ನವದೆಹಲಿ, ಜ. 1: ಹೊಸ ವರ್ಷ ಆರಂಭವಾಗಿದ್ದರೂ ಪಾಕಿಸ್ತಾನವು (Pakistan) ಮತ್ತೆ ತನ್ನ ಹಳೇ ಚಾಳೆಯನ್ನೇ ಮುಂದುವರಿಸುತ್ತಿರುವಂತೆ ಕಾಣುತ್ತಿದೆ. ಕೆಲವು ಪಾಕಿಸ್ತಾನ ಪರ ಸಾಮಾಜಿಕ ಜಾಲತಾಣ ಖಾತೆಗಳು, ಕಳೆದ ವರ್ಷ ನಡೆದ ಯುದ್ಧದ ಸಮಯದಲ್ಲಿ ಪಂಜಾಬ್‌ನ ಅಮೃತಸರ ವಾಯುನೆಲೆ (Punjab Amritsar Airbase) ಹಾಗೂ ಬಿಯಾಸ್‌ನಲ್ಲಿರುವ ಬ್ರಹ್ಮೋಸ್ ಘಟಕದ ಮೇಲೆ ದಾಳಿ ನಡೆದಿದೆ ಎಂಬುದಾಗಿ ಮೊದಲು ಮತ್ತು ನಂತರದ ಚಿತ್ರಗಳನ್ನು ತಪ್ಪು ದಾರಿಗೆಳೆಯುವ ರೀತಿಯಲ್ಲಿ ಹಂಚಿಕೊಂಡಿವೆ.
ಪಾಕಿಸ್ತಾನ ಪರ ಖಾತೆಗಳು ಮಧ್ಯಮ ಶ್ರೇಣಿಯ ಫತಹ್ ಕ್ಷಿಪಣಿಗಳಿಂದ ಅಮೃತಸರ ವಾಯುಸೇನಾ ನೆಲೆಗೆ ಸೇರಿದ ಹ್ಯಾಂಗಾರ್ಸ್ ಮತ್ತು ಬಿಯಾಸ್‍ನ ಬ್ರಹ್ಮೋಸ್ ಕ್ಷಿಪಣಿ ಸಂಗ್ರಹ ಸ್ಥಳವನ್ನು ನಾಶ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದವು. ಆದರೆ ಪಾಕಿಸ್ತಾನಕ್ಕಿಂತ ಭಿನ್ನವಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಕಾರ್ಯಾಚರಣೆಯ ಸಮಯದಲ್ಲಿ ನಾಶಪಡಿಸಿದ ಪಾಕಿಸ್ತಾನದ ಪ್ರದೇಶಗಳ ಚಿತ್ರಗಳನ್ನು ಭಾರತ ಬಿಡುಗಡೆ ಮಾಡಿದೆ.
ಆಪರೇಷನ್ ಸಿಂಧೂರ್ ಟೀಕಿಸಿದ ಪ್ರಾಧ್ಯಾಪಕಿಯನ್ನು ಅಮಾನತು ಮಾಡಿದ ವಿಶ್ವವಿದ್ಯಾಲಯ
2025ರ ಮೇ 15ರಂದು (ಭಾರತ-ಪಾಕಿಸ್ತಾನ ಸಂಘರ್ಷ ಮುಗಿದ 4 ದಿನಗಳ ನಂತರ) ಭಾರತದ ಪಂಜಾಬ್‌ನ ಬಿಯಾಸ್‌ನಲ್ಲಿರುವ ಯುದ್ಧಸಾಮಗ್ರಿ ಸ್ಥಳದಿಂದ ತೆಗೆದ ಮೊದಲು ಚಿತ್ರವನ್ನು ನವೆಂಬರ್ 2025ರ ಚಿತ್ರದೊಂದಿಗೆ ಹೋಲಿಸಲಾಗಿದೆ. ಇದು ಭಾರತದಲ್ಲಿ ಪಾಕಿಸ್ತಾನಿ ದಾಳಿಗಳಿಂದ ಉಂಟಾದ ಹಾನಿಯನ್ನು ತೋರಿಸುತ್ತದೆ ಎಂದು ಸೈಮನ್ ಗೂಗಲ್ ಅರ್ಥ್ ಉಪಗ್ರಹ ಚಿತ್ರಣದೊಂದಿಗೆ ಟ್ವೀಟ್ ಮಾಡಲಾಗಿದೆ.
ಪಾಕಿಸ್ತಾನವು ತನ್ನ ಕಲ್ಪಿತ ಯುದ್ಧಕ್ಷೇತ್ರ ಯಶಸ್ಸಿನಲ್ಲಿ ಮುಳುಗಿಹೋಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ತಮಾಷೆ ಮಾಡಿದ್ದಾರೆ. ಸ್ಫೋಟದ ಗುರುತುಗಳು ಗೋಚರಿಸುತ್ತಿಲ್ಲ. ಪಾಕಿಸ್ತಾನಿಗಳು 2026ರಲ್ಲಿ ಇನ್ನೂ ಹತಾಶರಾಗಿದ್ದಾರೆ. 2025ರಲ್ಲಿ ಪಾಕಿಸ್ತಾನದ ಯಾರಿಗೂ ಉಪಗ್ರಹ ಚಿತ್ರಣವನ್ನು ಒದಗಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಿರ್ಮಾಣ ಪೂರ್ವದ ಚಿತ್ರಗಳನ್ನು ಈಗ ವಿನಾಶವೆಂದು ತೋರಿಸಲಾಗುತ್ತಿದೆ ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ಭಾರತದ ಆಪರೇಷನ್ ಸಿಂಧೂರ್‌ನ ಪರಿಣಾಮವನ್ನು ಪಾಕಿಸ್ತಾನ ಸರ್ಕಾರ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡ ನಂತರ ಈ ಬೆಳವಣಿಗೆ ಸಂಭವಿಸಿದೆ. ಭಾರತೀಯ ಡ್ರೋನ್‌ಗಳು ನೂರ್ ಖಾನ್ ವಾಯುನೆಲೆಯಲ್ಲಿನ ಪ್ರಮುಖ ಮಿಲಿಟರಿ ನೆಲೆಯನ್ನು ಹಾನಿಗೊಳಿಸಿವೆ ಎಂದು ಉಪ ಪ್ರಧಾನಿ ಇಶಾಕ್ ದಾರ್ ಹೇಳಿದ್ದಾರೆ.
'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಭಾರತ ಬಳಸಿದ ಶಸ್ತ್ರಾಸ್ತ್ರಗಳು ಯಾವುದು?
ಆಪರೇಷನ್ ಸಿಂಧೂರ್ ಶ್ಲಾಘಿಸಿದ್ದ ಪಾಕ್ ವ್ಯಕ್ತಿ
ಭಾರತದ ಆಪರೇಷನ್ ಸಿಂದೂರ್ ಬಗ್ಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ, ತಮ್ಮ ದೇಶದ ಸುಳ್ಳುಗಳನ್ನು ಬಯಲಿಗೆಳೆದು, ಭಾರತದ ನಿಖರ ದಾಳಿಗಳನ್ನು ಶ್ಲಾಘಿಸಿದ್ದರು. ಪಾಕಿಸ್ತಾನದ ವ್ಯಕ್ತಿಯು ಭಾರತವು 24 ಕ್ಷಿಪಣಿಗಳನ್ನು ಉಡಾಯಿಸಿದ್ದು, ಪಾಕಿಸ್ತಾನವು ಒಂದೇ ಒಂದು ಕ್ಷಿಪಣಿಯನ್ನು ತಡೆಯಲು ವಿಫಲವಾಯಿತು ಎಂದು ಹೇಳಿದ್ದರು.
ಭಾರತ ತನ್ನ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಹೊಡೆದಿದೆ. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಒಂದು ಕ್ಷಿಪಣಿಯನ್ನೂ ತಡೆಯಲಿಲ್ಲ. ಭಾರತ ನಮ್ಮ ಮನೆಯೊಳಕ್ಕೆ ಒಳನುಗ್ಗಿ ದಾಳಿ ಮಾಡಿತು. ಇದು ಸತ್ಯ. ಇರಾನ್ 200-400 ಕ್ಷಿಪಣಿಗಳನ್ನು ಉಡಾಯಿಸಿದಾಗ ಇಸ್ರೇಲ್ ಅವುಗಳನ್ನು ತಡೆಯುತ್ತದೆ. ಆದರೆ ಭಾರತ 24 ಕ್ಷಿಪಣಿಗಳನ್ನು ಉಡಾಯಿಸಿತು. ನಾವು ಒಂದನ್ನೂ ತಡೆಯಲಾಗಲಿಲ್ಲ ಎಂದು ಅವರು ಹೇಳಿದ್ದರು.