ಬೆಂಗಳೂರು, ಡಿ. 31: ಹೊಸ ವರ್ಷಾಚರಣೆ (New Year 2026)ಗೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಭಿನ್ನವಾಗಿ ವಿಜೃಂಭಣೆಯಿಂದ ಹೊಸ ವರ್ಷವನ್ನು ಆಚರಿಸಲು ಜನರು ಕಾತುರರಾಗಿದ್ದಾರೆ. ಡಿಸೆಂಬರ್ 31ರ ಮಧ್ಯರಾತ್ರಿ 12 ಆಗುತ್ತಿದ್ದಂತೆ ಎಲ್ಲರೂ ಹ್ಯಾಪಿ ನ್ಯೂ ಇಯರ್ (Happy New Year) ಎಂದು ಸೆಲೆಬ್ರೆಟ್ ಮಾಡುತ್ತಾರೆ. ಆದರೆ ಎಲ್ಲರೂ ಒಂದೇ ಸಮಯದಲ್ಲಿ ಹೊಸ ವರ್ಷ ಆಚರಿಸುವುದಿಲ್ಲ. ಹಾಗಾದರೆ ಹೊಸ ವರ್ಷವನ್ನು ಅಚರಿಸುವ ಮೊದಲ ಹಾಗೂ ಕೊನೆಯ ದೇಶ ಯಾವುದು ಎಂದು ನೋಡೋಣ ಬನ್ನಿ.
ಹೊಸ ವರ್ಷ ಆಚರಿಸುವ ಮೊದಲ ದೇಶ ಕಿರಿತಿಮತಿ
ಭೂಮಿಯನ್ನು 24 ಮುಖ್ಯ ಸಮಯ ವಲಯಗಳಾಗಿ ವಿಂಗಡಿಸಿರುವುದರಿಂದ, ನೀವು ಎಲ್ಲಿದ್ದೀರಿ ಎಂಬುದರ ಆಧಾರದ ಮೇಲೆ ಹೊಸ ವರ್ಷವನ್ನ ವಿಭಿನ್ನ ಸಮಯಗಳಲ್ಲಿ ಆಚರಿಸಲಾಗುತ್ತದೆ. ಅದರಂತೆ 2026ರಲ್ಲಿ ದ್ವೀಪವಾದ ಕಿರಿತಿಮತಿ (Kiritimati)ಯಲ್ಲಿ ಮೊದಲು ಹೊಸ ವರ್ಷವನ್ನ ಆಚರಿಸಲಾಗುತ್ತದೆ. ಈ ದ್ವೀಪ 1,20,000 ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿರುವ ಬನಾನಾ (Banana), ಪ್ಯಾರಿಸ್ (Paris), ಪೋಲೆಂಡ್ (Poland) ಮತ್ತು ಲಂಡನ್ (London) ಎಂಬ ಹಳ್ಳಿಗಳ ಜನರು ಹೊಸ ವರ್ಷವನ್ನು ವಿಶ್ವದಲ್ಲೇ ಮೊದಲು ಆಚರಿಸುತ್ತಾರೆ.
ಕಿರಿತಿಮತಿ ಬಳಿಕ ನ್ಯೂಜಿಲೆಂಡ್ (New Zealand)ನ ಚಾಥಮ್ (Chatham) ದ್ವೀಪಗಳು 5.15 am EST (3:45 pm IST)ಕ್ಕೆ ಸೇರಿಕೊಳ್ಳುತ್ತವೆ. ನಂತರ ನ್ಯೂಜಿಲೆಂಡ್‌ನ ಪ್ರಮುಖ ನಗರಗಳಾದ ಆಕ್ಲೆಂಡ್ (Auckland) ಮತ್ತು ವೆಲ್ಲಿಂಗ್‌ಟನ್ (Wellington)ನಲ್ಲಿ 6 am ESTಗೆ ಹೊಸ ವರ್ಷ ಆಚರಿಲಾಗುತ್ತದೆ. ಅಂದರೆ ಭಾರತೀಯ ಕಾಲಮಾನದಲ್ಲಿ ಸಂಜೆ 4.30ಕ್ಕೆ ನ್ಯೂಜಿಲ್ಯಾಂಡ್ ಜನರು ಹೊಸ ವರ್ಷವನ್ನ ಆಚರಿಸುತ್ತಾರೆ.
ಬಳಿಕ ಆಸ್ಟ್ರೇಲಿಯಾ (Australia)ದ ಅಡಿಲೇಡ್ (Adelaide), ಬ್ರೋಕನ್ ಹಿಲ್ (Broken Hill) ಮತ್ತು ಸೆಡುನಾ (Sedona)ದಂತಹ ನಗರಗಳು, ನಂತರ ಕ್ವೀನ್ಸ್‌ಲ್ಯಾಂಡ್ (ಕ್ವೀನ್ಸ್‌ಲ್ಯಾಂಡ್) ಮತ್ತು ಉತ್ತರ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷ ಪ್ರಾರಂಭವಾಗುತ್ತದೆ. ಇನ್ನು ರಾತ್ರಿ 7.30ಕ್ಕೆ (IST) ಸಿಡ್ನಿ, ಮೆಲ್ಬೋರ್ನ್, ಕ್ಯಾನ್‌ಬೆರಾ ಮತ್ತು ಫಿಜಿಯಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಕ್ವೀನ್ಸ್‌ಲ್ಯಾಂಡ್, ಉತ್ತರ ಆಸ್ಟ್ರೇಲಿಯಾದ ಕಡೆಗೆ, ಆಚರಣೆಗಳು ರಾತ್ರಿ 8 ಗಂಟೆಗೆ (IST) ನಡೆಯಲಿದೆ.
ಹೊಸ ವರ್ಷ ಸ್ವಾಗತಿಸುವ ಕೊನೆಯ ದೇಶ 'ಅಮೆರಿಕನ್ ಸಮೋವಾ'
2026ರಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಕೊನೆಯ ದೇಶ ಅಮೆರಿಕನ್ ಸಮೋವಾ. ಅಮೇರಿಕನ್ ಸಮೋವಾ ಅಂತಾರಾಷ್ಟ್ರೀಯ ದಿನಾಂಕ ರೇಖೆಯ ಪಶ್ಚಿಮಕ್ಕೆ ನೆಲೆಗೊಂಡಿರುವುದರಿಂದ, ಹೊಸ ವರ್ಷಕ್ಕೆ ಕಾಲಿಡುವ ಭೂಮಿಯ ಮೇಲಿನ ಕೊನೆಯ ಸ್ಥಳಗಳಲ್ಲಿ ಒಂದಾಗಿದೆ. ಈ ದ್ವೀಪವು 2026 ಅನ್ನು ಜನವರಿ 1ರಂದು 11:00 PM UTC ಕ್ಕೆ ಸ್ವಾಗತಿಸುತ್ತದೆ, ಇದು ಹೊಸ ವರ್ಷದ ಆಚರಿಸುವ ಕೊನೆಯ ಸ್ಥಳ.