ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President donald trump) ಅವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು(Prime Minister Narendra Modi) ಪ್ರೀತಿಸುತ್ತಾರೆ. ಶೀಘ್ರದಲ್ಲೇ ಅವರು ಭಾರತಕ್ಕೆ ಭೇಟಿ (Visit to inda) ನೀಡುವ ಯೋಜನೆ ಮಾಡುತ್ತಿದ್ದಾರೆ ಎಂದು ಟ್ರಂಪ್ ಅವರ ಆಪ್ತ, ಅಮೆರಿಕದ ಬಲಪಂಥೀಯ ಕಾರ್ಯಕರ್ತೆ ಲಾರಾ ಲೂಮರ್ (American far-right activist Laura Loomer) ಹೇಳಿದರು. ಅವರು ಶನಿವಾರ ಇಂಡಿಯಾ ಟುಡೇ ಕಾನ್ಕ್ಲೇವ್ 2026 ರಲ್ಲಿ ಟ್ರಂಪ್ ಅವರ ವಿಶೇಷ ಸಂದೇಶವನ್ನು ಓದಿದರು. ವಿವಾದಾತ್ಮಕ ಹೇಳಿಕೆ, ಕಠಿಣ ನಿಲುವುಗಳಿಂದ ವಿಶ್ವದ ಗಮನ ಸೆಳೆಯುವ ಟ್ರಂಪ್ ಅವರು ಮೋದಿಯವರನ್ನು ಅದ್ಬುತ ನಾಯಕ, ನನ್ನ ಉತ್ತಮ ಸ್ನೇಹಿತ ಎಂದು ಕರೆದಿದ್ದಾರೆ ಎಂದರು.
ಟ್ರಂಪ್ ಜೊತೆ ಸುಮಾರು ಒಂದು ಗಂಟೆಯ ಹಿಂದೆ ಫೋನ್‌ನಲ್ಲಿ ಮಾತನಾಡಿದೆ. ಅವರು ನನಗೆ ಹೇಳಿದ್ದನ್ನು ನಾನು ನಿಮಗೆ ನಿಖರವಾಗಿ ಹೇಳುತ್ತೇನೆ. ಅವರು ಹೇಳಿದ್ದು ಏನೆಂದರೆ... ನಾನು ಭಾರತವನ್ನು ಪ್ರೀತಿಸುತ್ತೇನೆ, ನಾನು ಮೋದಿಯನ್ನು ಪ್ರೀತಿಸುತ್ತೇನೆ ಎಂದು ಅವರಿಗೆ ತಿಳಿಸಿ. ನಾನು ಭಾರತೀಯ ಜನರನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಅದ್ಭುತ ನಾಯಕ ಮತ್ತು ನನ್ನ ಉತ್ತಮ ಸ್ನೇಹಿತ. ಶೀಘ್ರದಲ್ಲೇ ನಾನು ಒಂದು ದಿನ ಭಾರತಕ್ಕೆ ಭೇಟಿಗಾಗಿ ಬರುತ್ತೇನೆ ಎಂದು ಭಾರತದ ಜನರಿಗೆ ತಿಳಿಸಿ ಎಂದರು.
ಸೋನಮ್ ವಾಂಗ್‌ಚುಕ್ ತಕ್ಷಣ ಬಿಡುಗಡೆ ಮಾಡುವುದಾಗಿ ಹೇಳಿದ ಗೃಹ ಸಚಿವಾಲಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ 2020ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಅಹಮದಾಬಾದ್‌ನಲ್ಲಿ ನಡೆದ "ನಮಸ್ತೆ ಟ್ರಂಪ್" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ದೆಹಲಿ ಮತ್ತು ಆಗ್ರಾಕ್ಕೂ ಅವರು ಈ ಸಂದರ್ಭದಲ್ಲಿ ಭೇಟಿ ನೀಡಿದ್ದರು.
ರಷ್ಯಾ ತೈಲ ಖರೀದಿಗೆ ಸಂಬಂಧಿಸಿ ಭಾರತದೊಂದಿಗೆ ಮುನಿಸಿಕೊಂಡಿದ್ದ ಟ್ರಂಪ್ ಇದೀಗ ಭಾರತದಲ್ಲಿ ಉದ್ಭವವಾಗಿರುವ ತೈಲ ಬಿಕ್ಕಟ್ಟನ್ನು ಪರಿಹರಿಸಲು ಸಮುದ್ರದಲ್ಲಿ ಭಾರತಕ್ಕೆ ಸಮೀಪವಿರುವ ರಷ್ಯಾದ ತೈಲ ಸರಕುಗಳನ್ನು ಖರೀದಿಸಲು 30 ದಿನಗಳ ವಿನಾಯಿತಿಯನ್ನು ನೀಡಿದ್ದಾರೆ. ಈ ನಡುವೆಯೇ ಲಾರಾ ಅವರ ಮೂಲಕ ಟ್ರಂಪ್ ಅವರು ಇಂಡಿಯಾ ಟುಡೇ ಕಾನ್ಕ್ಲೇವ್ ಭಾರತೀಯರಿಗೆ ತಲುಪುವಂತೆ ಸಂದೇಶವನ್ನು ನೀಡಿದ್ದಾರೆ.
ಇತ್ತೀಚೆಗೆ ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ರಷ್ಯಾದ ತೈಲ ನಿರ್ಬಂಧಗಳನ್ನು ಪಾಲಿಸುವಲ್ಲಿ ಭಾರತ ಬಹಳ ಉತ್ತಮ ನಟ ಎಂದು ಹೇಳಿದ್ದರು. ಮಂಜೂರಾಗಿರುವ ಹೆಚ್ಚುವರಿ ತೈಲ ಬ್ಯಾರೆಲ್‌ಗಳು ಭಾರತದ ಮಾರುಕಟ್ಟೆ ಪ್ರವೇಶಿಸಲು ಅನುವು ಮಾಡಿಕೊಡುವ ಕ್ರಮಗಳ ಕುರಿತು ವಾಷಿಂಗ್ಟನ್ ಪರಿಗಣಿಸುತ್ತಿದೆ ಎಂದು ತಿಳಿಸಿದರು.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಯುಎಸ್ ಡಾಲರ್ ದಾಟಿದೆ. ಈ ನಡುವೆ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ಗುರಿಯನ್ನು ಅಮೆರಿಕ ಹೊಂದಿದೆ. ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ತೀವ್ರ ಅಡಚಣೆಗಳು ಎದುರಾಗಿದ್ದು, ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ಈ ಮಾರ್ಗದ ಮೂಲಕವೇ ಪ್ರತಿನಿತ್ಯ ವಿಶ್ವದ ದೈನಂದಿನ ತೈಲ ಬಳಕೆಯ ಸರಿಸುಮಾರು ಶೇ. 20ರಿಂದ 25ರಷ್ಟು ಕಚ್ಚಾ ತೈಲ ಪೂರೈಕೆಯಾಗುತ್ತದೆ. ಕಿರಿದಾದ ಈ ಜಲಮಾರ್ಗವು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.
"ಪಾಕಿಸ್ತಾನದ ಅತೀ ದೊಡ್ಡ ರಫ್ತು ಭಯೋತ್ಪಾದನೆ"; ಟ್ರಂಪ್ ಆಪ್ತೆಯಿಂದಲೇ ಅಮೆರಿಕಕ್ಕೆ ಎಚ್ಚರಿಕೆ
ಸಂಘರ್ಷ ಪ್ರಾರಂಭವಾದ ಮೇಲೆ ಅನೇಕ ಹಡಗುಗಳಲ್ಲಿ ತುಂಬಿಸಲಾಗಿದ್ದ ರಷ್ಯಾದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಮತ್ತು ಮಾರಾಟಕ್ಕೆ ಅಧಿಕಾರ ನೀಡುವ ತಾತ್ಕಾಲಿಕ ಪರವಾನಗಿಯನ್ನು ನೀಡಿರುವುದಾಗಿ ಯುಎಸ್ ಖಜಾನೆ ಇಲಾಖೆ ತಿಳಿಸಿದ್ದು, ಇದು ಏಪ್ರಿಲ್ 11 ರ ಮಧ್ಯರಾತ್ರಿಯವರೆಗೆ ಮಾನ್ಯವಾಗಿರುತ್ತದೆ. ಇದರಿಂದ ವಿಶ್ವದಾದ್ಯಂತ ಸುಮಾರು 30 ಸ್ಥಳಗಳಲ್ಲಿ ಸಿಲುಕಿರುವ ಸುಮಾರು 124–125 ಮಿಲಿಯನ್ ಬ್ಯಾರೆಲ್ ರಷ್ಯನ್ ಮೂಲದ ತೈಲ ಮಾರುಕಟ್ಟೆಗೆ ಬರಲಿದೆ. ಇದು ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ತೊಂದರೆಗೆ ತಕ್ಷಣದ ಪರಿಹಾರವನ್ನು ಒದಗಿಸಲಿದೆ.