ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇತಿಹಾಸ; ಭಾರತೀಯ ಮೂಲದ ತಾಯಿ-ಮಗ ಇಬ್ಬರೂ ಇಂಗ್ಲೆಂಡ್‌ ಮೇಯರ್‌ಗಳಾಗಿ ಆಯ್ಕೆ

Indian-origin mayors: ಭಾರತೀಯ ಮೂಲದ ತಾಯಿ-ಮಗ ಇಬ್ಬರೂ ಇಂಗ್ಲೆಂಡ್‌ನಲ್ಲಿ ಮೇಯರ್‌ಗಳಾಗಿ ಆಯ್ಕೆಯಾಗಿದ್ದಾರೆ. ಯುಕೆಯಲ್ಲಿ ಅತ್ಯಂತ ಕಿರಿಯ ಭಾರತೀಯ ಮೂಲದ ಮೇಯರ್ ಆಗುವ ಮೂಲಕ ತುಷಾರ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ತುಷಾರ್ ಮೇ 13 ರಂದು ಮೇಯರ್ ಆಗಿ ಆಯ್ಕೆಯಾದರೆ, ಪರ್ವೀನ್ ಮೇ 20 ರಂದು ಮೇಯರ್ ಆಗಿ ಆಯ್ಕೆಯಾದರು.

ತಾಯಿ-ಮಗ ಇಬ್ಬರೂ ಯುಕೆಯಲ್ಲಿ ಮೇಯರ್‌ಗಳಾಗಿ ಆಯ್ಕೆ

ಚಂಡೀಗಢ, ಮೇ 25: ಭಾರತೀಯ ಮೂಲದ ತಾಯಿ-ಮಗ ಇಬ್ಬರೂ ಇಂಗ್ಲೆಂಡ್‌ನಲ್ಲಿ ಮೇಯರ್‌ಗಳಾಗಿ (mayors) ಆಯ್ಕೆಯಾಗಿದ್ದಾರೆ. ಯುಕೆಯಲ್ಲಿ (United Kingdom) ಅತ್ಯಂತ ಕಿರಿಯ ಭಾರತೀಯ ಮೂಲದ ಮೇಯರ್ ಆಗುವ ಮೂಲಕ ತುಷಾರ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ತುಷಾರ್ ಅವರು ಎಲ್ಸ್ಟ್ರೀ ಮತ್ತು ಬೋರ್‌ಹ್ಯಾಮ್‌ವುಡ್ ಟೌನ್ ಕೌನ್ಸಿಲ್‌ನ ಇತಿಹಾಸದಲ್ಲೇ ಅತಿ ಕಿರಿಯ ಮೇಯರ್ ಆಗಿ ಆಯ್ಕೆಯಾಗಿದ್ದು, ಅದಾದ ಒಂದು ವಾರದ ಬಳಿಕ ಅವರ ತಾಯಿ ಹರ್ಟ್ಸ್‌ಮೀರ್ ಬರೋ ಕೌನ್ಸಿಲ್‌ನ ಮೊದಲ ಭಾರತೀಯ ಮೂಲದ ಮೇಯರ್ ಆಗಿ ಆಯ್ಕೆಯಾದರು.

2013 ರಲ್ಲಿ ಹರಿಯಾಣದ ರೋಹ್ಟಕ್‌ನಿಂದ 23 ವರ್ಷದ ತುಷಾರ್ ಕುಮಾರ್ ಮತ್ತು ಅವರ ತಾಯಿ ಪರ್ವೀನ್ ರಾಣಿ, ಅವರ ಪತಿ ಹಾಗೂ ಇನ್ನೊಬ್ಬ ಕಿರಿಯ ಪುತ್ರನೊಂದಿಗೆ ಯುಕೆಗೆ ತೆರಳಿದ್ದರು. ಇದೀಗ ಅವರು ಅಲ್ಲಿನ ಮೇಯರ್‌ಗಳಾಗಿ ಆಯ್ಕೆಯಾಗಿರುವುದು ಕುಟಂಬಸ್ಥರಿಗೆ ಸಂತಸ ತಂದಿದೆ. ತುಷಾರ್ ಅವರ ತಂದೆ ಸುನಿಲ್ ದಹಿಯಾ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

ತುಷಾರ್ ಮೇ 13 ರಂದು ಮೇಯರ್ ಆಗಿ ಆಯ್ಕೆಯಾದರೆ, ಪರ್ವೀನ್ ಮೇ 20 ರಂದು ಮೇಯರ್ ಆಗಿ ಆಯ್ಕೆಯಾದರು. ಹರಿಯಾಣದ ಸೋನಿಪತ್ ಜಿಲ್ಲೆಯ ಖಾರ್ಖೋಡಾ ಪ್ರದೇಶದಲ್ಲಿರುವ ರೋಹ್ನಾ ಎಂಬುದು ಈ ಕುಟುಂಬದ ಮೂಲ ಗ್ರಾಮವಾಗಿದ್ದು, 2013ರಲ್ಲಿ ಯುಕೆಗೆ ಸ್ಥಳಾಂತರಗೊಳ್ಳುವ ಮೊದಲು ಅವರು ದೀರ್ಘಕಾಲ ರೋಹ್ಟಕ್‌ನಲ್ಲಿ ವಾಸಿಸುತ್ತಿದ್ದರು.

Keir Starmer : ಭಾರತೀಯರಿಗೆ ವೀಸಾ ನಿಯಮಗಳನ್ನು ಸಡಿಲಿಸುವುದಿಲ್ಲ; ಯುಕೆ ಪ್ರಧಾನಿ ಹೀಗೆ ಹೇಳಿದ್ದೇಕೆ?

ಪತ್ನಿ ಪರ್ವೀನ್ ಹಾಗೂ ಇಬ್ಬರು ಮಕ್ಕಳೊಂದಿಗೆ 2013ರಲ್ಲಿ ಯುಕೆಗೆ ತೆರಳಿದಾಗ ಯಾವುದೇ ನಿರ್ದಿಷ್ಟ ಯೋಜನೆ ಮನಸ್ಸಿನಲ್ಲಿ ಇರಲಿಲ್ಲ ಎಂದು ಉದ್ಯಮಿ ದಹಿಯಾ ಅವರು ಹೇಳಿದ್ದಾರೆ. ಆಗ ತುಷಾರ್‌ಗೆ ಕೇವಲ 10 ವರ್ಷ ವಯಸ್ಸಾಗಿತ್ತು ಎಂದು ಅವರು ಹೇಳಿದರು. ಭಾರತೀಯ ಮೂಲದ ಕುಟುಂಬದಿಂದ ಬಂದ ತಾಯಿ ಮತ್ತು ಮಗ ಒಂದೇ ಸಮಯದಲ್ಲಿ ಮೇಯರ್ ಆಗಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ತುಷಾರ್ ಮತ್ತು ಅವರ ತಾಯಿ ಯಾವಾಗಲೂ ಸಮುದಾಯಕ್ಕೆ ಸಹಾಯ ಮಾಡುವುದು ಮತ್ತು ಸಮಾಜ ಸೇವೆ ಮಾಡುವುದನ್ನು ಇಷ್ಟಪಡುತ್ತಾರೆ ಎಂದು ದಹಿಯಾ ಹೇಳಿದರು. ತುಷಾರ್ ಲಂಡನ್‌ನ ಕಾಲೇಜಿನಲ್ಲಿದ್ದಾಗ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಆಗ ಅವರಿಗೆ ಕೇವಲ 20 ವರ್ಷ. ದಹಿಯಾ ಅವರ ಕುಟುಂಬವು ಹರಿಯಾಣದ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕ ಹೊಂದಿದೆ. ರೋಹ್ಟಕ್‌ನಲ್ಲಿ ಅವರಿಗೆ ಒಂದು ಮನೆ ಇದ್ದು, ಅಲ್ಲಿ ಕುಟುಂಬದ ಇತರ ಸದಸ್ಯರು ವಾಸಿಸುತ್ತಿದ್ದಾರೆ ಎಂದು ಹೇಳಿದರು.

ಸಾರ್ವಜನಿಕ ಹಾಗೂ ಸಮುದಾಯ ಸೇವೆಗೆ ಪ್ರವೇಶಿಸಲು ವಯಸ್ಸು ಎಂದಿಗೂ ಅಡ್ಡಿಯಾಗಬಾರದು ಎಂಬುದು ತುಷಾರ್ ಅವರ ನಂಬಿಕೆಯಾಗಿದೆ. ಯುವಕರು ನಿರ್ದಿಷ್ಟ ವಯಸ್ಸಿಗಾಗಿ ಕಾಯದೇ ಸಾರ್ವಜನಿಕ ಅಥವಾ ಸಮುದಾಯ ಸೇವೆಗೆ ಪ್ರವೇಶಿಸಬಹುದು ಎಂಬುದೇ ಅವರ ಸಂದೇಶ. ಜೊತೆಗೆ ತಮ್ಮ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಸದಾ ಬದ್ಧರಾಗಿರಬೇಕು ಎಂಬುದು ತಮ್ಮ ನಂಬಿಕೆ ಎಂದು ದಹಿಯಾ ತಿಳಿಸಿದ್ದಾರೆ.

ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಪದವಿ ಪಡೆದ ತುಷಾರ್, ತಮ್ಮ 20ನೇ ವಯಸ್ಸಿನಲ್ಲಿ ಕೌನ್ಸಿಲರ್ ಆದರು. ರಾಜಕೀಯದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಸಹ ಪಡೆಯಲಿದ್ದಾರೆ.