ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Techie Arrested: ಮಾಹಿತಿ ಸೋರಿಕೆ ಆರೋಪ; ಕತಾರ್‌ನಲ್ಲಿ ಭಾರತೀಯ ಮೂಲದ ಟೆಕ್ಕಿ ಬಂಧನ

ಗುಜರಾತ್ ಮೂಲದ ಎಂಜಿನಿಯರ್ ಅಮಿತ್ ಗುಪ್ತಾ ಅವರನ್ನು ಮಾಹಿತಿ ಕದ್ದ ಆರೋಪದ ಮೇಲೆ ಕತಾರ್‌ನಲ್ಲಿ ಬಂಧಿಸಲಾಗಿದೆ. ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಮಿತ್ ಗುಪ್ತಾ ಅವರನ್ನು ಸಂಪರ್ಕಿಸಿದ್ದು, ಗುಪ್ತಾ ಅವರ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದೆ.

ಕತಾರ್‌ನಲ್ಲಿ ಭಾರತೀಯ ಮೂಲದ ಟೆಕ್ಕಿ ಬಂಧನ

ಸಾಂದರ್ಭಿಕ ಚಿತ್ರ -

Vishakha Bhat
Vishakha Bhat Mar 23, 2025 9:56 AM

ದೊಹಾ: ಗುಜರಾತ್ ಮೂಲದ ಎಂಜಿನಿಯರ್ ಅಮಿತ್ ಗುಪ್ತಾ ಅವರನ್ನು ಮಾಹಿತಿ ಕದ್ದ (Indian Techie Arrested) ಆರೋಪದ ಮೇಲೆ ಕತಾರ್‌ನಲ್ಲಿ ಬಂಧಿಸಲಾಗಿದೆ. ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಮಿತ್ ಗುಪ್ತಾ ಅವರನ್ನು ಸಂಪರ್ಕಿಸಿದ್ದು, ಗುಪ್ತಾ ಅವರ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದೆ. ಐಟಿ ಸಂಸ್ಥೆ ಟೆಕ್ ಮಹೀಂದ್ರಾದ ಹಿರಿಯ ಉದ್ಯೋಗಿಯಾಗಿರುವ ಅಮಿತ್‌ ಗುಪ್ತಾ ಅವರನ್ನು ಜನವರಿ 1 ರಂದು ಕತಾರ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅವರ ತಾಯಿ ಪುಷ್ಪಾ ಗುಪ್ತಾ ವಡೋದರಾದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕತಾರ್‌ನ ರಾಜ್ಯ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಅವರ ತಂದೆ ಹೇಳಿದ್ದಾರೆ.

ಅಮಿತ್ ವಿರುದ್ಧದ ನಿಖರವಾದ ಆರೋಪಗಳು ಬಹಿರಂಗಗೊಂಡಿಲ್ಲ. ಕತಾರ್ ಅಧಿಕಾರಿಗಳು ಅಮಿತ್ ಗುಪ್ತಾ ಅವರನ್ನು ಬಂಧಿಸಿರುವ ಬಗ್ಗೆ ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಚೆನ್ನಾಗಿ ತಿಳಿದಿದೆ, ಇದು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಗುಪ್ತಾ ನಿರಪರಾಧಿ ಮತ್ತು ಅವರ ಮೇಲೆ ದತ್ತಾಂಶ ಕಳ್ಳತನದ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಒತ್ತಾಯಿಸಿ ಗುಪ್ತಾ ಕುಟುಂಬವು ಪ್ರಧಾನ ಮಂತ್ರಿ ಕಚೇರಿಯ ಮಧ್ಯಪ್ರವೇಶವನ್ನು ಕೋರಿದೆ. ಅವರನ್ನು ತುರ್ತಾಗಿ ಬಿಡುಗಡೆ ಮಾಡುವಂತೆಯೂ ಕುಟುಂಬ ಮನವಿ ಮಾಡಿದೆ.

ನಮ್ಮ ರಾಯಭಾರ ಕಚೇರಿಯು ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಲೇ ಇದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಕತಾರ್‌ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಅಮಿತ್ ಗುಪ್ತಾ ಅವರ ತಾಯಿ ಕತಾರ್‌ಗೆ ಪ್ರಯಾಣ ಬೆಳೆಸಿ, ಭಾರತೀಯ ರಾಯಭಾರಿ ಕಚೇರಿಯನ್ನು ಭೇಟಿ ಮಾಡಿದ್ದಾರೆ. ಆದರೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಲೇ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ​​Pakistan Spy Arrest: ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಅಮಿತ್‌ ಗುಪ್ತಾ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಹೇಮಾಂಗ್ ಜೋಶಿ, ಗುಪ್ತಾ ಕಳೆದ 10 ವರ್ಷಗಳಿಂದ ಕತಾರ್‌ನಲ್ಲಿ ಟೆಕ್ ಮಹೀಂದ್ರಾದಲ್ಲಿ ಕೆಲಸ ಮಾಡುತ್ತಿದ್ದರು, ಅವರ ಬಂಧನವಾಗಿದ್ದು, ಗುಪ್ತಾ ಪೋಷಕರು ಕತಾರ್‌ನಲ್ಲಿ ಸುಮಾರು ಒಂದು ತಿಂಗಳು ಇದ್ದರೂ ಅವರ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಕತಾರ್‌ನಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಲಾಗುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಪ್ರತಿಷ್ಠಿತ ಅಧಿಕಾರಿಗಳು ಸೇರಿದಂತೆ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಬಂಧಿಸಲಾಗಿತ್ತು ಮತ್ತು 2023 ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಅಂತಿಮವಾಗಿ 2024 ರ ಫೆಬ್ರವರಿಯಲ್ಲಿ ಕತಾರ್ ಎಮಿರ್ ಆದೇಶದ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಯಿತು.