊ ಅವರನ್ನು ನೋಡಿ ಎಂದು ಹೇಳಿದ್ದಾರೆ.
ಅಮೆರಿಕದ ಸೆರೆಯಲ್ಲಿರುವ ವೆನೆಜುವೆಲಾದ ಅಧ್ಯಕ್ಷರ ಮೊದಲ ಫೋಟೋ ರಿಲೀಸ್ ಮಾಡಿದ ಟ್ರಂಪ್!
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅವರು ಕೊಕೇನ್ ತಯಾರಿಸಿ ಅದನ್ನು ಯುನೈಟೆಡ್ ಸ್ಟೇಟ್ಸ್‌ಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಅವರು ವೆನೆಜುವೆಲಾ ಅಧ್ಯಕ್ಷರನ್ನು ನೋಡಬೇಕು ಎಂದು ಹೇಳಿದರು.
ಅಮೆರಿಕದ ಅಧ್ಯಕ್ಷರ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಅಮೆರಿಕವು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲೆ ದಾಳಿ ನಡೆಸುತ್ತಿದೆ. ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಮಾದಕವಸ್ತು ಕಳ್ಳಸಾಗಣೆ ಹಡಗುಗಳ ಮೇಲೆ ದಾಳಿಗೆ ಮಿಲಿಟರಿ ನಿಯೋಜಿಸಿದ ಬಳಿಕ ಟ್ರಂಪ್ ಅವರು ಕೊಲಂಬಿಯಾದಲ್ಲಿರುವ ಮಾದಕವಸ್ತು ಉತ್ಪಾದನಾ ಪ್ರಯೋಗಾಲಯಗಳ ಮೇಲೆ ದಾಳಿ ಕೂಡ ಮಾಡುತ್ತೇವೆ ಎಂದು ಹೇಳಿದ್ದರು. ಇದನ್ನು ಕೊಲಂಬಿಯಾದ ಮೇಲೆ ಅಮೆರಿಕ ದಾಳಿ ಮಾಡುವ ಬೆದರಿಕೆಯಾಗಿದೆ ಎಂದು ಪೆಟ್ರೊ ಹೇಳಿ ಖಂಡಿಸಿದ್ದರು.
ವೆನೆಜುವೆಲಾ ಅಧ್ಯಕ್ಷರ ಬಂಧನದ ಬಳಿಕ ತಾತ್ಕಾಲಿಕವಾಗಿ ಅಮೆರಿಕ ದೇಶದ ಆಡಳಿತವನ್ನು ನಡೆಸುತ್ತದೆ. ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆಯನ್ನು ನಡೆಯುವವರೆಗೂ ನಾವು ದೇಶವನ್ನು ಮುನ್ನಡೆಸುತ್ತೇವೆ ಎಂದು ಟ್ರಂಪ್ ಹೇಳಿದ್ದು, ಅಗತ್ಯವಿದ್ದರೆ ಎರಡು ಅಥವಾ ಅದಕ್ಕಿಂತ ಹೆಚ್ಚು ದಾಳಿ ನಡೆಸಲು ಅಮೆರಿಕ ಸಿದ್ಧವಾಗಿದೆ ಎಂದು ಹೇಳಿದರು.
ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ದೇಶವನ್ನು ಮತ್ತೆ ಶ್ರೇಷ್ಠವಾಗಿಸಲು ಅಗತ್ಯವಿರುವುದನ್ನು ಮಾಡುವುದಾಗಿ ಹೇಳಿದ್ದು, ಈ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್, ವೆನೆಜುವೆಲಾದ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದರು.
ಹೀಗೊಬ್ಬ ಪ್ರಾಮಾಣಿಕ ಕಳ್ಳ! ಗಿಟಾರ್ ಕದ್ದು ಕ್ಷಮೆ ಕೇಳಿ ಹಿಂದಿರುಗಿಸಿದ ವ್ಯಕ್ತಿ: ಭಾರಿ ವೈರಲ್ ಆಗ್ತಿದೆ ಈ ಪೋಸ್ಟ್
ಅಮೆರಿಕವು ತನ್ನ ತೈಲ ಕಂಪನಿಗಳನ್ನು ವೆನೆಜುವೆಲಾಗೆ ಕಳುಹಿಸುತ್ತದೆ. ಅಲ್ಲಿನ ಮೂಲಸೌಕರ್ಯವನ್ನು ಸರಿಪಡಿಸಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತದೆ. ವೆನೆಜುವೆಲಾದ ಎಲ್ಲಾ ತೈಲದ ಮೇಲಿನ ನಿರ್ಬಂಧವು ಪೂರ್ಣವಾಗಿ ಜಾರಿಯಲ್ಲಿದೆ. ಅಮೆರಿಕದ ಬೇಡಿಕೆಗಳು ಪೂರ್ಣವಾಗಿ ನೆರವೇರುವವರೆಗೆ ಅಲ್ಲಿ ಯುನೈಟೆಡ್ ಸ್ಟೇಟ್ಸ್ ಎಲ್ಲಾ ಮಿಲಿಟರಿಗಳನ್ನು ಇಡಲಿದೆ ಎಂದು ತಿಳಿಸಿದ್ದಾರೆ.
ವೆನೆಜುವೆಲಾ, ಕಾಂಬೋಡಿಯಾ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯೂಬಾ, ಮೆಕ್ಸಿಕೊ ಮೇಲೆಯೂ ಕಠಿಣ ಕ್ರಮಕ್ಕೆ ಮುಂದಾಗಬಹುದು. ಇಲ್ಲಿನ ಆಡಳಿತದ ಬಗ್ಗೆ ಅವರು ಒಮ್ಮೆ ಕಳವಳ ವ್ಯಕ್ತಪಡಿಸಿದ್ದರು ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸುಳಿವು ನೀಡಿದ್ದಾರೆ.