ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೋಟೆಲ್‌ನಲ್ಲಿ 6 ವರ್ಷದ ಮಗುವನ್ನು ಬಿಟ್ಟು ಹೋದ ತಾಯಿ: ಸಿಬ್ಬಂದಿ ಮಾಡಿದ್ದೇನು?

Viral News: ಚೀನಾದ ಹೆನಾನ್‌ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹೆತ್ತ ತಾಯಿಯೇ ತನ್ನ ಮಗುವನ್ನು ಹೋಟೆಲ್ ರೂಮಿನಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ‌. ಆದರೆ ಹೋಟೆಲ್ ಸಿಬ್ಬಂದಿ ಆ ಮಗುವನ್ನು ಅನಾಥವಾಗಿ ಬಿಡದೇ ತಾವೇ ಪ್ರೀತಿಯಿಂದ ಸಾಕಿ ಸಲಹಿದ್ದಾರೆ.

ಹೋಟೆಲ್‌ನಲ್ಲಿ 6 ವರ್ಷದ ಮಗುವನ್ನು  ಬಿಟ್ಟು ಹೋದ ತಾಯಿ

ಸಾಂದರ್ಭಿಕ ಚಿತ್ರ -

Profile
Pushpa Kumari Apr 3, 2026 8:11 PM

ಚೀನಾ, ಏ. 3: ಚೀನಾದ (China) ಹೆನಾನ್‌ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಹೆತ್ತ ತಾಯಿಯೇ ತನ್ನ ಮಗನನ್ನು ಹೋಟೆಲ್ ರೂಮಿನಲ್ಲಿ ಬಿಟ್ಟುಹೋದ ಘಟನೆ ನಡೆದಿದೆ‌. ಆದರೆ ಹೋಟೆಲ್ ಸಿಬ್ಬಂದಿ ಆ ಮಗುವನ್ನು ಅನಾಥವಾಗಿ ಬಿಡದೇ ತಾವೇ ಪ್ರೀತಿಯಿಂದ ಸಾಕಿ ಸಲಹಿದ್ದಾರೆ. ಹೋಟೆಲ್ ಸಿಬ್ಬಂದಿಯ ಮಾನವೀಯತೆಗೆ ಎಲ್ಲರೂ ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಒಬ್ಬ ಬಾಲಕ ಮತ್ತು ಅವನ 25 ವರ್ಷದ ತಾಯಿ ಫೆಬ್ರವರಿಯಲ್ಲಿ ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿರುವ ಹೋಟೆಲ್‌ಗೆ ಬಂದರು. ಆದರೆ ತನ್ನ ಮಗನನ್ನು ಹೋಟೆಲ್‌ನಲ್ಲೇ ಬಿಟ್ಟು ಆಕೆ ತೆರಳಿದ್ದಾಳೆ. ಕೋಣೆಯಲ್ಲಿ ಒಬ್ಬಂಟಿಯಾಗಿ ಪುಟ್ಟ ಚೆಂಗ್‌ಚೆಂಗ್ ಎನ್ನುವ ಮಗು ಹೋಟೆಲ್ ಕ್ಲೀನರ್‌ಗಳೊಂದಿಗೆ ಮಾತನಾಡುತ್ತಾ, ಅಪ್ಪುಗೆಗಳನ್ನು ಕೇಳುತ್ತಾ, ಮತ್ತು ಆಗಾಗ್ಗೆ ಕಿಟಕಿಯ ಬಳಿ ಹೊರಗೆ ನೋಡುತ್ತಾ ತನ್ನ ದಿನಗಳನ್ನು ಕಳೆಯುತ್ತಿದ್ದ.

ಹೋಟೆಲ್ ಕ್ಲೀನರ್‌ಗಳೊಂದಿಗೆ ಮಾತನಾಡುತ್ತ ಅಮ್ಮ ಯಾವಾಗ ಬರುತ್ತಾರೆ ಎಂದು ಮಗು ದಿನ ನಿತ್ಯ ಪ್ರಶ್ನೆ ಮಾಡುತ್ತಲೇ ಇತ್ತು. ಆದರೆ ಹೋಟೆಲ್ ಸಿಬ್ಬಂದಿ ಮಗುವಿನ ಆರೈಕೆ ಮಾಡಿದ್ದು, ಒಬ್ಬ ಮಹಿಳಾ ಸಿಬ್ಬಂದಿ ಮಗುವಿಗೆ ತಾತ್ಕಾಲಿಕ ತಾಯಿಯಾಗಿ ಪ್ರೀತಿ ನೀಡಿದರು.

ಏಕಾಂಗಿತನ ಕಾಡಿದಾಗ ಮಗು ಕೋಣೆಯ 'ಸ್ಮಾರ್ಟ್ ಸ್ಪೀಕರ್' ಬಳಿ ನಿನಗೆ ಅಪ್ಪ-ಅಮ್ಮ ಇದ್ದಾರಾ? ನನ್ನ ಅಮ್ಮ ಬೇಗನೆ ಬರಲಿʼ ಎಂದು ಬೇಡಿಕೊಳ್ಳುತ್ತಿತ್ತು. ಪೊಲೀಸರ ಹುಡುಕಾಟದ ನಂತರ ಮಾರ್ಚ್ 24ರಂದು ತಾಯಿ ಮರಳಿ ಬಂದಿದ್ದಾರೆ. ಆದರೆ ಆಕೆ ಮಗುವನ್ನು ಬಿಟ್ಟು ಹೋದ ಕಾರಣ ಕೇಳಿ ಎಲ್ಲರ ಕಣ್ಣಲ್ಲಿ ನೀರು ಬಂದಿದೆ.

ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್‌ ಸಂಸದರು; ವಿಡಿಯೋ ನೋಡಿ

ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು ತನ್ನ ಮಗನಿಗೆ ಸೋಂಕು ಹರಡುವ ಭಯದಲ್ಲಿದ್ದಳು. ಅದೇ ರೀತಿ ತನ್ನ ಅಂಗವಿಕಲ ತಂಗಿಯ ಚಿಕಿತ್ಸೆಗಾಗಿ 1 ಲಕ್ಷ ಯುವಾನ್‌ಗೂ ಹೆಚ್ಚು ಸಾಲ ಮಾಡಿಕೊಂಡಿದ್ದಳು.‌ ತನಗೆ ಸೋಂಕು ಇರುವುದರಿಂದ ಮಗನಿಗೂ ಹರಡಬಹುದು ಎಂಬ ಭಯದಿಂದ ಮಗನನ್ನು ಬಿಟ್ಟು ಹೋಗಿದ್ದಾಳೆ. ಈ ಸಂದರ್ಭದಲ್ಲಿ ಮಗು ಚೆಂಗ್‌ಚೆಂಗ್ ತನ್ನ ಅಳುವ ತಾಯಿಯನ್ನು ಸಮಾಧಾನಪಡಿಸುತ್ತಾ, "ಅಮ್ಮಾ, ನಾನು ನಿನ್ನನ್ನು ದೂಷಿಸುವುದಿಲ್ಲ. ನಾನು ನಿನ್ನನ್ನು ನೋಡಿಕೊಳ್ಳಬಲ್ಲೆ. ನಾನು ಬೇಗನೆ ಬೆಳೆದು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಹೇಳಿರುವುದು ಸ್ಥಳೀಯರನ್ನು ಭಾವಿಕರನ್ನಾಗಿಸಿದೆ.