Gujarati Man Dead: ಅಮೆರಿಕದಲ್ಲಿ ಶೂಟೌಟ್ - ಗುಜರಾತ್ ಮೂಲದ ವ್ಯಕ್ತಿಯ ಹತ್ಯೆ
ಅಮೆರಿಕದ ಅಂಗಡಿಯೊಂದರೊಳಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಗುಜರಾತ್ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರನ್ನು ಪರೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಕ್ಯಾಶ್ ಕೌಂಟರ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಬಂದೂಕುಧಾರಿ ದರೋಡೆಗೆ ಅಡ್ಡಿಪಡಿಸಿದ್ದಾಗ ದಾಳಿ ನಡೆಸಿದ್ದು, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಗುಜರಾತ್‌ನ ಡಿಂಗುಚಾ ಗ್ರಾಮದ ನಿವಾಸಿಯಾಗಿದ್ದಾರೆ.

ಗುಂಡಿನ ದಾಳಿ

ವಾಷಿಂಗ್ಟನ್: ಅಮೆರಿಕದ (United States) ಅಂಗಡಿಯೊಂದರಲ್ಲಿ ಗ್ರಾಹಕನಂತೆ ನಟಿಸಿದ ಬಂದೂಕುಧಾರಿಯೊಬ್ಬ (Gunman) ಗುಜರಾತಿನ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ (Shot Dead) ದಾರುಣ ಘಟನೆ ನಡೆದಿದ್ದು, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಗುಜರಾತ್‌ನ ಡಿಂಗುಚಾ ಗ್ರಾಮದ ನಿವಾಸಿಯಾದ ಪರೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಪರೇಶ್ ಪಟೇಲ್ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ, ದಾಳಿಕೋರನು ಗ್ರಾಹಕನಂತೆ ಒಳಗೆ ಪ್ರವೇಶಿಸಿ ಕ್ಯಾಶ್ ಕೌಂಟರ್‌ನಲ್ಲಿ ದರೋಡೆಗೆ ಯತ್ನಿಸಿದ. ಪಟೇಲ್ ಆತನ ಆದೇಶಗಳನ್ನು ಪಾಲಿಸಿದಾಗ, ಕೊಲೆಗಾರ ಎಲ್ಲಾ ಹಣವನ್ನು ದೋಚಿದ ನಂತರ ಗುಂಡಿಕ್ಕಿ ಕೊಂದಿದ್ದಾನೆ.
ಈ ವರ್ಷದ ಮಾರ್ಚ್‌ನಲ್ಲಿ, ಅಮೆರಿಕದ ವರ್ಜೀನಿಯಾದಲ್ಲಿ ನಡೆದ ಗುಂಡಿನ ದಾಳಿಯೊಂದರಲ್ಲಿ ತಂದೆ-ಮಗಳು ಕೊಲೆಯಾಗಿದ್ದರು. ಕೊಲೆಯಾದವರನ್ನು ಪ್ರದೀಪ್ ಪಟೇಲ್ ಮತ್ತು ಉರ್ಮಿ ಎಂದು ಗುರುತಿಸಲಾಗಿತ್ತು. ತಂದೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗಳು ಎರಡು ದಿನಗಳ ನಂತರ ಕೊನೆಯುಸಿರೆಳೆದಿದ್ದಳು. ಈ ಶೂಟಿಂಗ್‌ಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ನಂತರ ಬಂಧಿಸಲಾಗಿತ್ತು.
ಕನೋಡಾದ ಕಡ್ವಾ ಪಾಟಿದಾರ್ ಸಮುದಾಯದ ನಾಯಕ ಮತ್ತು ಪ್ರದೀಪ್ ಅವರ ಚಿಕ್ಕಪ್ಪ ಚಂದು ಪಟೇಲ್, ಸುದ್ದಿ ನೋಡಿದಾಗಲೇ ಈ ಆಘಾತಕಾರಿ ಘಟನೆಯ ಬಗ್ಗೆ ನಮ್ಮ ಕುಟುಂಬಕ್ಕೆ ಗೊತ್ತಾಯಿತು ಎಂದು ಹೇಳಿದ್ದಾರೆ. "ಮಾರ್ಚ್ 20ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಪ್ರದೀಪ್ ಮತ್ತು ಉರ್ಮಿ ತಮ್ಮ ಅಂಗಡಿಯನ್ನು ತೆರೆದ ಕೂಡಲೇ ಒಬ್ಬ ವ್ಯಕ್ತಿ ಒಳಗೆ ಬಂದು ಗುಂಡಿನ ದಾಳಿ ಆರಂಭಿಸಿದ. ಇಬ್ಬರೂ ಗುಂಡೇಟಿಗೆ ಒಳಗಾದರು. ಈ ಕೃತ್ಯವನ್ನು ಎಸಗಿದ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ" ಎಂದು ಅವರು ತಿಳಿಸಿದ್ದರು.
ಈ ಸುದ್ದಿಯನ್ನು ಓದಿ: Viral News: ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ- ನೆಟ್ಟಿಗರಿಂದ ಫುಲ್ ಟ್ರೋಲ್!
ಮಾರ್ಚ್ 20 ರಂದು ಬೆಳಗ್ಗೆ 5:30 ಕ್ಕೆ, ಕೊಲೆ ಆರೋಪಿ ಮದ್ಯ ಖರೀದಿಸಲು ಅಂಗಡಿಗೆ ಬಂದಿದ್ದ. ಇದಾದ ನಂತರ, ಅಂಗಡಿಯನ್ನು ರಾತ್ರಿ ಏಕೆ ತೆರೆಯಲಿಲ್ಲ ಎಂದು ತಂದೆಯೊಂದಿಗೆ ಜಗಳವಾಡಿ ತಂದೆ ಮತ್ತು ಮಗಳು ಇಬ್ಬರ ಮೇಲೂ ಗುಂಡು ಹಾರಿಸಿದ್ದ. ಪ್ರದೀಪ್ ಪಟೇಲ್, ಅವರ ಪತ್ನಿ ಹಂಸಬೆನ್ ಮತ್ತು ಮಗಳು ಉರ್ವಿ 6 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಪ್ರದೀಪ್‌ಭಾಯ್‌ಗೆ 3 ಹೆಣ್ಣು ಮಕ್ಕಳಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಅವರ ಮಗಳು, ಅಳಿಯ ಅಮೆರಿಕಕ್ಕೆ ತಲುಪಿದರು.
ಅಮೆರಿಕದಲ್ಲಿ ನಡೆದ ತಂದೆ-ಮಗಳ ಹತ್ಯೆ ಘಟನೆ ವಿದೇಶಗಳಲ್ಲಿ ವಾಸಿಸುವ ಭಾರತೀಯರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ತನಿಖೆಯ ನಂತರ ಒನಾನ್‌ಕಾಕ್‌ನ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ವಾರ್ಟನ್ ಪ್ರಸ್ತುತ ಕೊಲೆ, ಕೊಲೆ ಯತ್ನ, ಮತ್ತು ಮಾರಕ ಆಯುಧ ಬಳಕೆ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದೆ.