ವೆನೆಜುವೆಲಾದ ಅಧ್ಯಕ್ಷರ ಭವನದ ಬಳಿ ಮತ್ತೆ ಗುಂಡಿನ ದಾಳಿ ಮಾಡಿದ್ದು ಯಾರು ? ತಾನಲ್ಲ ಎಂದ ಅಮೆರಿಕ
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನದ ಬಳಿಕ ಮಂಗಳವಾರ ಬೆಳಗ್ಗೆ ಭಾರಿ ಗುಂಡಿನ ದಾಳಿಯಾಗಿದ್ದು, ಇದರಲ್ಲಿ ಯುಎಸ್ ಪಡೆಗಳು ಭಾಗಿಯಾಗಿಲ್ಲ ಎಂದು ಅಮೆರಿಕ ಹೇಳಿದೆ. ಕ್ಯಾರಕಾಸ್‌ನಲ್ಲಿರುವ ವೆನೆಜುವೆಲಾದ ಅಧ್ಯಕ್ಷರ ಭವನದ ಮಂಗಳವಾರ ಬೆಳಗ್ಗೆ ಬಳಿ ಗುಂಡಿನ ದಾಳಿ ನಡೆದಿದ್ದು, ಡ್ರೋನ್‌ಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
(ಸಂಗ್ರಹ ಚಿತ್ರ) -
ಕ್ಯಾರಕಾಸ್: ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆಗೆ ಸಹಕಾರ ನೀಡುತ್ತಿದ್ದ ಆರೋಪದಲ್ಲಿ ಕಳೆದ ಶನಿವಾರ ಯುಎಸ್ ಸೇನಾ ಪಡೆಯು (US army) ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ (Venezuelan President Nicolás Maduro) ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿತ್ತು. ಇದಾದ ಬಳಿಕ ವೆನೆಜುವೆಲಾದಲ್ಲಿ ನಡೆದ ಬೆಳವಣಿಗೆಯಲ್ಲಿ ಉಪಾಧ್ಯೆಕ್ಷೆ ಡೆಲ್ಸಿ ರೊಡ್ರಿಗಸ್ ಮಡುರೊ (Delcy Rodriguez Maduro) ಅವರು ವೆನೆಜುವೆಲಾದ (Venezuela) ನೂತನ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಮಂಗಳವಾರ ಕ್ಯಾರಕಾಸ್‌ನಲ್ಲಿರುವ ವೆನೆಜುವೆಲಾದ ಅಧ್ಯಕ್ಷರ ಭವನದ ಬಳಿ ಭಾರಿ ಗುಂಡಿನ ದಾಳಿಯಾಗಿದ್ದು, ಕೆಲವು ಡ್ರೋನ್‌ಗಳು ಹಾರಾಡಿವೆ ಎನ್ನಲಾಗಿದೆ.
ಕ್ಯಾರಕಾಸ್‌ನಲ್ಲಿರುವ ವೆನೆಜುವೆಲಾದ ಕ್ಯಾರಕಾಸ್‌ನಲ್ಲಿರುವ ಮಿರಾಫ್ಲೋರ್ಸ್ ಅಧ್ಯಕ್ಷರ ಭವನದ ಬಳಿ ಮಂಗಳವಾರ ನಡೆದ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಅಮೆರಿಕ ತಿಳಿಸಿದೆ. ಆದರೆ ಗುಂಡಿನ ದಾಳಿ ಮತ್ತು ಡ್ರೋನ್ ಚಟುವಟಿಕೆಯು ಕ್ಯಾರಕಾಸ್‌ನಲ್ಲಿ ಭದ್ರತಾ ಆತಂಕವನ್ನು ಹೆಚ್ಚಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಶ್ವೇತಭವನ, ವೆನೆಜುವೆಲಾದ ಅಧ್ಯಕ್ಷರ ಭವನದ ಬಳಿ ನಡೆದ ದಾಳಿಯಲ್ಲಿ ಅಮೆರಿಕ ಭಾಗಿಯಾಗಿಲ್ಲ. ವೆನೆಜುವೆಲಾ ಅಧ್ಯಕ್ಷರ ಭವನದ ಸಂಕೀರ್ಣದ ಬಳಿ ಅಪರಿಚಿತ ಡ್ರೋನ್‌ಗಳು ಕಂಡು ಬಂದಿವೆ. ಇದರಿಂದ ಭದ್ರತಾ ಪಡೆಗಳು ತಕ್ಷಣ ಪ್ರತಿಕ್ರಿಯಿಸಿ ಗುಂಡಿನ ದಾಳಿ ನಡೆಸಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಹೇಳಿದೆ.
BREAKING: Small arms or anti-aircraft fire heard in Caracas, Venezuela pic.twitter.com/rBNRrNfN4l
— BNO News Live (@BNODesk) January 6, 2026
ವೆನೆಜುವೆಲಾ ಅಧ್ಯಕ್ಷರ ಭವನದ ಸಮೀಪ ಸೇರಿದಂತೆ ಕ್ಯಾರಕಾಸ್‌ನ ಕೆಲವು ಭಾಗಗಳಲ್ಲಿ ಸುಮಾರು 45 ನಿಮಿಷಗಳ ಕಾಲ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ವೇಳೆ ಡ್ರೋನ್, ವಿಮಾನದ ಶಬ್ದಗಳು ಕೇಳಿಬಂದಿವೆ ಮತ್ತು ಸುತ್ತಮುತ್ತ ವಿದ್ಯುತ್ ಕಡಿತಗೊಂಡಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ಅದು ತಿಳಿಸಿದೆ.
ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗುಂಡಿನ ದಾಳಿಯ ಸದ್ದು ಮತ್ತು ಸಶಸ್ತ್ರ ಸಿಬ್ಬಂದಿ ಕ್ಯಾರಕಾಸ್‌ನ ಬೀದಿಗಳಲ್ಲಿ ಓಡುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ.
ನಿಕೋಲಸ್ ಮಡುರೊ ಅವರ ಸ್ನೇಹಿತೆ ಮತ್ತು ದೇಶದ ಉಪಾಧ್ಯಕ್ಷೆಯಾಗಿದ್ದ ಡೆಲ್ಸಿ ರೊಡ್ರಿಗಸ್ ಮಡುರೊ ಅವರು ದೇಶದ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ದೇಶದ ರಾಜಧಾನಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆಯೇ ಈ ದಾಳಿಯ ಘಟನೆಗಳು ವರದಿಯಾಗಿದೆ. ನಿಕೋಲಸ್ ಮಡುರೊ ಅವರನ್ನು ಬಂಧಿಸಿರುವ ಯುಎಸ್ ಮಿಲಿಟರಿ ಪಡೆಗಳು ಅವರನ್ನು ನ್ಯೂಯಾರ್ಕ್ ಗೆ ಕರೆದುಕೊಂಡು ಹೋಗಿವೆ.
ಡೆಲ್ಸಿ ರೊಡ್ರಿಗಸ್ ಮಡುರೊ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಅವರು ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿದ್ದಾರೆ. ಅಮೆರಿಕದ ಕಾರ್ಯಾಚರಣೆಯನ್ನು ಬೆಂಬಲಿಸಿರುವವರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.
ಹಸೀನಾರನ್ನೂ ವಾಪಸ್ ಕಳುಹಿಸಿ: ಬಾಂಗ್ಲಾದೇಶ ಕ್ರಿಕೆಟರ್ ವಿರುದ್ಧದ ಬಿಸಿಸಿಐ ಕ್ರಮಕ್ಕೆ ಅಸಾದುದ್ದೀನ್ ಓವೈಸಿ ಕಿಡಿ
ಈ ನಡುವೆ ಸೋಮವಾರ ನ್ಯೂಯಾರ್ಕ್ ನಗರದ ಫೆಡರಲ್ ನ್ಯಾಯಾಲಯದ ಮುಂದೆ ಹಾಜರಾದಾಗ ಮಡುರೊ ಅವರು ತನ್ನ ಮೇಲೆ ಹೊರಿಸಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆಯೇ ಮಡುರೊ ಅವರು ಹೊಂದಿರುವ ಸ್ವಿಸ್ ಮೂಲದ ಆಸ್ತಿಗಳನ್ನು ತಕ್ಷಣ ಸ್ಥಗಿತಗೊಳಿಸುವುದಾಗಿ ಸ್ವಿಟ್ಜರ್ಲೆಂಡ್ ಘೋಷಿಸಿದೆ. ಆಸ್ತಿಗಳು ಅಕ್ರಮ ಮೂಲದ್ದಾಗಿವೆ ಎಂದು ಕಂಡುಬಂದರೆ ಅದರಿಂದ ವೆನೆಜುವೆಲಾ ಜನರಿಗೆ ಉಪಯೋಗವಾಗುವಂಥ ಕಾರ್ಯಗಳನ್ನು ನಡೆಸುವುದಾಗಿ ಅದು ಹೇಳಿದೆ.