ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತ್ರಕರ್ತೆಗೆ ಲೈಂಗಿಕ ಕಿರುಕುಳ ಆರೋಪ: ವಿವಾದದ ಬೆನ್ನಲ್ಲೇ ಎಸಿಪಿ ವಿವೇಕ್ ಭಗತ್ ಬಡ್ತಿಗೆ ತಡೆ

ACP Vivek Bhagat: ದೆಹಲಿಯ ಪೊಲೀಸ್ ಅಧಿಕಾರಿ ವಿವೇಕ್ ಭಗತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಇದರಿಂದಾಗಿ ಅವರ ಹುದ್ದೆ ಬಡ್ತಿಗೆ ತಡೆ ನೀಡಲಾಗಿದೆ. ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರಿಗೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ (ಎಡಿಸಿಪಿ) ಹುದ್ದೆಗೆ ಬಡ್ತಿ ಮಾಡುವ ನಿರ್ಧಾರಕ್ಕೆ ತಡೆಹಿಡಿಯಲಾಗಿದೆ ಎಂದು ದೆಹಲಿ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಎಸಿಪಿ ವಿವೇಕ್ ಭಗತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಸಂಗ್ರಹ ಚಿತ್ರ -

ನವದೆಹಲಿ: ಪೊಲೀಸ್ ಅಧಿಕಾರಿ ವಿವೇಕ್ ಭಗತ್ (ACP Vivek Bhagat) ವಿರುದ್ಧ ಲೈಂಗಿಕ ಕಿರುಕುಳದ (Physically harassment) ಆರೋಪದ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಹುದ್ದೆ ಬಡ್ತಿ ಆದೇಶಕ್ಕೆ ತಡೆ ಹಿಡಿಯಲಾಗಿದೆ. ಈ ಕುರಿತು ಸೋಮವಾರ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿ ಸರ್ಕಾರ (Delhi govt), ಅಧಿಕಾರಿಗಳಿಗೆ ಹೆಚ್ಚುವರಿ ಕರ್ತವ್ಯದ ಹೊಣೆಗಾರಿಕೆಯನ್ನು (CDC) ವಹಿಸುವ ಪ್ರಸ್ತಾವನೆಯನ್ನು ಆಗಸ್ಟ್ 25ರಂದು ಆರಂಭಿಸಲಾಗಿತ್ತು. ಅಕ್ಟೋಬರ್ 5 ರಂದು ಸೂಕ್ತ ಅನುಮೋದನೆ ಪಡೆದ ಅನಂತರ ಈ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಸೋಮವಾರ ರಾತ್ರಿ ಹೇಳಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಎಸಿಪಿ ವಿವೇಕ್ ಭಗತ್ ಅವರಿಗೆ ನೀಡಲಾಗಿದ್ದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಅಡಿಷನಲ್ ಡಿಸಿಪಿ) ಹುದ್ದೆಯ ಹೊಣೆಗಾರಿಕೆ ನೀಡುವ ನಿರ್ಧಾರಕ್ಕೆ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ.

ಮಗುವಿನ ಚಿಕಿತ್ಸೆಯ ಸಾಲ ಮತ್ತು ಕೌಟುಂಬಿಕ ಕಲಹ: ಮನನೊಂದು ಆತ್ಮಹತ್ಯಗೆ ಶರಣಾದ 28 ವರ್ಷದ ಟೆಕ್ಕಿ

ದೆಹಲಿ ಸರ್ಕಾರವು ವಿವೇಕ್ ಭಗತ್ ಸೇರಿದಂತೆ ಒಟ್ಟು 12 ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಮನ್ ಮತ್ತು ದಿಯು ಹಾಗೂ ದಾದ್ರಾ ಮತ್ತು ನಗರ ಹವೇಲಿ ಪೊಲೀಸ್ ಸೇವೆ ಅಧಿಕಾರಿಗಳಿಗೆ ಹೆಚ್ಚುವರಿ ಡಿಸಿಪಿ ಹುದ್ದೆಯ ಸಿಡಿಸಿಯನ್ನು ವಹಿಸಿ ಆದೇಶ ಹೊರಡಿಸಿತ್ತು.

ಈ ಕುರಿತು ಪ್ರಸ್ತಾವನೆಯನ್ನು ಆಗಸ್ಟ್ 25 ರಂದು ಸಲ್ಲಿಸಲಾಗಿತ್ತು. ಇದರ ಬಳಿಕ ವಿವೇಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಬಡ್ತಿ ಆದೇಶಕ್ಕೆ ತಡೆ ಹಿಡಿಯಲಾಗಿದೆ. ಬಡ್ತಿಗೆ ಸಂಬಂಧಿಸಿ ಅಕ್ಟೋಬರ್ 5 ರಂದು ಸೂಕ್ತ ಅನುಮೋದನೆ ಪಡೆದು ಬಳಿಕ ಈ ಆದೇಶಗಳನ್ನು ಹೊರಡಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.

ಹೆಚ್ಚುವರಿ ಕರ್ತವ್ಯದ ಹೊಣೆಗಾರಿಕೆ ವಹಿಸುವುದು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಇದರಿಂದ ಅಧಿಕಾರಿಗಳಿಗೆ ಯಾವುದೇ ಆರ್ಥಿಕ ಲಾಭ ಸಿಗುವುದಿಲ್ಲ. ಈ ಹೊಣೆಗಾರಿಕೆ ಪಡೆದ ಅಧಿಕಾರಿಗಳು ಆ ಹುದ್ದೆಯ ಮೂಲ ಅಧಿಕಾರಿಯ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಿವೇಕ್ ಭಗತ್ ವಿರುದ್ಧ ಮಹಿಳಾ ಪತ್ರಕರ್ತೆಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಮೊದಲು ಸಂಪೂರ್ಣ ತನಿಖೆ ನಡೆಸಲಾಗುತ್ತದೆ. ಅವರು ನಿರಪರಾಧಿ ಎಂಬುದು ಸಾಬೀತಾದ ಬಳಿಕ ಅವರಿಗೆ ಹೆಚ್ಚುವರಿ ಹುದ್ದೆ ನೀಡಬೇಕೇ ಬೇಡವೇ ಎನ್ನುವ ಕುರಿತು ತೀರ್ಮಾನಿಸಲಾಗುವುದು. ತನಿಖೆ ಮುಕ್ತಾಯಗೊಳ್ಳುವವರೆಗೆ ಸಿಡಿಸಿಯನ್ನು ಸ್ವೀಕರಿಸದಿರಲು ಎಸಿಪಿ ವಿವೇಕ್ ಭಗತ್ ಸ್ವಯಂಪ್ರೇರಣೆಯಿಂದ ಕೋರಿದ್ದಾರೆ. ಹೀಗಾಗಿ ಕೇವಲ 11 ಅಧಿಕಾರಿಗಳಿಗೆ ಮಾತ್ರ ಸಿಡಿಸಿ ವಹಿಸುವ ಕುರಿತು ಹೊಸ ಆದೇಶವನ್ನು ಹೊರಡಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಮಹಿಳಾ ಪತ್ರಕರ್ತೆಗೆ ಕಿರುಕುಳ ಆರೋಪ: ತನಿಖೆ ನಡುವೆಯೇ ಪೊಲೀಸ್ ಅಧಿಕಾರಿಗೆ ಬಡ್ತಿ!

ಅಕ್ಟೋಬರ್ 3 ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಎಸಿಪಿ ಭಗತ್ ಅವರಿಗೆ ಹೆಚ್ಚುವರಿ ಡಿಸಿಪಿ ಹುದ್ದೆಯ ಹೊಣೆಗಾರಿಕೆಯನ್ನು ವಹಿಸಲಾಗಿತ್ತು. ಈ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು.ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಮೂವರು ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. ಈ ದೂರುಗಳನ್ನು ತನಿಖೆಗಾಗಿ ಅಪರಾಧ ವಿಭಾಗಕ್ಕೆ ಒಪ್ಪಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.