ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹತ್ವದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲಿ ಸಹಿ: ಸೆರ್ಗಿಯೋ ಗೋರ್

ಸುದೀರ್ಘ ಮಾತುಕತೆಯ ಬಳಿಕ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದವು ಅಂತಿಮ ಹಂತದಲ್ಲಿದೆ. ಈ ವ್ಯಾಪಾರ ಒಪ್ಪಂದದಿಂದ ಎರಡು ದೇಶಗಳಿಗೂ ಪ್ರಯೋಜನವಾಗಲಿದೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ತಿಳಿಸಿದರು. ಅಮೆರಿಕ-ಭಾರತ ವ್ಯಾಪಾರ ಪಾಲುದಾರಿಕೆ ವೇದಿಕೆಯ ನಾಯಕತ್ವ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂಗ್ರಹ ಚಿತ್ರ

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ (US-India trade deal) ಮಾತುಕತೆ ಅಂತಿಮ ಹಂತದಲ್ಲಿದೆ. ಇನ್ನು ಕೇವಲ ಶೇಕಡಾ ಒಂದರಷ್ಟು ಮಾತುಕತೆಗಳು ಮಾತ್ರ ಬಾಕಿ ಉಳಿದಿವೆ ಎಂದು ಅಮೆರಿಕದ ರಾಯಭಾರಿ (US Ambassador) ಸೆರ್ಗಿಯೊ ಗೋರ್ (US Envoy Sergio Gor) ತಿಳಿಸಿದರು. ಅಮೆರಿಕ-ಭಾರತ ವ್ಯಾಪಾರ ಪಾಲುದಾರಿಕೆ ವೇದಿಕೆಯ ನಾಯಕತ್ವ ಶೃಂಗಸಭೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಈ ಒಪ್ಪಂದದಿಂದ ಎರಡೂ ರಾಷ್ಟ್ರಗಳಿಗೆ ಪ್ರಯೋಜನಕಾರಿಯಾಗಲಿದೆ. ಈ ಬಗ್ಗೆ ತಾನು ಸಂಪೂರ್ಣವಾದ ದೃಢನಿಶ್ಚಯ ಹೊಂದಿದ್ದೇನೆ ಎಂದು ಹೇಳಿದರು.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತಾಗಿ ಸುಮಾರು 18 ತಿಂಗಳುಗಳಿಂದ ನಿರಂತರ ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಈ ಒಪ್ಪಂದ ಪೂರ್ಣಗೊಳ್ಳಲಿದೆ. ಈಗ ಅಂತಿಮ ಹಂತಗಳಲ್ಲಿರುವ ಮಾತುಕತೆಗಳಲ್ಲಿ ಇನ್ನು ಕೇವಲ ಕೊನೆಯ ಒಂದು ಶೇಕಡಾ ಮಾತ್ರ ಬಾಕಿ ಉಳಿದಿದೆ ಎಂದು ಸೆರ್ಗಿಯೊ ಗೋರ್ ಹೇಳಿದರು.

ಆಯತೊಲ್ಲ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದಿಂದ ಕೇಂದ್ರ ಸಚಿವ ಪಬಿತ್ರಾ ಮಾರ್ಗರಿಟಾ, ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಭಾಗಿ

ಒಪ್ಪಂದದ ಬಹುಪಾಲು ಪೂರ್ಣಗೊಂಡಿದೆ. ಎರಡೂ ಕಡೆಗಳಲ್ಲಿ ಕೆಲವು ವಿಷಯಗಳು ಬಾಕಿ ಉಳಿದಿದ್ದು, ಇದು ಆ ಒಪ್ಪಂದದ ಕೊನೆಯ ಶೇಕಡಾ 1 ಭಾಗವಾಗಿದೆ ಎಂದ ಅವರು ದ್ವಿಪಕ್ಷೀಯ ಸಂಬಂಧದ ಬಗ್ಗೆ ಉತ್ಸುಕರಾಗಿ ವಿಷಯ ಹಂಚಿಕೊಂಡರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸ್ನೇಹ ಸಂಬಂಧದ ಬಗ್ಗೆಯೂ ಉಲ್ಲೇಖಿಸಿದ ಅವರು, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ಅನೇಕರು ಕೇಳುತ್ತಿದ್ದಾರೆ. ನಾವು ಒಂದೂವರೆ ವರ್ಷದಿಂದ ಇದರಲ್ಲಿ ತೊಡಗಿದ್ದೇವೆ. ಆದರೆ ನಾವು 20 ವರ್ಷಗಳಿಂದ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದೇವೆ. ಏನೇ ಆಗಲಿ ಈ ಒಪ್ಪಂದವನ್ನು ಮುಕ್ತಾಯಗೊಳಿಸಲು ದೃಢನಿಶ್ಚಯವನ್ನು ನಾನು ಮಾಡಿದ್ದೇನೆ ಎಂದರು.

ಅಫ್ಘಾನಿಸ್ತಾನದ ಗಡಿಯಲ್ಲಿ ಪಾಕ್‌ ಸೇನೆ ಕಾರ್ಯಾಚರಣೆ; 29 ಮಂದಿ ಸಾವು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಭೇಟಿಯ ಬಗ್ಗೆ ಬಹಳ ಪ್ರೀತಿಯ ನೆನಪುಗಳನ್ನು ಹೊಂದಿದ್ದಾರೆ. ಅದರ ಬಗ್ಗೆ ಈಗಲೂ ಮಾತನಾಡುತ್ತಿದ್ದಾರೆ. ಅವರ ಅದನ್ನು ಅತ್ಯಂತ ಗಮನಾರ್ಹ ಭೇಟಿಗಳಲ್ಲಿ ಒಂದು ಎಂದು ಬಣ್ಣಿಸುತ್ತಾರೆ. ಭಾರತದ ಬಗ್ಗೆ ಅವರಿಗೆ ಬಹಳ ಪ್ರೀತಿ ಇದೆ. ಮತ್ತೆ ಅವರು ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದರೆ ಎಂದು ಗೋರ್ ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author