ಹಾರ್ಮೊಜ್‌ನಿಂದ ಭಾರತದತ್ತ ಹೊರಟ ಮತ್ತೆರಡು ಎಲ್‌ಪಿಜಿ ಹಡಗು; ನೌಕಾಪಡೆಯಿಂದ ಬೆಂಗಾವಲು
40,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲ (LPG)ವನ್ನು ಹೊತ್ತ ಭಾರತೀಯ LPG ವಾಹಕ ಶಿವಾಲಿಕ್ , ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಕ್ತ ಸಮುದ್ರಕ್ಕೆ ಯಶಸ್ವಿಯಾಗಿ ಸಾಗಿದೆ ಎಂದು ಮೂಲಗಳು ತಿಳಿಸಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 9.30 ರ ಸುಮಾರಿಗೆ ಮತ್ತೊಂದು ಎಲ್‌ಪಿಜಿ ಹಡಗು ಜಲಸಂಧಿಯ ಮೂಲಕ ಹಾದುಹೋಗುವ ನಿರೀಕ್ಷೆಯಿದೆ.
ಸಂಗ್ರಹ ಚಿತ್ರ -
ಟೆಹ್ರಾನ್: 40,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲ (LPG)ವನ್ನು ಹೊತ್ತ ಭಾರತೀಯ LPG ವಾಹಕ (Iran-Israel) ಶಿವಾಲಿಕ್ , ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಕ್ತ ಸಮುದ್ರಕ್ಕೆ ಯಶಸ್ವಿಯಾಗಿ ಸಾಗಿದೆ ಎಂದು ಮೂಲಗಳು ತಿಳಿಸಿದೆ. ಈ ಹಡಗನ್ನು ಪ್ರಸ್ತುತ ಭಾರತೀಯ ನೌಕಾಪಡೆಯು ಬೆಂಗಾವಲು ಮಾಡುತ್ತಿದೆ ಮತ್ತು ಸುಮಾರು ಎರಡು ದಿನಗಳಲ್ಲಿ ಭಾರತವನ್ನು ತಲುಪುವ ನಿರೀಕ್ಷೆಯಿದೆ, ಬಹುಶಃ ಮುಂಬೈ ಅಥವಾ ಕಾಂಡ್ಲಾ ಬಂದರಿನಲ್ಲಿ ಡಾಕಿಂಗ್ ಮಾಡಲಾಗುತ್ತದೆ.
ಭಾರತೀಯ ಕಾಲಮಾನ ಬೆಳಿಗ್ಗೆ 9.30 ರ ಸುಮಾರಿಗೆ ಮತ್ತೊಂದು ಎಲ್‌ಪಿಜಿ ಹಡಗು ಜಲಸಂಧಿಯ ಮೂಲಕ ಹಾದುಹೋಗುವ ನಿರೀಕ್ಷೆಯಿದೆ ಮತ್ತು ಸೂಕ್ಷ್ಮ ಸಮುದ್ರ ವಲಯವನ್ನು ತೆರವುಗೊಳಿಸಿದ ನಂತರ ಭಾರತೀಯ ನೌಕಾಪಡೆಯಿಂದ ಮಾರ್ಗದರ್ಶನ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಾದೇಶಿಕ ಬಿಕ್ಕಟ್ಟಿನ ಮಧ್ಯೆ ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಇರಾನ್ ನಡುವಿನ ತೀವ್ರ ರಾಜತಾಂತ್ರಿಕ ಒಪ್ಪಂದದ ನಂತರ ಈ ಬೆಳವಣಿಗೆ ನಡೆದಿದೆ. . ಸಂಘರ್ಷದಿಂದಾಗಿ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವ ಎಂಟು ಎಲ್‌ಪಿಜಿ ಟ್ಯಾಂಕರ್‌ಗಳ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತ ಇರಾನ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹಿಂದಿನ ವರದಿಗಳು ಸೂಚಿಸಿದ್ದವು.
ಇರಾನ್ ಮತ್ತು ದೆಹಲಿ ನಡುವೆ ಹಲವು ಸುತ್ತಿನ ಮಾತುಕತೆಗಳ ಪರಿಣಾಮವಾಗಿ ಸಂಘರ್ಷದ ಮಧ್ಯೆಯೂ ಇರಾನ್ ಭಾರತೀಯ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಅನುಮತಿ ನೀಡಿದೆ. ಇದೀಗ ನೌಕಾಪಡೆ ಬೆಂಗಾವಲಿನೊಂದಿಗೆ ಈ ಹಡಗುಗಳು ಭಾರತದತ್ತ ಹೊರಟಿವೆ. ಭಾರತವು ತನ್ನ ಇಂಧನ ಸಾಗಣೆಯನ್ನು ಆಯಕಟ್ಟಿನ ಜಲಮಾರ್ಗದ ಮೂಲಕ ಹಾದುಹೋಗಲು ಅನುವು ಮಾಡಿಕೊಡಲು ಟೆಹ್ರಾನ್‌ನೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದೆ. ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಜಲಸಂಧಿಯ ಮೂಲಕ ಸಾಗಣೆ ಅಡ್ಡಿಪಡಿಸಿದ ನಂತರ ಹಲವಾರು ಭಾರತೀಯ ಎಲ್‌ಪಿಜಿ ವಾಹಕಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದವು.
ಜಾಗತಿಕ ವ್ಯಾಪಾರ ಸಂಪರ್ಕಕ್ಕೆ ಹೊರ್ಮುಜ್ ಜಲಸಂಧಿ ಬಹುಮುಖ್ಯವಾಗಿದ್ದು, ಈ ಮಾರ್ಗದ ಮೂಲಕವೇ ವಿಶ್ವದ ವಿವಿಧ ರಾಷ್ಟ್ರಗಳಿಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಿಸಲಾಗುತ್ತಿದೆ. ಜಗತ್ತಿಗೆ ಹಡಗುಗಳ ಮೂಲಕ ಸಾಗಾಟವಾಗುವ ಕಚ್ಚಾತೈಲಗಳ ಪ್ರಮಾಣದಲ್ಲಿ ಶೇ. 20ಷ್ಟು ಈ ಜಲಸಂಧಿಯ ಮೂಲಕವೇ ಸಾಗಾಟವಾಗುತ್ತದೆ.