ಲಂಡನ್, ಜೂ. 14: 26 ವರ್ಷದ ಭಾರತೀಯ ಮೂಲದ ಯುವಕನೊಬ್ಬ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾಗಿ ಮೃತಪಟ್ಟ ಘಟನೆ ಇಂಗ್ಲೆಂಡ್‌ನ ಲಂಡನ್‌ನ (London) ಸೌತಾಲ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗುರ್ಭೇಜ್ ಸಿಂಗ್ ಎಂದು ಗುರುತಿಸಲಾಗಿದೆ. ಡಾರ್ಮರ್ಸ್ ವೆಲ್ಸ್ ಲೇನ್ ಜಂಕ್ಷನ್ ಬಳಿಯ ನಾರ್ತ್ ರಸ್ತೆಯಲ್ಲಿ ಮಧ್ಯರಾತ್ರಿ ಇಬ್ಬರು ಯುವಕರು ಚೂರಿ ಇರಿತಕ್ಕೊಳಗಾಗಿದ್ದಾರೆ ಎಂಬುದು ತಿಳಿದು ಬಂತು. ಅವರಿಗೆ ಅರೆವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ (Crime News). ಈ ಪೈಕಿ ಗುರ್ಭೇಜ್ ಸಿಂಗ್ ಮೃತಪಟ್ಟಿದ್ದಾರೆ.
ಗುರ್ಭೇಜ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ 30 ವರ್ಷದವನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿದ್ದಾರೆ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕೊಲೆಯ ಶಂಕೆಯ ಮೇಲೆ ಪೊಲೀಸರು ಘಟನಾ ಸ್ಥಳದಲ್ಲಿ ಏಳು ಜನರನ್ನು ಬಂಧಿಸಿದರು. ಬಂಧಿತರು 20ರಿಂದ 30 ವರ್ಷ ವಯಸ್ಸಿನ ಒಳಗಿನವರು ಎಂದು ತಿಳಿದುಬಂದಿದೆ. ಅವರಲ್ಲಿ ಆರು ಜನರನ್ನು ಆರಂಭಿಕ ತನಿಖೆಯ ನಂತರ ಯಾವುದೇ ಮುಂದಿನ ಕ್ರಮ ಕೈಗೊಳ್ಳದೆ ಬಿಡುಗಡೆ ಮಾಡಲಾಯಿತು. ಏಳನೇ ವ್ಯಕ್ತಿಗೆ ನಂತರ ಜಾಮೀನು ನೀಡಲಾಯಿತು.
ಮದುವೆ ಮಂಟಪದಲ್ಲಿ ವರನಿಗೆ ಚೂರಿ ಇರಿತ; ದಾಳಿಕೋರರನ್ನು 2 ಕಿ.ಮೀ. ಬೆನ್ನಟ್ಟಿದ ಡ್ರೋನ್ ಕ್ಯಾಮರ
ಮಧ್ಯರಾತ್ರಿ ನಾರ್ತ್ ರೋಡ್ ಮತ್ತು ಡಾರ್ಮರ್ಸ್ ವೆಲ್ ಲೇನ್ ಜಂಕ್ಷನ್‌ನಲ್ಲಿರುವ ಅಂಗಡಿಯ ಹೊರಗೆ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆಯ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಸಿಂಗ್ ಕುಟುಂಬಕ್ಕೆ ಬೆಂಬಲ ನೀಡಿದ್ದಾರೆ. ಮಾರಕ ದಾಳಿಯ ಹಿಂದಿನ ಉದ್ದೇಶ ಮತ್ತು ಅದಕ್ಕೇನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿ ಹೆಲಿಕಾಪ್ಟರ್ ಅಪಘಾತ: ಭಾರತೀಯ ಮೂಲದ ಪೈಲಟ್ ಸಾವು
ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಮೂಲದ ಯುವಕ ವಿವಾಹವಾದ ಕೆಲವೇ ಗಂಟೆಗಳಲ್ಲಿ ದುರಂತ ಅಂತ್ಯ ಕಂಡಿರುವ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಡೆಲ್ಟಾ ಏರ್‌ಲೈನ್ಸ್ ಪೈಲಟ್ ಆಗಿದ್ದ 26 ವರ್ಷದ ಡೇವ್ ಫಿಜಿ ಮೃತಪಟ್ಟ ದುರ್ದೈವಿ. ಇವರದು ಕೇರಳ ಮೂಲದ ಕುಟುಂಬ. ಡೇವ್ ತಮ್ಮ ಮದುವೆಯ ನಂತರ ನವವಧುವಿನೊಂದಿಗೆ ಹನಿಮೂನ್‌ಗೆ ತೆರಳುತ್ತಿದ್ದಾಗ, ಅವರು ಪ್ರಯಾಣಿಸುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ಡಾಸನ್‌ವಿಲ್ಲೆ ಕಲ್ಯಾಣ ಮಂಟಪದ ಸಮೀಪವೇ ಅಪಘಾತಕ್ಕೀಡಾಗಿತ್ತು