ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂತಿಮ ಹಂತದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ಇದು ಹಿಂದಿಗಿಂತ ಭಿನ್ನ ಎಂದ ಡೊನಾಲ್ಡ್ ಟ್ರಂಪ್

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ. ಇದು ಹಿಂದಿದಿನ ಒಪ್ಪಂದಗಳಿಗಿಂತ ಭಿನ್ನವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಓವಲ್ ಆಫೀಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ (India-US trade deal) ಮಾತುಕತೆಗಳು ಅಂತಿಮ ಹಂತದಲ್ಲಿದೆ. ಈ ಒಪ್ಪಂದವು ಹಿಂದಿನ ಒಪ್ಪಂದಗಳಿಗಿಂತ ತುಂಬಾ ಭಿನ್ನವಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದರು. ಓವಲ್ ಆಫೀಸ್‌ನಲ್ಲಿ (Oval Office) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆಗಳು ಮುಂದುವರಿದಿವೆ. ಭಾರತ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ನಾವು ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಬಹುತೇಕ ಅಂತಿಮ ಹಂತದಲ್ಲಿದ್ದೇವೆ ಎಂದು ತಿಳಿಸಿದರು. ಆದರೆ ಪ್ರಸ್ತಾವಿತ ಒಪ್ಪಂದದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗ ಪಡಿಸಲಿಲ್ಲ.

ಪ್ರಸ್ತುತ ಭಾರತದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಕೂಡ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಒಪ್ಪಂದದ ಕುರಿತಾದ ಕೆಲವು ವಿಷಯಗಳನ್ನು ಬಗೆಹರಿಸಬೇಕಿದೆ ಎಂದು ತಿಳಿಸಿದರು.

ಭಾರತಕ್ಕೆ ಮಾರ್ಕೊ ರೂಬಿಯೊ ಭೇಟಿ: ಜೈಶಂಕರ್, ಯುಎಇ ವಿದೇಶಾಂಗ ಸಚಿವರೊಂದಿಗೆ ಸಭೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಈ ಕುರಿತು ಮಾತನಾಡಿ, ಕಳೆದ ಸುಮಾರು ಒಂದು ವರ್ಷದಿಂದ ಭಾರತ- ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆಗಳು ನಡೆಯುತ್ತಿವೆ. ಈ ಒಪ್ಪಂದವನ್ನು ಅಂತಿಮಗೊಳಿಸಲು ಬಹಳ ಹತ್ತಿರ ಬಂದಿದ್ದೇವೆ. ಈ ಒಪ್ಪಂದವು ವಾಷಿಂಗ್ಟನ್ ಹಿಂದೆ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದಗಳಿಗಿಂತ ಭಿನ್ನವಾಗಿರುತ್ತದೆ ಎಂದರು.

ಒಪ್ಪಂದದ ಕುರಿತು ಕೆಲವು ವಿಷಯಗಳನ್ನು ಬಗೆಹರಿಸಲು ನವದೆಹಲಿ ಮತ್ತು ವಾಷಿಂಗ್ಟನ್ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿಯೇ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಅಮೆರಿಕದ ಸುಂಕ ನೀತಿಯಲ್ಲಿನ ಬದಲಾವಣೆಗಳ ಕುರಿತಾಗಿ ಕೂಡ ಚರ್ಚೆ ನಡೆಸಲಾಗುತ್ತಿದೆ.

ಪ್ರಸ್ತಾವಿತ ವ್ಯಾಪಾರ ಒಪ್ಪಂದದ ಕುರಿತಾದ ಪ್ರಶ್ನೆಯೊಂದಕ್ಕೆ ನವದೆಹಲಿಯಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಉತ್ತರಿಸಿ, ಎರಡೂ ದೇಶಗಳು ಒಪ್ಪಂದವನ್ನು ಅಂತಿಮಗೊಳಿಸಲು ಬಹಳ ಹತ್ತಿರದಲ್ಲಿವೆ ಮತ್ತು ಕೆಲವೇ ಕೆಲವು ವಿಷಯಗಳನ್ನು ಮಾತ್ರ ಬಗೆಹರಿಸಬೇಕಿದೆ ಎಂದು ಹೇಳಿದರು.

ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವ ಹಂತಕ್ಕೆ ನಾವು ಎಷ್ಟು ಹತ್ತಿರ ಬರಲು ಸಾಧ್ಯವೋ, ಅಷ್ಟು ಹತ್ತಿರ ಬಂದಿದ್ದೇವೆ. ಇನ್ನೂ ಕೆಲವು ಸಣ್ಣ ವಿಷಯಗಳನ್ನು ಅಂತಿಮಗೊಳಿಸಬೇಕಿದೆ. ಉಳಿದಿರುವ ವಿಷಯಗಳು ಶೀಘ್ರದಲ್ಲೇ ಬಗೆಹರಿಯಲಿವೆ. ಇದು ಒಪ್ಪಂದದ ಘೋಷಣೆಗೆ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದರು.

ಮಾರ್ಕ್ ರೂಬಿಯೊ ಅವರ ಭಾರತ ಭೇಟಿಯ ವೇಳೆ ವ್ಯಾಪಾರ, ಇಂಧನ, ತಂತ್ರಜ್ಞಾನ, ರಕ್ಷಣೆ ಮತ್ತು ಜನರ ನಡುವಿನ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಕುರಿತಾದ ಚರ್ಚೆಗಳನ್ನು ಒಳಗೊಂಡಿದೆ.

ಮೆಕ್ಕಾ ಮಸೀದಿಯಲ್ಲಿ ಅನೈತಿಕ ಕೃತ್ಯ ಆರೋಪ: ಇಬ್ಬರು ಬಾಂಗ್ಲಾದೇಶೀಯರಿಗೆ ಸೌದಿ ಅರೇಬಿಯಾದಲ್ಲಿ ಮರಣದಂಡನೆ

ಈ ತಿಂಗಳ ಆರಂಭದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರನ್ನು ಮಿಲ್ವಾಕೀ ಮತ್ತು ವಾಷಿಂಗ್ಟನ್‌ನಲ್ಲಿ ಭೇಟಿಯಾಗಿ ಪ್ರಸ್ತಾವಿತ ಒಪ್ಪಂದದ ಕುರಿತಾದ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಚರ್ಚಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author