ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುದ್ಧ ಆರಂಭವಾದ ಮೇಲೆ ಇರಾನ್‌ನಿಂದ ಮೊದಲ ಬಾರಿಗೆ ವಾಣಿಜ್ಯ ವಿಮಾನ ಹಾರಾಟ ಪ್ರಾರಂಭ

ಯುಎಸ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದ ಬಳಿಕ ಅಂದರೆ ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಇದೀಗ ಇರಾನ್‌ನಲ್ಲಿ ಮತ್ತೆ ಆರಂಭಗೊಂಡಿದೆ. ಟೆಹರಾನ್‌ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ಬಾರಿಗೆ ವಾಣಿಜ್ಯ ವಿಮಾನ ಹಾರಾಟವನ್ನು ಶನಿವಾರ ಪ್ರಾರಂಭಿಸಲಾಗಿದೆ.

ಯುದ್ಧದ ನಂತರ ಇರಾನ್‌ನಲ್ಲಿ ವಾಣಿಜ್ಯ ವಿಮಾನಗಳ ಮೊದಲ ಹಾರಾಟ

ಸಂಗ್ರಹ ಚಿತ್ರ -

ಟೆಹರಾನ್: ಸರಿಸುಮಾರು ಎರಡು ತಿಂಗಳ ಬಳಿಕ ಟೆಹರಾನ್‌ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ಬಾರಿಗೆ ವಾಣಿಜ್ಯ ವಿಮಾನ (commercial flights) ಹಾರಾಟವನ್ನು (Tehran’s Imam Khomeini International Airport) ಶನಿವಾರ ಪ್ರಾರಂಭಿಸಲಾಗಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್, ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ ಬಳಿಕ ಇರಾನ್ ವಾಣಿಜ್ಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಇದು ಈಗ ಮತ್ತೆ ಪುನರಾರಂಭಗೊಂಡಿದೆ. ಕದನ ವಿರಾಮವನ್ನು (ceasefire) ಮುಂದುವರಿಸಲು ಯುಎಸ್ ಮುಂದಾಗಿರುವುದರಿಂದ ಇರಾನ್ ವಿಮಾನ ಹಾರಾಟವನ್ನು ಮತ್ತೆ ಪ್ರಾರಂಭಿಸಿದೆ.

ಯುಎಸ್ ಮತ್ತು ಇಸ್ರೇಲ್ ಜೊತೆಗೆ ಸುಮಾರು ಎರಡು ತಿಂಗಳ ಹಿಂದೆ ಸಂಘರ್ಷ ಪ್ರಾರಂಭವಾದ ಬಳಿಕ ಮೊದಲ ಬಾರಿಗೆ ಇರಾನ್ ಶನಿವಾರ ಟೆಹರಾನ್‌ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನ ಹಾರಾಟವನ್ನು ಪುನರಾರಂಭಿಸಿದೆ. ಇಲ್ಲಿಂದ ವಿಮಾನಗಳು ಇಸ್ತಾನ್‌ಬುಲ್, ಒಮಾನ್‌ನ ಮಸ್ಕತ್ ಮತ್ತು ಸೌದಿ ಅರೇಬಿಯಾದ ಮದೀನಾಗೆ ಹೊರಟಿವೆ ಎಂದು ಸರ್ಕಾರಿ ಸ್ವಾಮ್ಯದ ದೂರದರ್ಶನ ವರದಿ ಮಾಡಿದೆ.

ಇಸ್ಲಾಮಾಬಾದ್‌ನಲ್ಲಿ ಇರಾನ್‌- ಅಮೆರಿಕ ಎರಡನೇ ಸುತ್ತಿನ ಮಾತುಕತೆ; ಪಾಕ್‌ಗೆ ಆಗಮಿಸಿದ ನಿಯೋಗ

ಅಮೆರಿಕ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ಬಳಿಕ ಇರಾನ್‌ನ ತನ್ನ ವಾಯುಪ್ರದೇಶವನ್ನು ಭಾಗಶಃ ಮತ್ತೆ ತೆರೆದ ವಿಮಾನ ಹಾರಾಟವನ್ನು ಪ್ರಾರಂಭಿಸಿದೆ. ಇಸ್ಲಾಮಾಬಾದ್‌ಗೆ ಶುಕ್ರವಾರ ರಾತ್ರಿ ಬಂದ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಪಾಕಿಸ್ತಾನದ ಉನ್ನತ ಮಿಲಿಟರಿ ಮತ್ತು ರಾಜಕೀಯ ನಾಯಕರೊಂದಿಗೆ ಎರಡು ಸುತ್ತಿನ ಸಭೆಗಳನ್ನು ನಡೆಸಿದರು. ಈ ಬಳಿಕ ಇರಾನ್ ವಿಮಾನ ಹಾರಾಟವನ್ನು ಪ್ರಾರಂಭಿಸಿದೆ.

ಅಮೆರಿಕದ ರಾಯಭಾರಿಗಳು ಶನಿವಾರ ಇಸ್ಲಾಮಾಬಾದ್‌ಗೆ ಬರುವ ನಿರೀಕ್ಷೆಯಿರುವುದರಿಂದ ಇರಾನ್ ನಿಯೋಗವು ಹಿರಿಯ ನಾಯಕರೊಂದಿಗೆ ಮಾತುಕತೆಯನ್ನು ಮುಂದುವರಿಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕದನ ವಿರಾಮ ಮಾತುಕತೆಗಳನ್ನು ಮುಂದುವರಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದೆ. ಆದರೆ ಇರಾನ್ ತಂಡವು ಅಮೆರಿಕದ ಪ್ರತಿನಿಧಿಗಳೊಂದಿಗಿನ ನೇರ ಮಾತುಕತೆ ನಡೆಸುವುದಿಲ್ಲ. ಅದು ಪಾಕಿಸ್ತಾನಿ ಅಧಿಕಾರಿಗಳ ಮೂಲಕ ಸಂದೇಶ ರವಾನಿಸಿದೆ ಎನ್ನಲಾಗಿದೆ.

ಕೃತಕ ಕಾಲು, ಸುಟ್ಟ ಮುಖ, ತುಟಿ: ಮೊಜ್ತಾಬಾ ಖಮೇನಿಗೆ ಶೀಘ್ರವೇ ಪ್ಲಾಸ್ಟಿಕ್ ಸರ್ಜರಿ?

ರಾಜತಾಂತ್ರಿಕ ಒತ್ತಡದ ಪರಿಣಾಮ ಕದನ ವಿರಾಮವು ಅನಿರ್ದಿಷ್ಟಾವಧಿಗೆ ಮುಂದುವರಿಸಲಾಗಿದೆ. ಇದರಿಂದ ಸಂಘರ್ಷವನ್ನು ಸದ್ಯಕ್ಕೆ ಎರಡೂ ಪಕ್ಷಗಳು ಸ್ಥಗಿತಗೊಳಿಸಿವೆ. ಆದರೆ ಹೊರ್ಮುಜ್ ಜಲ ಮಾರ್ಗದಲ್ಲಿ ಅಡಚಣೆಯನ್ನು ಹಾಗೇ ಮುಂದುವರಿಸಲಾಗಿದೆ. ಇದನ್ನು ತೆರವುಗೊಳಿಸುವ ಪ್ರಯತ್ನವನ್ನು ಮುಂದುವರಿಸಲಾಗಿದೆ. ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ಮುಂದುವರಿಸುವ ಘೋಷಣೆ ಮಾಡಿದ ಬಳಿಕ ಇಸ್ಲಾಮಾಬಾದ್ ರಾಜತಾಂತ್ರಿಕತೆಗೆ ಹೆಚ್ಚಿನ ಸಮಯ ನೀಡುವಂತೆ ಕೇಳಿದ್ದು, ಇರಾನ್ ತಂಡವನ್ನು ಮಾತುಕತೆಗೆ ಕರೆಯುವ ಪ್ರಯತ್ನವನ್ನು ಮುಂದುವರಿಸಿದೆ.