ಅಮೆರಿಕದ ಸೆರೆಯಲ್ಲಿರುವ ವೆನೆಜುವೆಲಾದ ಅಧ್ಯಕ್ಷರ ಮೊದಲ ಫೋಟೋ ರಿಲೀಸ್ ಮಾಡಿದ ಟ್ರಂಪ್!
ಅಮೆರಿಕದ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಹಿಡಿದ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೊದಲ ಫೋಟೊವನ್ನು ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ನಂತರ ಅಮೆರಿಕದ ತೈಲ ಕಂಪನಿಗಳು ವೆನೆಜುವೆಲಾಕ್ಕೆ ತೆರಳಿ ಅದರ ಬೃಹತ್ ಕಚ್ಚಾ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಾಗಿ ಟ್ರಂಪ್ ಹೇಳಿದ್ದಾರೆ.
ಸೆರೆಯಲ್ಲಿರುವ ವೆನೆಜುಲಾದ ಅಧ್ಯಕ್ಷ -
ಅಮೆರಿಕದ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಹಿಡಿದ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಅವರ ಮೊದಲ ಫೋಟೊವನ್ನು ಡೊನಾಲ್ಡ್ ಟ್ರಂಪ್ (Donald Trump) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೂದು ಬಣ್ಣದ ಸ್ವೆಟ್‌ಶರ್ಟ್ ಮತ್ತು ಸ್ವೆಟ್‌ಪ್ಯಾಂಟ್ ಧರಿಸಿ, ದೊಡ್ಡ ಹೆಡ್‌ಫೋನ್‌ಗಳನ್ನು ಧರಿಸಿ, 63 ವರ್ಷದ ಮಡುರೊ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಹಿಡಿದುಕೊಂಡು ನಿಂತಿರುವ ಫೋಟೋ ವೈರಲ್ ಆಗಿದೆ.
ಮಡುರೊ ಕುಟುಂಬದ ಬಂಧನದ ಬಳಿಕ ಮಾರ್-ಎ-ಲಾಗೊ ಕ್ಲಬ್‌ನಲ್ಲಿ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನುಜುವೆಲಾ ಕುರಿತಂತೆ ಅಮೆರಿಕ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು. ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಅಮೆರಿಕದ ಉನ್ನತ ಜನರಲ್ ಡಾನ್ ಕೇನ್ ಇದ್ದರು.
Nicolas Maduro on board the USS Iwo Jima. pic.twitter.com/omF2UpDJhA
— The White House (@WhiteHouse) January 3, 2026
ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ನಂತರ ಅಮೆರಿಕದ ತೈಲ ಕಂಪನಿಗಳು ವೆನೆಜುವೆಲಾಕ್ಕೆ ತೆರಳಿ ಅದರ ಬೃಹತ್ ಕಚ್ಚಾ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಾಗಿ ಟ್ರಂಪ್ ಹೇಳಿದ್ದಾರೆ. ವೆನೆಜುವೆಲಾ 2019 ರಿಂದ ಅಮೆರಿಕದ ತೈಲ ನಿರ್ಬಂಧಗಳಿಗೆ ಒಳಗಾಗಿದೆ. ಇದು ದಿನಕ್ಕೆ ಸುಮಾರು ಒಂದು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ನಮ್ಮ ಅತಿದೊಡ್ಡ ಯುನೈಟೆಡ್ ಸ್ಟೇಟ್ಸ್ ತೈಲ ಕಂಪನಿಗಳು, ವಿಶ್ವದ ಎಲ್ಲೆಡೆಯೂ ದೊಡ್ಡವು, ಒಳಗೆ ಹೋಗಿ, ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಿ, ಕೆಟ್ಟದಾಗಿ ಮುರಿದುಹೋಗಿರುವ ಮೂಲಸೌಕರ್ಯ, ತೈಲ ಮೂಲಸೌಕರ್ಯವನ್ನು ಸರಿಪಡಿಸಿ, ದೇಶಕ್ಕಾಗಿ ಹಣ ಸಂಪಾದಿಸಲು ಪ್ರಾರಂಭಿಸುತ್ತೇವೆ. ನಾವು ದೊಡ್ಡ ಪ್ರಮಾಣದಲ್ಲಿ ತೈಲವನ್ನು ಮಾರಾಟ ಮಾಡುತ್ತೇವೆ. ವೆನೆಜುವೆಲಾದಲ್ಲಿ ಎರಡನೇ, 'ಹೆಚ್ಚು ದೊಡ್ಡ' ಕಾರ್ಯಾಚರಣೆಗಳಿಗೆ ಅಮೆರಿಕ ಸಿದ್ಧವಾಗಿದೆ. ಎಲ್ಲಾ ವೆನೆಜುವೆಲಾದ ತೈಲದ ಮೇಲಿನ ನಿರ್ಬಂಧವು ಪೂರ್ಣವಾಗಿ ಜಾರಿಯಲ್ಲಿದೆ" ಎಂದು ಟ್ರಂಪ್ ಹೇಳಿದ್ದಾರೆ.
ವೆನೆಜುವೆಲಾದ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ಟ್ರಂಪ್ ಹೇಳಿದ್ದೇನು?
ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ವಾಷಿಂಗ್ಟನ್‌ನೊಂದಿಗೆ ಕೆಲಸ ಮಾಡಲು ಸಿದ್ಧರಿದ್ದಾರೆ. ರೂಬಿಯೊ "ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಮತ್ತು ವೆನೆಜುವೆಲಾವನ್ನು ಮತ್ತೆ ಶ್ರೇಷ್ಠವಾಗಿಸಲು ನಾವು ಅಗತ್ಯವೆಂದು ಭಾವಿಸುವದನ್ನು ಮಾಡಲು ಅವರು ಮೂಲತಃ ಸಿದ್ಧರಿದ್ದಾರೆ ಎಂದು ಟ್ರಂಪ್ ಹೇಳಿದರು.