ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಯಿಯ ಪ್ರೀತಿ, ಕುಟುಂಬ: 23 ವರ್ಷಗಳ ಅಮೆರಿಕ ಜೀವನ ತೊರೆದು ಭಾರತಕ್ಕೆ ಮರಳಿದ ವ್ಯಕ್ತಿಯ ಕಥೆ ಕೇಳೆ ನೆಟ್ಟಿಗರು ಭಾವುಕ

Viral News: ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಆಸೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಉತ್ತಮ ವೇತನ, ಗುಣಮಟ್ಟದ ಜೀವನ ಶೈಲಿ, ಆಧುನಿಕ ಸೌಲಭ್ಯ ಹೀಗೆ ನಾನಾ ಕಾರಣದಿಂದ ವಿದೇಶದಲ್ಲಿನ ಉದ್ಯೋಗ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಹಲವಾರು ಅಂದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಸುಮಾರು 23 ವರ್ಷಗಳ ಕಾಲ ಅಮೆರಿಕದಲ್ಲಿದ್ದರೂ ಎಲ್ಲವನ್ನೂ ತೊರೆದು ಭಾರತಕ್ಕೆ ಮರಳಿದ್ದಾರೆ. ಅದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

23 ವರ್ಷಗಳ ಅಮೆರಿಕ ಜೀವನಕ್ಕೆ ಗುಡ್ ಬೈ ಹೇಳಿ ಭಾರತಕ್ಕೆ ಮರಳಿದ ವ್ಯಕ್ತಿ!

ಸಾಂದರ್ಭಿಕ ಚಿತ್ರ -

Profile
Pushpa Kumari Sep 23, 2026 9:57 PM

ಮುಂಬೈ, ಸೆ. 23: ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎನ್ನುವ ಆಸೆ ಹೆಚ್ಚಿನವರದ್ದು. ಉತ್ತಮ ವೇತನ, ಗುಣಮಟ್ಟದ ಜೀವನ ಶೈಲಿ, ಆಧುನಿಕ ಸೌಲಭ್ಯ ಹೀಗೆ ನಾನಾ ಕಾರಣದಿಂದ ವಿದೇಶದಲ್ಲಿನ ಉದ್ಯೋಗ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಸುಮಾರು 23 ವರ್ಷ ಅಮೆರಿಕದಲ್ಲಿದ್ದು, ಲಕ್ಷ ಲಕ್ಷ ರೂಪಾಯಿ ಸಂಪಾದನೆ ಗಳಿಸುತ್ತಿದ್ದರೂ ಎಲ್ಲವನ್ನು ತೊರೆದು ವ್ಯಕ್ತಿಯೊಬ್ಬರು ಭಾರತಕ್ಕೆ ಮರಳಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ (Viral News) ಭಾವುಕರಾಗಿ ಬರೆದಿದ್ದಾರೆ.

ಎಷ್ಟೇ ಸೌಕರ್ಯಗಳಿದ್ದರೂ, ಹಣ ಸಂಪಾದನೆ ಮಾಡಿದರೂ ಕುಟುಂಬ ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ. ತಂದೆಯ ಅಗಲಿಕೆ, ವೃದ್ಧ ತಾಯಿಯ ಕಾಳಜಿ ಮತ್ತು ಕೋವಿಡ್ ಸಾಂಕ್ರಾಮಿಕದ ಅನುಭವ ತಾವು ತಾಯ್ನಾಡಿಗೆ ಮರಳಲು ಕಾರಣವಾಯಿತು ಎಂದು ಬರೆದುಕೊಂಡಿದ್ದಾರೆ.

ರೆಡ್ಡಿಟ್‌ನಲ್ಲಿ ಅವರು ಪೋಸ್ಟ್ ಶೇರ್ ಮಾಡಿದ್ದು 15ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿ, ನ್ಯೂಯಾರ್ಕ್ ನಗರದ ಕಾಲೇಜೊಂದರಲ್ಲಿ ಬಯೋಮೆಡಿಕಲ್ ಎಂಜಿನಿಯರಿಂಗ್ ಓದಿದ್ದಾಗಿ ಮತ್ತು ಅಲ್ಲಿಯೇ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪೂರೈಸಿದ್ದಾಗಿ ಹೇಳಿದ್ದಾರೆ. ನಂತರ ಔಷಧೀಯ ಉದ್ಯಮವೊಂದರಲ್ಲಿ ಉದ್ಯೋಗವನ್ನು ಪಡೆದಿದ್ದು ಪೆನ್ಸಿಲ್ವೇನಿಯಾದಲ್ಲಿ ಸ್ವಂತ ಮನೆ ಸೇರಿ ಕಂಡ ಕನಸೆಲ್ಲ ನನಸು ಮಾಡಿಕೊಂಡಿದ್ದರು.

​ಆದರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆ 70ನೇ ವಯಸ್ಸಿನಲ್ಲಿ ತೀರಿಕೊಂಡಾಗ ಜೀವನವೇ ಬದಲಾಯಿಸಬೇಕಾಯಿತು.‌ ಭಾರತದಲ್ಲಿದ್ದ 90 ವರ್ಷದ ಕ್ಯಾನ್ಸರ್ ಪೀಡಿತ ತಾಯಿ ಹಾಗೂ ಸಾಕುಪ್ರಾಣಿಯನ್ನು ನೋಡಿಕೊಳ್ಳುತ್ತಾ ಒಂಟಿಯಾಗಿದ್ದರು. ಈ ಸಮಯದಲ್ಲಿ ತಾಯಿಗೆ ನೆರ ವಾಗುವುದು ಮತ್ತು ಅವರೊಂದಿಗೆ ಸಮಯ ಕಳೆಯುವುದೇ ತಮ್ಮ ಮೊದಲ ಆದ್ಯತೆ ಎಂದು ನಿರ್ಧರಿಸಿ ಭಾರತಕ್ಕೆ ಮರಳಲು ತೀರ್ಮಾನಿಸಿದರು.

ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

2022ರಲ್ಲಿ ಅಮೆರಿಕಕ್ಕೆ ಮರಳಿ ಔಷಧವಲಯದ ಕೆಲಸಕ್ಕೆ ರಾಜೀನಾಮೆ ನೀಡಿದರು‌. 2023ರಲ್ಲಿ, ಅವರು ಪೆನ್ಸಿಲ್ವೇನಿದಲ್ಲಿದ್ದ ತಮ್ಮ ಮನೆಯನ್ನು ಮಾರಾಟ ಮಾಡಿ ಮುಂಬೈಗೆ ಮರಳಿದರು. ಪ್ರಸ್ತುತ ಅವರು ಭಾರತದಲ್ಲಿ ತಂತ್ರಜ್ಞಾನ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ʼʼಅಮೆರಿಕದ ಜೀವನಶೈಲಿ ನೆನಪು ಕಾಡಿದರೂ ಕುಟುಂಬದೊಂದಿಗೆ ಕಳೆಯುವ ಸಮಯ ಅತ್ಯಂತ ಮುಖ್ಯ. ಸೌಕರ್ಯಗಳಿಗಿಂತ ಮನೆಯಲ್ಲಿ ಅಮ್ಮ ಮಾಡಿದ ಅಡುಗೆ ತಿನ್ನುವುದು, ಅವರೊಂದಿಗೆ ಸಮಯ ಕಳೆಯುವುದರಲ್ಲಿ ಸಿಗುವ ಪ್ರೀತಿ ಅತ್ಯಂತ ದೊಡ್ಡದುʼʼ ಎಂದು ಅವರು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ​ಈ ಪೋಸ್ಟ್‌ಗೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ನಿಮ್ಮ ನಡೆ ಸರಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.