ಫ್ರಾನ್ಸ್: ಪ್ರತಿಭಟನೆ (student protest) ವೇಳೆ ಬಾಲಕನೊಬ್ಬ ಗ್ರೆನೇಡ್ (sting-ball grenade) ಎತ್ತಿಕೊಂಡಿದ್ದು ಅದು ಸ್ಪೋಟಗೊಂಡು ಕೈಯನ್ನು ಕಳೆದುಕೊಂಡ ಘಟನೆ ಫ್ರಾನ್ಸ್ (France) ನಲ್ಲಿ ನಡೆದಿದೆ. ಫ್ರಾನ್ಸ್ ನ ಉತ್ತರ ಪಟ್ಟಣವಾದ ಲೆನ್ಸ್‌ನಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕ ಪೊಲೀಸರು (clash with police) ಹಾರಿಸಿದ ಸ್ಟಿಂಗ್ ಬಾಲ್ ಗ್ರೆನೇಡ್ ಅನ್ನು ಎತ್ತಿಕೊಂಡಿದ್ದಾನೆ. ಅದು ತಕ್ಷಣ ಸ್ಪೋಟಗೊಂಡು ಆತ ತನ್ನ ಕೈಯನ್ನು ಕಳೆದುಕೊಳ್ಳುವಂತಾಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನದು ಸ್ಥಳೀಯ ಪೊಲೀಸ್ (France police) ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕರ ಗೈರು, ತರಗತಿ ವೇಳಾ ಪಟ್ಟಿಯ ಹೊರೆ, ತರಗತಿ ಅವ್ಯವಸ್ಥೆಯನ್ನು ವಿರೋಧಿಸಿ ಕಳೆದ ಸೆಪ್ಟೆಂಬರ್ ತಿಂಗಳ ಅಂತ್ಯದಿಂದ ಫ್ರಾನ್ಸ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದು ಸೋಮವಾರ ತೀವ್ರಗೊಂಡಿದೆ. ಉತ್ತರ ಪಟ್ಟಣವಾದ ಲೆನ್ಸ್‌ನಲ್ಲಿ ಹೈಸ್ಕೂಲ್ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಪೊಲೀಸರು ಬಿಸಾಡಿದ ಗ್ರೆನೇಡ್ ಅನ್ನು ಎತ್ತಿಕೊಂಡಿದ್ದು, ಅದು ಆತನ ಕೈಯಲ್ಲಿ ಸ್ಪೋಟಗೊಂಡಿದೆ.
ಎಸ್‌ಐಆರ್ ವಿರೋಧಿಸಿ 'ಇಂಡಿಯಾ' ಒಕ್ಕೂಟ ಪ್ರತಿಭಟನೆ: ಚುನಾವಣಾ ಆಯೋಗದ ಕಚೇರಿಗೆ ಬಿಗಿ ಭದ್ರತೆ
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಸ್ಟಿಂಗ್ ಬಾಲ್ ಗ್ರೆನೇಡ್ ಬಿಸಾಡಿದ್ದಾರೆ. ಅದನ್ನು 15 ವರ್ಷದ ಬಾಲಕ ಎತ್ತಿಕೊಂಡಿದ್ದು, ಅದು ಆತನ ಕೈಯಲ್ಲೇ ಸ್ಪೋಟಗೊಂಡಿದೆ. ಪರಿಣಾಮ ಬಾಲಕ ಕೈಯನ್ನು ಕಳೆದುಕೊಂಡಿದ್ದಾನೆ. ಉತ್ತರ ಪಾಸ್-ಡಿ-ಕಲೈಸ್ ಪ್ರದೇಶದ ಪ್ರಿಫೆಕ್ಟ್ ಫ್ರಾಂಕೋಯಿಸ್ ಕ್ಸೇವಿಯರ್ ಲಾಚ್ ಕೈಕಳೆದುಕೊಂಡ ಬಾಲಕ. ಆತನನ್ನು ಲಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ ಏಕೆ?
ಕಳೆದ ಸೆಪ್ಟೆಂಬರ್ ತಿಂಗಳ ಅಂತ್ಯದಿಂದ ಫ್ರಾನ್ಸ್‌ನಲ್ಲಿ 15 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಶಿಕ್ಷಕರ ಗೈರು ಹಾಜರಿ, ತರಗತಿ ಅವ್ಯವಸ್ಥೆ,ಶಾಲಾ ವೇಳಾಪಟ್ಟಿಯ ಹೊರೆ, ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಶಾಲಾ ತರಗತಿಯನ್ನು ನಡೆಸುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ದೇಶಾದ್ಯಂತ ನೂರಾರು ಶಾಲೆಗಳನ್ನು ನಿರ್ಬಂಧಿಸಿದ್ದಾರೆ. ಪ್ರತಿಭಟನಾಕಾರರೊಂದಿಗೆ ಸರ್ಕಾರವು ನಿರಂತರ ಮಾತುಕತೆ ನಡೆಸುತ್ತಿದ್ದು, ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದೆ.
ಪತ್ರಕರ್ತೆಗೆ ಲೈಂಗಿಕ ಕಿರುಕುಳ ಆರೋಪ: ವಿವಾದದ ಬೆನ್ನಲ್ಲೇ ಎಸಿಪಿ ವಿವೇಕ್ ಭಗತ್ ಬಡ್ತಿಗೆ ತಡೆ
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಸೋಮವಾರ ಫ್ರಾನ್ಸ್‌ನ ಒಟ್ಟು 3,700 ಪ್ರೌಢಶಾಲೆಗಳ ಪೈಕಿ 500ಕ್ಕೂ ಹೆಚ್ಚು ಶಾಲೆಗಳು ಮುಚ್ಚಲ್ಪಟ್ಟವು. ಈ ನಡುವೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯಲ್ಲಿ 215 ವಿದ್ಯಾರ್ಥಿಗಳು, 715 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.