ಇರಾನ್: ಯುಎಸ್ ಯುದ್ಧ ವಿಮಾನಗಳೆರಡನ್ನು (US fighhter jet) ಇರಾನ್ (iran) ಶುಕ್ರವಾರ ಹೊಡೆದುರುಳಿಸಿದೆ. ಈ ಸಂದರ್ಭದಲ್ಲಿ ಇಬ್ಬರು ಪೈಲಟ್‌ಗಳನ್ನು (US pilot) ರಕ್ಷಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ನಾಪತ್ತೆಯಾಗಿರುವ ಪೈಲಟ್‌ಗಾಗಿ ಇರಾನ್ (Iran war) ಹುಡುಕಾಡುತ್ತಿದೆ ಎನ್ನಲಾಗಿದೆ. ಮೊದಲಿಗೆ ಎರಡು ಆಸನಗಳ ಯುಎಸ್ ಎಫ್ -15 ಇ ಜೆಟ್ ಅನ್ನು ಇರಾನ್‌ನಲ್ಲಿ ಹೊಡೆದುರುಳಿಸಲಾಯಿತು. ಈ ಸಂದರ್ಭದಲ್ಲಿ ಅಮೆರಿಕದ ವಿಶೇಷ ಪಡೆಗಳು ತನ್ನ ಇಬ್ಬರು ಸಿಬ್ಬಂದಿಗಳಲ್ಲಿ ಒಬ್ಬರನ್ನು ರಕ್ಷಿಸಿತ್ತು. ಎರಡನೇ ಎ-10 ವಾರ್ಥಾಗ್ ಯುದ್ಧ ವಿಮಾನವನ್ನು ಕುವೈತ್ ನಲ್ಲಿ ಹೊಡೆದು ಉರುಳಿಸಲಾಗಿದೆ. ಇದರಲ್ಲಿದ್ದ ಪೈಲೆಟ್ ಹೊರಗೆ ಸುರಕ್ಷಿತವಾಗಿ ಜಿಗಿದಿದ್ದಾರೆ ಎನ್ನಲಾಗಿದೆ.
ಸುಮಾರು 289 ಕೋಟಿ ರೂ. ಮೌಲ್ಯದ ಯುಎಸ್ ಎಫ್ -15 ಇ ಸ್ಟ್ರೈಕ್ ಈಗಲ್ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನು ಹೊಂದಿರುತ್ತದೆ. ಎ-10 ವಾರ್ಥಾಗ್ ಯುದ್ಧ ವಿಮಾನವು ಸುಮಾರು 174 ಕೋಟಿ ರೂ. ವೆಚ್ಚದ್ದಾಗಿದೆ. ಇರಾಕ್ ಮೇಲೆ ಅಮೆರಿಕ 2003ರಲ್ಲಿ ಆಕ್ರಮಣ ಮಾಡಿದ ಸಂದರ್ಭದಲ್ಲಿ ಕೊನೆಯ ಬಾರಿಗೆ ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿತ್ತು.
ಇರಾನ್ ದಾಳಿಯ ವೇಳೆ ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ಕೂಡ ಬಿದ್ದಿದ್ದು, ನಾಪತ್ತೆಯಾಗಿರುವ ಪೈಲಟ್‌ಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆತ ಇರಾನಿನ ವಾಯುಪ್ರದೇಶದಿಂದ ಹೊರಬಂದಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ದಾಳಿಯಿಂದ ಪತನಗೊಂಡ ವಿಮಾನದ ಬಗ್ಗೆ ಶ್ವೇತಭವನ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಎಫ್ -15 ಯುದ್ಧ ವಿಮಾನ ನಷ್ಟವು ಇರಾನ್‌ನೊಂದಿಗಿನ ಮಾತುಕತೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಯುದ್ಧ ಎಂದರು.
ವಾರದ ಹಿಂದೆಯಷ್ಟೇ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಮೇಲೆ ನಮ್ಮ ವಿಮಾನಗಳು ಹಾರುತ್ತಿವೆ. ಇರಾನ್‌ನ ಮಿಲಿಟರಿ ಈಗ ಸೋಲನುಭವಿಸಿದೆ. ಅವರು ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಕುವೈತ್ ಮತ್ತು ಇತರ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ತಾಣಗಳ ದಾಳಿ ನಡೆಸುತ್ತಿರುವ ಇರಾನ್, ಕುವೈತ್‌ನ ಕ್ಯಾಂಪ್ ಬುಹ್ರಿಂಗ್ ನೆಲೆಯಲ್ಲಿ ಅಮೆರಿಕದ ಸಿಎಚ್ -47 ಚಿನೂಕ್ ಹೆಲಿಕಾಪ್ಟರ್ ಅನ್ನು ಡ್ರೋನ್ ದಾಳಿಯಲ್ಲಿ ಹಾನಿಗೊಳಿಸಿದೆ ಎನ್ನಲಾಗಿದೆ. ನಾಪತ್ತೆಯಾಗಿರುವ ಅಮೆರಿಕ ಪೈಲಟ್ ಅನ್ನು ಸೆರೆಹಿಡಿದವರಿಗೆ ಇರಾನ್ ಬಹುಮಾನ ಘೋಷಿಸಿದೆ ಎಂದು ಇರಾನ್ ದೂರದರ್ಶನ ವರದಿಗಾರರೊಬ್ಬರು ಸ್ಥಳೀಯ ಅಧಿಕೃತ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ 6 ವರ್ಷದ ಮಗುವನ್ನು ಬಿಟ್ಟು ಹೋದ ತಾಯಿ: ಸಿಬ್ಬಂದಿ ಮಾಡಿದ್ದೇನು?
ನೈಋತ್ಯ ಇರಾನ್‌ನಲ್ಲಿ ವಿಮಾನ ಪತನಗೊಂಡ ಪ್ರದೇಶದ ಬಳಿಯ ಪ್ರದೇಶವನ್ನು ತಾನು ಶೋಧಿಸುತ್ತಿರುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲಿಬಾಫ್, ಅಮೆರಿಕದ ಪೈಲೆಟ್ ಬೇಟೆಗೆ ನಮ್ಮ ತಂಡವನ್ನು ಇಳಿಸಲಾಗಿದೆ. ಸತತವಾಗಿ 37 ಬಾರಿ ಇರಾನ್ ಅನ್ನು ಸೋಲಿಸಿದ ಅನಂತರ ಅವರು ಪ್ರಾರಂಭಿಸಿದ ಅದ್ಭುತವಾದ ಯಾವುದೇ ತಂತ್ರವಿಲ್ಲದ ಯುದ್ಧ ಎಂದು ಹೇಳಿದ್ದಾರೆ.