ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟ್ರಂಪ್ ವಿಧಿಸಿದ ಶೇ. 50ರ ಸುಂಕ ಕೊನೆಗೊಳಿಸುವ ನಿರ್ಣಯ ಮಂಡಿಸಿದ ಅಮೆರಿಕ ಸಂಸದರು

trump tariffs india: ಭಾರತದ ಮೇಲೆ 2025ರ ಆ.27ರಂದು ಹೇರಲಾದ ಶೇ. 25ರ ಹೆಚ್ಚುವರಿ ಪೂರಕ ಸುಂಕವನ್ನು ರದ್ದುಪಡಿಸಲು ಕೋರಿದೆ. ಇದಕ್ಕೂ ಮುನ್ನ ಪ್ರತ್ಯುತ್ತರ ಸುಂಕವನ್ನು ಹೇರಲಾಗಿತ್ತು. ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ವಿಧಿಸಿದ ಈ ಎರಡೂ ಸುಂಕಗಳು ಸೇರಿ ಭಾರತದಿಂದ ಆಮದಾಗುವ ಉತ್ಪನ್ನಗಳು ಶೇನ50ರಷ್ಟು ದುಬಾರಿಯಾಗಿದ್ದವು.

President Donald Trump

ವಾಷಿಂಗ್ಟನ್‌, ಡಿ.13: ಭಾರತದ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(President Donald Trump) ಘೋಷಿಸಿದ್ದ ಶೇ 50ರಷ್ಟು ಸುಂಕವನ್ನು(trump tariffs india) ಕೊನೆಗೊಳಿಸುವ ನಿರ್ಣಯವನ್ನು ಅಮೆರಿಕದ ಪ್ರತಿನಿಧಿ ಸಭೆಯ ಮೂವರು ಸದಸ್ಯರು ಸದನದಲ್ಲಿ ಮಂಡಿಸಿದ್ದಾರೆ. ರಾಷ್ಟ್ರೀಯ ತುರ್ತು ಸ್ಥಿತಿಯ ನೆಪದಲ್ಲಿ ಟ್ರಂಪ್ ಭಾರತದಿಂದ ಆಮದಾಗುವ ಸರಕು ಮತ್ತು ಸೇವೆಗಳ ಮೇಲೆ ಶೇ.50ರ ಸುಂಕ ವಿಧಿಸಿದ್ದರು.ಟ್ರಂಪ್ ಘೋಷಿಸಿದ ಈ ಕ್ರಮಗಳು ಕಾನೂನುಬಾಹಿರ ಮತ್ತು ಅಮೆರಿಕದ ಉದ್ಯೋಗಿಗಳು, ಗ್ರಾಹಕರು ಮತ್ತು ದ್ವಿಪಕ್ಷೀಯ ಸಂಬಂದಕ್ಕೆ ಮಾರಕ ಎಂದು ನಿರ್ಣಯ ಮಂಡಿಸಿದ ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ ಸದಸ್ಯರಾದ ದೆಬ್ರೋ ರಾಸ್, ಮಾರ್ಕ್ ವಿಯಾಸೆ ಮತ್ತು ರಾಜಾ ಕೃಷ್ಣಮೂರ್ತಿ ಈ ನಿರ್ಣಯ ಮಂಡಿಸಿದ್ದಾರೆ. ಬ್ರೆಜಿಲ್ ನ ಮೇಲೆ ವಿಧಿಸಿದ್ದ ಇಂಥದ್ದೇ ಸುಂಕವನ್ನು ಕೊನೆಗೊಳಿಸಲು ದ್ವಿಪಕ್ಷೀಯ ಸೆನೆಟ್ ಕೈಗೊಂಡ ಕ್ರಮದ ಬಳಿಕ ಈ ನಿರ್ಣಯ ಮಂಡಿಸಲಾಗಿದ್ದು, ಆಮದು ಸುಂಕವನ್ನು ಹೇರಲು ಅಧ್ಯಕ್ಷರ ತುರ್ತು ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆ.

ಇದನ್ನೂ ಓದಿ Stock Market: ಟ್ರಂಪ್‌ ಟಾರಿಫ್‌ ಮುಂದೂಡಿಕೆ, ಟೆಕ್ಸ್‌ಟೈಲ್‌ ಷೇರುಗಳಿಗೆ ಶುಕ್ರದೆಸೆ! ಬಾಂಗ್ಲಾಗೆ ಬಿತ್ತು ಟ್ರಂಪ್‌ ಟ್ಯಾಕ್ಸ್‌

ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದರಿಂದ ದಂಡದ ಮಾದರಿಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ದ್ವಿಗುಣಗೊಳಿಸುವುದಾಗಿ ಆಗಸ್ಟ್ 7ರಂದು ಟ್ರಂಪ್ ಘೋಷಿಸಿದ್ದರು.

"ಭಾರತವು ಒಂದು ಪ್ರಮುಖ ಸಾಂಸ್ಕೃತಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಪಾಲುದಾರ, ಮತ್ತು ಕಾನೂನುಬಾಹಿರ ಸುಂಕಗಳು ಈಗಾಗಲೇ ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಹೆಣಗಾಡುತ್ತಿರುವ ಉತ್ತರ ಟೆಕ್ಸಸ್ ನ ಜನರ ಪಾಲಿಗೆ ತೆರಿಗೆ ಹೊರೆಯಾಗಲಿದೆ" ಎಂದು ಕಾಂಗ್ರೆಸ್ ಸದಸ್ಯ ವೆಸ್ಸಿ ಹೇಳಿದರು.

ನಾರ್ತ್ ಕರೋಲಿನಾ ಆರ್ಥಿಕತೆ ಭಾರತದ ವ್ಯಾಪಾರ, ಹೂಡಿಕೆ ಮತ್ತು ಹೆಚ್ಚಾಗಿರುವ ಭಾರತೀಯ ಅಮೆರಿಕನ್ ಸಮುದಾಯದ ಜತೆ ಆಳವಾದ ಸಂಬಂಧವನ್ನು ಹೊಂದಿದೆ ಎಂದು ರಾಸ್ ಹೇಳಿದರು.

ಭಾರತದ ಮೇಲೆ 2025ರ ಆ.27ರಂದು ಹೇರಲಾದ ಶೇ. 25ರ ಹೆಚ್ಚುವರಿ ಪೂರಕ ಸುಂಕವನ್ನು ರದ್ದುಪಡಿಸಲು ಕೋರಿದೆ. ಇದಕ್ಕೂ ಮುನ್ನ ಪ್ರತ್ಯುತ್ತರ ಸುಂಕವನ್ನು ಹೇರಲಾಗಿತ್ತು. ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ವಿಧಿಸಿದ ಈ ಎರಡೂ ಸುಂಕಗಳು ಸೇರಿ ಭಾರತದಿಂದ ಆಮದಾಗುವ ಉತ್ಪನ್ನಗಳು ಶೇನ50ರಷ್ಟು ದುಬಾರಿಯಾಗಿದ್ದವು.