ವಾಷಿಂಗ್ಟನ್, ಅ. 3: ಅಮೆರಿಕದಲ್ಲಿ ಹಿಂದೂ ದೇವಾಲಯವೊಂದರ ಮೇಲೆ ಇಟ್ಟಿಗೆಗಳಿಂದ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ (Hindu Temple Vandalised) ಎಂದು ಅಮೆರಿಕ ಮೂಲದ ಎರಡು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. ಅಮೆರಿಕದ (America) ಓಹಿಯೋ ರಾಜ್ಯದ ಗ್ರೇಟರ್ ಕ್ಲೀವ್‌ಲ್ಯಾಂಡ್ ಪ್ರದೇಶದಲ್ಲಿರುವ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಉಪನಗರವಾದ ರಿಚ್‌ಮಂಡ್ ಹೈಟ್ಸ್‌ನಲ್ಲಿರುವ ಸ್ವಾಮಿನಾರಾಯಣ ಹಿಂದೂ ಟೆಂಪಲ್ ವಡ್ತಾಲ್ಧಾಮ್ ದೇವಾಲಯದ ಮೇಲೆ ನಡೆದಿದೆ ಎನ್ನಲಾದ ದಾಳಿಯಲ್ಲಿ ಕಿಟಕಿ ಗಾಜುಗಳು ಒಡೆದುಹೋಗಿವೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ಮತ್ತು ಕೋಯಲಿಷನ್ ಆಫ್ ಹಿಂದೂಸ್ ಆಫ್ ನಾರ್ತ್ ಅಮೆರಿಕ ತಿಳಿಸಿವೆ.
ಈ ಘಟನೆ ಶುಕ್ರವಾರ (ಅ. 2) ಮಧ್ಯಾಹ್ನ ನಡೆದಿದೆ ಎಂದು ಸಂಘಟನೆಗಳು ಹೇಳಿವೆ. ದಾಳಿ ನಡೆದ ಸಂದರ್ಭದಲ್ಲಿ ದೇವಾಲಯದ ಒಳಗೆ ಅರ್ಚಕರು ಹಾಗೂ ಕೆಲವು ಭಕ್ತರು ಇದ್ದರು. ಈ ಘಟನೆಯನ್ನು ಹಿಂದೂ ವಿರೋಧಿ ಮನೋಭಾವದವರು ನಡೆಸಿದ್ದಾರೆ ಎಂದು ಹಿಂದೂ ಪರ ಸಂಘಟನೆ ತಿಳಿಸಿದೆ. “ಓಹಿಯೋದಲ್ಲಿರುವ ಹಿಂದೂಗಳು ಇನ್ನೂ 10 ದಿನಗಳಲ್ಲಿ ನವರಾತ್ರಿ ಮೂಲಕ ದೈವಿಕ ಶಕ್ತಿಯನ್ನು ಗೌರವಿಸಲು ಸಿದ್ಧರಾಗುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ” ಎಂದು ಎಕ್ಸ್‌ನಲ್ಲಿ ಬರೆದಿದೆ.
ಇಂತಹ ಧರ್ಮಾಂಧತೆಯನ್ನು ಖಂಡಿಸುವಂತೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಪೊಲೀಸ್ ಇಲಾಖೆ ತ್ವರಿತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮೇಯರ್ ಕಿಮ್ ಥಾಮಸ್ ಅವರನ್ನು ಸಂಘಟನೆ ಒತ್ತಾಯಿಸಿದೆ. ಇನ್ನು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ತಿಳಿಸಿದೆ.
ಮದರಸಾ ನಿರ್ಮಾಣಕ್ಕೆ ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ
20 ವರ್ಷಗಳ ಬಳಿಕ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮರಳಿದ ವ್ಯಕ್ತಿ
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬರು ಹಿಂದೂ ಧರ್ಮಕ್ಕೆ ಮರಳಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸುಮಾರು 20 ವರ್ಷಗಳ ಹಿಂದೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಉದ್ಯೋಗ ಅರಸಿಕೊಂಡು ಪಶ್ಚಿಮ ಬಂಗಾಳಕ್ಕೆ ತೆರಳಿದ್ದು, ಅಲ್ಲಿ ಒತ್ತಾಯ ಪೂರ್ವಕವಾಗಿ ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿದ್ದರು. ಇದೀಗ ಅವರು ತಮ್ಮ ಹೆಂಡತಿಯೊಂದಿಗೆ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಝಾನ್ಸಿ ಮೂಲದ ರಾಜ್‌ಕುಮಾರ್ ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿ ರಫೀಕ್ ಎಂದು ಗುರುತಿಸಿಕೊಂಡಿದ್ದರು. ಇದೀಗ ಅವರು ಮತ್ತವರ ಪತ್ನಿ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಆಗಿದ್ದಾರೆ.