ನವದೆಹಲಿ, ನ. 24: ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಅಂಡರ್ ಕವರ್ ಬ್ರಿಟಿಷ್ ಏಜೆಂಟ್ ಆಗಿ ಫ್ರೆಂಚ್ ನಿರೋಧಕದಲ್ಲಿ ಸಲ್ಲಿಸಿದ ಸೇವೆಗಾಗಿ ಪ್ರಾನ್ಸ್(France) ಪೋಸ್ಟೇಜ್ ಸ್ಟ್ಯಾಂಪ್ (Postage Stamp) ಬಿಡುಗಡೆ ಮಾಡುವ ಮೂಲಕ ಗೌರವ (Honour) ಸೂಚಿಸಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನನ ವಂಶದವಳಾಗಿರುವ ನೂರ್ ಇನಾಯತ್ ಖಾನ್(Noor Inayat Khan) ಫ್ರಾನ್ಸ್‌ನಲ್ಲಿ ಈ ಗೌರವಕ್ಕೆ ಪಾತ್ರರಾದ ಪ್ರಥಮ ಭಾರತೀಯ (Indian) ಮೂಲದ ಮಹಿಳೆ ಎನಿಸಿಕೊಡಿದ್ದಾರೆ.
ಫ್ರಾನ್ಸ್ ದೇಶದ ಪೋಸ್ಟಲ್ ಸೇವೆಯಾಗಿರುವ ಲಾ ಪೋಸ್ಟೆ ‘ಫಿಗರ್ಸ್ ಆಫ್ ರೆಸಿಸ್ಟೆನ್ಸ್’ ಹೆಸರಿನಲ್ಲಿ ಹೊರ ತಂದಿರುವ ಅಂಚೆ ಚೀಟಿಯಲ್ಲಿ ನೂರ್ ಈ ಗೌರವವನ್ನು ಪಡೆದುಕೊಂಡಿದ್ದಾರೆ. ಅಂದ ಹಾಗೆ ರೆಸಿಸ್ಟೆನ್ ಫೋರ್ಸ್ ಎಂಬುದು ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿಯ ನಾಝಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ದಳವಾಗಿತ್ತು. ವಿಶ್ವಯುದ್ಧ ಮುಕ್ತಾಯಗೊಂಡು 80 ವರ್ಷಗಳು ಸಲ್ಲುತ್ತಿರುವ ಹಿನ್ನಲೆಯಲ್ಲಿ ಸಮರ ಸೇನಾನಿಗಳ ಅಂಚೆ ಚೀಟಿ ಪಟ್ಟಿಯಲ್ಲಿ ಈಕೆಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಶ್ರಬಾನಿ ಬಸು ಅವರ ಎಕ್ಸ್ ಪೋಸ್ಟ್:
‘ನೂರ್ ಇನಾಯತ್ ಖಾನ್ ಅವರನ್ನು ಫ್ರಾನ್ಸ್ ಸರಕಾರ ಅಂಚೆ ಚೀಟಿ ಮೂಲಕ ಗೌರವ ಸಲ್ಲಿಸುತ್ತಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ.’ ಎಂದು ನೂರ್ ಅವರ ಜೀವನ ಚರಿತ್ರೆಯನ್ನು ಬರೆದಿರುವ ಲಂಡನ್ ಮೂಲದ ಲೇಖಕಿ ಶ್ರಬಾನಿ ಬಸು ಪ್ರತಿಕ್ರಿಯಿಸಿದ್ದಾರೆ. ಬಸು ಅವರು ‘ಸ್ಪೈ ಪ್ರಿನ್ಸೆಸ್ : ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ಎಂಬ ಪುಸ್ತಕದ ಲೇಖಕಿ.
‘ಫ್ಯಾಸಿಸಂ ವಿರುದ್ಧ ಹೋರಾಟದಲ್ಲಿ ನೂರ್ ಇನಾಯತ್ ಖಾನ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಫ್ರಾನ್ಸ್‌ನಲ್ಲಿ ಬೆಳೆದ ಆಕೆ, ಇಂಗ್ಲೆಂಡ್‌ನಲ್ಲಿ ಸೇನಾನಿಯಾಗಿ ಸೇರ್ಪಡೆಗೊಂಡರು. ಇದೀಗ ಅಂಚೆ ಚೀಟಿಯಲ್ಲಿ ಆಕೆಯನ್ನು ನೋಡುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಬಸು ಪ್ರತಿಕ್ರಿಯಿಸಿದ್ದಾರೆ. ಈ ಅಂಚೆ ಚೀಟಿಯಲ್ಲಿ ನೂರ್ ಇನಾಯತ್ ಖಾನ್ ಬ್ರಿಟಿಷ್ ವಿಮೆನ್ಸ್ ಆಕ್ಸಿಲರಿ ಏರ್ ಫೋರ್ಸ್ ನ ಸಮವಸ್ತ್ರದಲ್ಲಿರುವ ಫೊಟೋದಲ್ಲಿದ್ದಾರೆ. 2014ರಲ್ಲಿ ಆಕೆ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಆಕೆಯ ಸೇವೆಯನ್ನು ಸ್ಮರಿಸಿಕೊಂಡಿತ್ತು.
ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ
ನೂರ್-ಉನ್ನೀಸಾ ಇನಾಯತ್ ಖಾನ್ 1914ರಲ್ಲಿ ಭಾರತೀಯ ಸೂಫಿ ಸಂತ ತಂದೆಗೆ ಮತ್ತು ಅಮೆರಿಕನ್ ತಾಯಿಗೆ ಮಗಳಾಗಿ ಮಾಸ್ಕೋದಲ್ಲಿ ಜನಿಸಿದ್ದರು. ತನ್ನ ಶಾಲಾ ದಿನಗಳನ್ನು ಫ್ರಾನ್ಸ್ ನಲ್ಲಿ ಕಳೆದಿದ್ದ ನೂರ್ ಆ ಬಳಿಕ, ಎರಡನೇ ವಿಶ್ವ ಯುದ್ಧದಲ್ಲಿ ಫ್ರಾನ್ಸ್ ಕುಸಿತವಾಗುವುದರೊಂದಿಗೆ ಈ ಕುಟುಂಬ ಇಂಗ್ಲೆಂಡ್ ಗೆ ಪಲಾಯನ ಮಾಡಿತ್ತು. ಅಲ್ಲಿ ನೂರ್ ಅವರು ಡಬ್ಲ್ಯು.ಎ.ಎ.ಎಫ್.ಗೆ ಸೇರ್ಪಡೆಗೊಂಡಿದ್ದರು.
1943ರ ಫೆಬ್ರವರಿ 8ರಂದು ಆಕೆಯನ್ನು ವಿಶೇಷ ಕಾರ್ಯಾಚರಣೆಯ ಪ್ರತಿನಿಧಿಯಾಗಿ ನೇಮಕಗೊಳಿಸಲಾಗಿತ್ತು. ಫ್ರಾನ್ಸ್ ಆಕ್ರಮಿತ ಪ್ರದೇಶದೊಳಗೆ ಒಳನುಸುಳಿದ ಪ್ರಥಮ ಮಹಿಳಾ ರೇಡಿಯೋ ಅಪರೇಟರ್ ಎಂಬ ಖ್ಯಾತಿ ಈಕೆಗಿದೆ. ಅಲ್ಲಿ ಆಕೆ ನಾಝಿ ಯೋಧರಿಂದ ಬಂಧಿಸಲ್ಪಟ್ಟು ಡಾಚು ಕಾಂನ್ಸೆಂಟ್ರೇಶನ್ ಕ್ಯಾಂಪ್‌ಗೆ ತಳ್ಳಲಾಗಿತ್ತು ಮತ್ತು ಆಕೆಯನ್ನು ಹಿಂಸೆಗೊಳಪಡಿಸಿ 1944ರ ಸೆ.13ರಂದು ಹತ್ಯೆಗೈಲಾಯಿತು. ಆ ಸಂದರ್ಭದಲ್ಲಿ ಆಕೆಗೆ ಕೇವಲ 30 ವರ್ಷವಾಗಿತ್ತು.
ಈಕೆಯ ಶೌರ್ಯ ಸಾಧನೆಗಾಗಿ ನೂರ್ ಅವರಿಗೆ ಫ್ರೆಂಚ್ ರೆಸಿಸ್ಟೆಂಟ್ ಮೆಡಲ್ ಮತ್ತು ಫ್ರೆಂಚ್ ಸರಕಾರದ ಅತ್ಯುನ್ನತ ನಾಗರಿಕ ಗೌರವ, ಕ್ರೊಯಿಕ್ಸ್ ದೆ ಗುರ್ರೆ ನೀಡಿತ್ತು. ಮಾತ್ರವಲ್ಲದೆ ಬ್ರಿಟಿಷ್ ಸರ್ಕಾರ ಮರಣೋತ್ತರವಾಗಿ ಜಾರ್ಜ್ ಕ್ರಾಸ್ (ಜಿಸಿ) ಅನ್ನು 1949ರಲ್ಲಿ ನೀಡಿತು.