ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kapil Sharma: ಕಪಿಲ್ ಶರ್ಮಾ ಒಡೆತನದ ಕೆಫೆಯಲ್ಲಿ ಭಾರೀ ಗುಂಡಿನ ದಾಳಿ; ಹೊಣೆ ಹೊತ್ತ ಖಲಿಸ್ತಾನಿ ಉಗ್ರ

ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ಮಾಲೀಕತ್ವದ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಕ್ಯಾಪ್ಸ್ ಕೆಫೆ ಹೆಸರಿನ ಈ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಕಪಿಲ್ ಶರ್ಮಾ ಹಾಗೂ ಪತ್ನಿ ಗಿನ್ನಿ ಚಾತ್ರಾತ್ ಜೊತೆಯಾಗಿ ಈ ಕೆಫೆ ಆರಂಭಿಸಿದ್ದರು.

ಒಟ್ಟಾವಾ: ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ (Kapil Sharma) ಮಾಲೀಕತ್ವದ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಕ್ಯಾಪ್ಸ್ ಕೆಫೆ ಹೆಸರಿನ ಈ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಕಪಿಲ್ ಶರ್ಮಾ ಹಾಗೂ ಪತ್ನಿ ಗಿನ್ನಿ ಚಾತ್ರಾತ್ ಜೊತೆಯಾಗಿ ಈ ಕೆಫೆ ಆರಂಭಿಸಿದ್ದರು. ಆದರೆ ಆರಂಭಗೊಂಡ ಕೆಲವೇ ದಿನದಲ್ಲಿ ಖಲಿಸ್ತಾನಿ ಉಗ್ರರು ಕ್ಯಾಪ್ಸ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಟ್ಟಿ ಮಾಡಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಲಡ್ಡಿ, ನಿಷೇಧಿತ ಗುಂಪು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಗೆ ಸಂಬಂಧಿಸಿದ್ದಾನೆ. ದಾಳಿಕೋರರು ಕಾರಿನಲ್ಲಿ ಬಂದು ಸ್ವಲ್ಪ ಹೊತ್ತಿನಲ್ಲೇ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ತಡ ರಾತ್ರಿಯಾದ ಕಾರಣ ಕ್ಯಾಪ್ಸ್ ಕೆಫೆ ಕ್ಲೋಸ್ ಆಗಿತ್ತು. ಹೀಗಾಗಿ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ರೆಸ್ಟೋರೆಂಟ್ ಸಂಪೂರ್ಣ ಹಾನಿಯಾಗಿದೆ.



ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್, ಕ್ಯಾಪ್ಸ್ ಕೆಫೆಯನ್ನು ಗುರಿಯಾಗಿಸಿದ್ದೇ ಅಥವಾ ಗುಂಡು ಹಾರಿಸಿದ್ದು ಹಾಸ್ಯನಟನಿಗೆ ಬೆದರಿಕೆಯಾಗಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆನಾಡ ತನಿಖಾ ಎಜೆನ್ಸಿಗಳು ಈ ದಾಳಿ ತನಿಖೆ ನಡೆಸುತ್ತಿದೆ. ಜರ್ಮನಿ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಆಪರೇಟಿವ್ ಹರ್ಜಿತ್ ಸಿಂಗ್ ಅಲಿಯಾಸ್ ಲಡ್ಡಿ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ : Firing: ಮೆಕ್ಸಿಕೋದ ಚರ್ಚ್‌ನಲ್ಲಿ ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ, 12 ಸಾವು

ಲಡ್ಡಿ ಭಾರತದ ಮೋಸ್ಟ್ ವಾಟೆಂಟ್ ಉಗ್ರನಾಗಿದ್ದಾನೆ. ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳು, ಹಿಂದೂ ನಾಯಕ ಹತ್ಯೆ ಹಿಂದೆ ಈತನ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ. ಎಪ್ರಿಲ್ 13, 2024ರಲ್ಲಿ ವಿಶ್ವ ಹಿಂದೂಪರಿಷತ್ ಪ್ರಭಾಕರ್ ಮೇಲೆ ಪಂಜಾಬ್‌ನ ನಂಗಾಲ್‌ನಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿ ಹಿಂದೆ ಇದೆ ಲಡ್ಡಿ ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ. 2023ರಲ್ಲಿ ಲಡ್ಡಿ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು. ಶಿವಸೇನಾ ನಾಯಕರ ಮನೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ ಪ್ರಕರಣದಲ್ಲಿ ಇದೇ ಲಡ್ಡಿ ಸಹಚರು ಲೂಧಿಯಾನ ಜೈಲಿನಲ್ಲಿದ್ದಾರೆ.