ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Osama bin Laden: ಮಿಲಿಟರಿ ಕಾರ್ಯಾಚರಣೆ ವೇಳೆ ಮಹಿಳೆಯರ ಉಡುಪು ಧರಿಸಿ ಪರಾರಿಯಾಗಿದ್ನಂತೆ ಒಸಾಮಾ ಬಿನ್ ಲಾಡೆನ್!

Former CIA officer John Kiriakou: 2001 ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ಬಳಿಕ ಅಮೆರಿಕಕ್ಕೆ ಬೇಕಾಗಿದ್ದ ಒಸಾಮಾ ಬಿನ್ ಲಾಡೆನ್ ಮಹಿಳೆಯ ವೇಷದಲ್ಲಿ ಪರಾರಿಯಾಗಿದ್ದ ಎಂದು ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹಲವು ರಹಸ್ಯಮಯವಾದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಮಹಿಳೆಯ ವೇಷದಲ್ಲಿ ತಪ್ಪಿಸಿಕೊಂಡಿದ್ನಾ ಲಾಡೆನ್‌?

-

ನವದೆಹಲಿ: ಭಯೋತ್ಪಾದಕ ( terrorist), ಅಲ್-ಖೈದಾ ಕಾರ್ಯಕರ್ತನೊಬ್ಬ ಅಮೆರಿಕ (United States) ಮಿಲಿಟರಿಗೆ ನುಸುಳಿದ್ದ ಎನ್ನುವುದು ಗೊತ್ತೇ ಇರಲಿಲ್ಲ. 2001ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಅಲ್-ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ( Al-Qaeda founder Osama bin Laden) ಹುಡುಕಾಟ ಪ್ರಾರಂಭವಾಗಿತ್ತು. ಅಮೆರಿಕಕ್ಕೆ ಅತ್ಯಂತ ಬೇಕಾಗಿದ್ದ ಭಯೋತ್ಪಾದಕನಾಗಿದ್ದ ಒಸಾಮಾ ಬಿನ್ ಲಾಡೆನ್ ಟೋರಾ ಬೋರಾ ಬೆಟ್ಟಗಳ ಮೂಲಕ ಮಹಿಳೆಯ ವೇಷದಲ್ಲಿ ತಪ್ಪಿಸಿಕೊಂಡಿದ್ದ ಎಂದು ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ (ex-CIA Officer John Kiriakou) ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

15 ವರ್ಷಗಳ ಕಾಲ ಸಿಐಎನಲ್ಲಿದ್ದ ಮತ್ತು ಪಾಕಿಸ್ತಾನದ ಸಿಐಎ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದ ಕಿರಿಯಾಕೌ, ಅಮೆರಿಕದ ಮಿಲಿಟರಿಯೊಳಗೆ ಸೆಂಟ್ರಲ್ ಕಮಾಂಡರ್ ನ ಅನುವಾದಕ ಕಮಾಂಡರ್ ಆಗಿ ನುಸುಳಿರುವುದು ಅಲ್-ಖೈದಾ ಕಾರ್ಯಕರ್ತ ಎಂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.

ಅಮೆರಿಕವು 2001ರಲ್ಲಿ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಕಾಯುತ್ತಿತ್ತು. ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಸಿದ್ಧತೆ ನಡೆಸುತ್ತಿತ್ತು. ಒಂದು ತಿಂಗಳ ಅನಂತರ ತಿಳಿದಿರುವ ಅಲ್-ಖೈದಾ ತಾಣಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದೆವು. ಅಕ್ಟೋಬರ್‌ನಲ್ಲಿ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅನ್ನು ಕೊಲ್ಲಲಾಗಿದೆ ಎಂದೇ ನಂಬಲಾಗಿತ್ತು.

ಅಮೆರಿಕದ ಮಿಲಿಟರಿಯೊಳಗೆ ಸೆಂಟ್ರಲ್ ಕಮಾಂಡರ್ ನ ಅನುವಾದಕ ಕಮಾಂಡರ್ ಆಗಿ ನುಸುಳಿರುವುದು ಅಲ್-ಖೈದಾ ಕಾರ್ಯಕರ್ತ ಎಂದು ನಮಗೆ ತಿಳಿದಿರಲಿಲ್ಲ. ಒಸಾಮಾ ಬಿನ್ ಲಾಡೆನ್ ಅನ್ನು ಸೆರೆ ಹಿಡಿಯಲು ಯೋಜನೆ ರೂಪಿಸಲಾಗಿತ್ತು. ಅವನನ್ನು ಪರ್ವತದಿಂದ ಕೆಳಗೆ ಬರಲು ಹೇಳಿದೆವು. ಆತ ಅನುವಾದಕರ ಮೂಲಕ ಬೆಳಗಿನ ಜಾವದವರೆಗೆ ಅವಕಾಶ ನೀಡಬಹುದೇ? ನಾವು ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸಲು ಬಯಸುತ್ತೇವೆ ಎಂದು ಹೇಳಿದ. ಅನುವಾದಕರು ಜನರಲ್ ಫ್ರಾಂಕ್ಸ್ ಅವರಲ್ಲಿ ಇದಕ್ಕೆ ಒಪ್ಪಿಗೆ ನೀಡುವಂತೆ ಮನವೊಲಿಸಿದರು. ಆದರೆ ಬಿನ್ ಲಾಡೆನ್ ಮಹಿಳೆಯ ವೇಷ ಧರಿಸಿ ಪಿಕಪ್ ಟ್ರಕ್ ನ ಹಿಂಭಾಗದಲ್ಲಿ ಪಾಕಿಸ್ತಾನಕ್ಕೆ ಹೋಗಿ ತಪ್ಪಿಸಿಕೊಂಡನು.

ಬೆಳಗ್ಗೆ ಸೂರ್ಯ ಉದಯವಾದಾಗ ಟೋರಾ ಬೋರಾದಲ್ಲಿ ಯಾರೂ ಇರಲಿಲ್ಲ. ಎಲ್ಲರೂ ತಪ್ಪಿಸಿಕೊಂಡರು. ಹೀಗಾಗಿ ನಾವು ಪಾಕಿಸ್ತಾನದಲ್ಲಿ ಆತನ ಹುಡುಕಾಟ ಪ್ರಾರಂಭಿಸಬೇಕಾಯಿತು. 2011ರ ಮೇ ತಿಂಗಳಲ್ಲಿ ಅಮೆರಿಕವು ಉತ್ತರ ಪಾಕಿಸ್ತಾನದ ಅಬೋಟಾಬಾದ್ ನಗರದಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಪತ್ತೆಹಚ್ಚಿತು. ಮೇ 2 ರಂದು ಅಮೆರಿಕದ ವಿಶೇಷ ಪಡೆಗಳು ಆತನ ಮನೆಯ ಮೇಲೆ ನಡೆಸಿದ ದಾಳಿ ನಡೆಸಿ ಕೊಂದಿತು ಎಂದು ಅವರು ತಿಳಿಸಿದ್ದಾರೆ.

ಆಗ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ನಾವು ಏನು ಬೇಕಾದರೂ ಮಾಡಲು ಅವಕಾಶ ನೀಡಿದ್ದರು. ಪಾಕಿಸ್ತಾನ ಸರ್ಕಾರದೊಂದಿಗಿನ ನಮ್ಮ ಸಂಬಂಧಗಳು ತುಂಬಾ ಚೆನ್ನಾಗಿದ್ದವು ಎಂದರು. ಯುನೈಟೆಡ್ ಸ್ಟೇಟ್ಸ್ ಸರ್ವಾಧಿಕಾರಿಗಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತದೆ. ಯಾಕೆಂದರೆ ಅವರು ಸಾರ್ವಜನಿಕ ಅಭಿಪ್ರಾಯ, ಮಾಧ್ಯಮಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಆ ಸಂದರ್ಭದಲ್ಲಿ ನಾವು ಮುಷರಫ್ ಅವರನ್ನೇ ಖರೀದಿಸಿದ್ದೆವು. ಪಾಕಿಸ್ತಾನಕ್ಕೆ ಲಕ್ಷಾಂತರ ಡಾಲರ್ ಗಳ ಸಹಾಯ ನೀಡಲಾಗಿತ್ತು ಎಂದು ಅವರು ಹೇಳಿದರು.

ಅಮೆರಿಕವು ಅಲ್-ಖೈದಾ ಮತ್ತು ಅಫ್ಘಾನಿಸ್ತಾನದ ಮೇಲೆ ತನ್ನ ಗಮನ ಕೇಂದ್ರೀಕರಿಸಿತ್ತು. ಭಾರತದ ಬಗ್ಗೆ ಕಾಳಜಿಗೆ ಹೆಚ್ಚಿನ ಗಮನ ನೀಡಿಲ್ಲ. ಕೇವಲ ಒಂದೆರಡು ತಿಂಗಳ ಅನಂತರ ಅಂದರೆ 2002ರ ಮಾರ್ಚ್‌ನಲ್ಲಿ ಲಾಹೋರ್‌ನಲ್ಲಿರುವ ಲಷ್ಕರ್-ಎ-ತೈಬಾ ಸುರಕ್ಷಿತ ಮನೆಯ ಮೇಲೆ ದಾಳಿ ಮಾಡಿದೆವು. ಆ ಮನೆಯಲ್ಲಿದ್ದ ಮೂವರು ಲಷ್ಕರ್-ಎ-ತೈಬಾ ಹೋರಾಟಗಾರರನ್ನು ಸೆರೆಹಿಡಿಯಲಾಗಿತ್ತು. ಈ ವೇಳೆ ಅವರ ತರಬೇತಿ ಕೈಪಿಡಿಯನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಅವರು ಹೇಳಿದರು.

ಈ ಕುರಿತು ಹೆಚ್ಚು ಪ್ರಚಾರ ಮಾಡದೇ ಇರಲು ಶ್ವೇತಭವನದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಸಂಬಂಧದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಸಂಬಂಧ ದೊಡ್ಡದು. ಆದರೆ ಅವರಿಗೆ ನಮ್ಮ ಅಗತ್ಯವಿಲ್ಲ. ಆದ್ದರಿಂದ ಪಾಕಿಸ್ತಾನಿಗಳು ನಮಗೆ ಹೆಚ್ಚು ಬೇಕಾಗಿದ್ದರು. ಆದ್ದರಿಂದ ಅವರಿಗೆ ನಾವು ಹಣ ಖರ್ಚು ಮಾಡಲು ನಿರ್ಧರಿಸಿದೆವು. ಬಲೂಚಿಸ್ತಾನದಲ್ಲಿ ನಮ್ಮ ಡ್ರೋನ್‌ಗಳನ್ನು ನೆಲೆಗೊಳಿಸಲು ಅದು ಅಗತ್ಯವಾಗಿತ್ತು ಎಂದರು.

ಇದನ್ನೂ ಓದಿ: Road Accident: ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಸಾಫ್ಟ್‌ವೇರ್‌ ಇಂಜಿನಿಯರ್‌ ಬಲಿ

ಪಾಕಿಸ್ತಾನವು ಭಾರತದೊಂದಿಗೆ ಹೋರಾಡುವುದರಲ್ಲಿ ಅರ್ಥವಿಲ್ಲ ಎಂದ ಅವರು ಯಾಕೆಂದರೆ ಭಾರತದೊಂದಿಗಿನ ಯಾವುದೇ ಯುದ್ಧದಲ್ಲಿ ಪಾಕಿಸ್ತಾನ ಸೋಲುವುದು ಖಚಿತ ಎಂಬುದನ್ನು ಇಸ್ಲಾಮಾಬಾದ್ ಒಪ್ಪಿಕೊಳ್ಳಬೇಕು ಎಂದು ಅವರು ತಿಳಿಸಿದರು.