ಟೆಹರಾನ್: ಭಾರತೀಯ ಧ್ವಜ ಹೊತ್ತಿದ್ದ (Indian flagged ships) ಎರಡು ಹಡಗುಗಳ ಮೇಲೆ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ದಾಳಿಯಾಗಿರುವುದಾಗಿ ಇರಾನ್ (Iran war) ಕಳವಳ ಕುರಿತು ಭಾರತದಲ್ಲಿರುವ ಇರಾನ್‌ನ ಸರ್ವೋಚ್ಚ ನಾಯಕನ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ (Dr Abdul Majid Hakeem Ilahi) ಅವರ ಭಾರತದಲ್ಲಿರುವ ಪ್ರತಿನಿಧಿ ಮಾಹಿತಿ ನೀಡಿದ್ದು, ಭಾರತದೊಂದಿಗಿನ ಇರಾನ್ ಸಂಬಂಧಗಳು ತುಂಬಾ ಬಲವಾಗಿವೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಹಡಗುಗಳ ಮೇಲೆ ದಾಳಿ ನಡೆಸಿದ ಬಳಿಕ ಭಾರತವು ಕೂಡ ತೀವ್ರ ಆತಂಕ ವ್ಯಕ್ತಪಡಿಸಿದೆ ಎಂದು ಹೇಳಿದರು.
ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಎರಡು ಹಡಗುಗಳ ಮೇಲೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುಂಡಿನ ದಾಳಿ ನಡೆಸಿದ ಬಳಿಕ ಶಾಂತಿಗಾಗಿ ಕರೆ ನೀಡಿರುವ ಇಲಾಹಿ, ಘಟನೆಯ ಬಗ್ಗೆ ನಿಖರ ಮಾಹಿತಿ ತಮಗೆ ತಿಳಿದಿಲ್ಲ ಎಂದು ತಿಳಿಸಿದರು.
ಸಣ್ಣ ತಪ್ಪು ಮಾಡಿದರೂ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿರಲಿದೆ: ಅಮೆರಿಕಕ್ಕೆ ಇರಾನ್ ಖಡಕ್ ಎಚ್ಚರಿಕೆ
ಇರಾನ್ ಮತ್ತು ಭಾರತ ನಡುವಿನ ಸಂಬಂಧವು ತುಂಬಾ ಪ್ರಬಲವಾಗಿದೆ. ಘಟನೆಯ ಬಳಿಕ ಏನಾಗುತ್ತದೆ ತಿಳಿದಿಲ್ಲ. ಆದರೆ ಎಲ್ಲವೂ ಬಗೆಹರಿಯುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.
ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳ್ಳಲು ಟೆಹರಾನ್ ಬಯಸುವುದಿಲ್ಲ. ನಮಗೆ ಈ ಯುದ್ಧ ಬೇಡ. ಶಾಂತಿ ಬೇಕು. ಇನ್ನೊಂದು ಪಕ್ಷ ಶಾಂತಿಯನ್ನು ಅನುಸರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಇದರಿಂದ ನಾವು ಶಾಂತಿಯುತ ಪ್ರದೇಶವನ್ನು ಹೊಂದಬಹುದು ಎಂದರು.
ಹೊರ್ಮುಜ್ ಜಲ ಮಾರ್ಗದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಮಧ್ಯೆ ಯುಎಸ್- ಇರಾನ್ ಬಿಕ್ಕಟ್ಟಿಗೆ ಸಂಬಂಧಿಸಿದ ಘರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಸುಮಾರು 2 ಮಿಲಿಯನ್ ಬ್ಯಾರೆಲ್ ಇರಾಕಿ ತೈಲವನ್ನು ಹೊತ್ತು ಬರುತ್ತಿದ್ದ ಸೂಪರ್ ಟ್ಯಾಂಕರ್ ಸೇರಿದಂತೆ ಎರಡು ಭಾರತೀಯ ಧ್ವಜವನ್ನು ಹೊತ್ತಿರುವ ವ್ಯಾಪಾರಿ ಹಡಗುಗಳು ಶನಿವಾರ ಹೊರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುಂಡು ಹಾರಿಸಿದೆ. ಇದರಿಂದ ಹಡಗುಗಳು ಮಾರ್ಗದಿಂದ ಹಿಂದೆ ಸರಿಯುತು ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತದ ಹಡಗುಗಳನ್ನು ಪಶ್ಚಿಮಕ್ಕೆ ಮರುನಿರ್ದೇಶಿಸುತ್ತಿದ್ದಂತೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಗನ್‌ಬೋಟ್‌ಗಳು ಗುಂಡು ಹಾರಿಸಿವೆ. ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಕೇಂದ್ರವು ಎರಡು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಗನ್‌ಬೋಟ್‌ಗಳು ಟ್ಯಾಂಕರ್ ಮೇಲೆ ಗುಂಡು ಹಾರಿಸಿದವು ಎಂದು ದೃಢಪಡಿಸಿದೆ.
ಇರಾನಿನ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ ತೆರೆಯಲು ನಿರಾಕರಿಸಿದ ಬಳಿಕ ಇರಾನ್ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿದೆ. ಯಾವುದೇ ರೀತಿಯ ಹಡಗು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ ಎಂದು ಇರಾನ್ ಹೇಳಿದೆ.
ಭಾರತ ಸೇರಿ ಇತರ ರಾಷ್ಟ್ರಗಳಿಗೆ ರಷ್ಯಾದ ತೈಲ ಖರೀದಿಸಲು ವಿನಾಯಿತಿ ವಿಸ್ತರಿಸಿದ ಅಮೆರಿಕ
ಘಟನೆಯ ಬಳಿಕ ಮಾಹಿತಿ ಪಡೆಯಲು ನವದೆಹಲಿಗೆ ಇರಾನಿನ ರಾಯಭಾರಿಯನ್ನು ಕರೆಸಲಾಗಿದೆ. ದಾಳಿಗೆ ಒಳಗಾಗಿರುವ ಹಡಗಿನಲ್ಲಿ ಒಂದನ್ನು ಸನ್ಮಾರ್ ಹೆರಾಲ್ಡ್ ಎಂದು ಗುರುತಿಸಲಾಗಿದೆ. ಸಿಬ್ಬಂದಿ ಮತ್ತು ಹಡಗು ಸುರಕ್ಷಿತವಾಗಿವೆ ಎನ್ನಲಾಗಿದೆ. ನವದೆಹಲಿಯ ಕಳವಳಗಳನ್ನು ಇರಾನಿನ ಅಧಿಕಾರಿಗಳಿಗೆ ತಿಳಿಸುವಂತೆ ಮತ್ತು ಭಾರತಕ್ಕೆ ಹೋಗುವ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಶೀಘ್ರವಾಗಿ ಪುನರಾರಂಭಿಸುವಂತೆ ಭಾರತದ ಉನ್ನತ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಇರಾನ್ ರಾಯಭಾರಿ ಮೂಲಕ ಒತ್ತಾಯಿಸಿದೆ. ಇದಕ್ಕೆ ಸಂಬಂಧಿಸಿ ಭರವಸೆ ನೀಡಿದ ಇರಾನಿನ ರಾಯಭಾರಿ, ಭಾರತದ ಕಳವಳಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.