ವಾಷಿಂಗ್ಟನ್: ವಿಶ್ವದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿರುವ ಇರಾನ್ ಯುದ್ಧ (iran war) ಶೀಘ್ರದಲ್ಲೇ ಕೊನೆಯಾಗಲಿದೆ. ಕಳೆದ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗಿರುವ ಇರಾನ್ ಯುದ್ಧವನ್ನುಇನ್ನೊಂದು ಎರಡು ಮೂರು ವಾರಗಳಲ್ಲಿ ನಿಲ್ಲಲಿದೆ ಎನ್ನುವ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ನೀಡಿದ್ದಾರೆ. ಬಹಳ ಬೇಗ ಅಮೆರಿಕವು (American military) ಇರಾನ್ ಅನ್ನು ತೊರೆಯಲಿದೆ. ಮುಂದೆ ವಾಷಿಂಗ್ಟನ್ ನೇರವಾಗಿ ಯುದ್ಧದಲ್ಲಿ ಭಾಗಿಯಾಗದೇ ಇದ್ದರೂ ಕೆಲವು ಅಪೂರ್ಣ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ಹೇಳಿದರು.
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್‌ನೊಂದಿಗಿನ ನೇರ ಯುದ್ಧದಲ್ಲಿ ವಾಷಿಂಗ್ಟನ್ ಇನ್ನು ಹೆಚ್ಚು ಕಾಲ ಭಾಗಿಯಾಗುವುದಿಲ್ಲ. ಆದರೆ ಮಿಲಿಟರಿ ಕ್ರಮ ಮತ್ತು ರಾಜತಾಂತ್ರಿಕ ಸಂಪರ್ಕ ಎರಡನ್ನೂ ಮುಂದುವರಿಸಲಿದೆ. ಇದಕ್ಕಾಗಿ ಎರಡು ಮೂರು ವಾರ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿದ ರಷ್ಯಾದ ಎಎನ್-26 ಮಿಲಿಟರಿ ವಿಮಾನ: 29 ಮಂದಿ ದುರ್ಮರಣ
ಇರಾನ್‌ನಿಂದ ನಾವು ಬಹಳ ಬೇಗನೆ ಹೊರಬರುತ್ತೇವೆ. ಅವರು ಶರಣಾಗುತ್ತಾರೆ. ನಾವು ಕೆಲಸವನ್ನು ಮುಗಿಸುತ್ತಿದ್ದೇವೆ. ಬಹುಶಃ ಇನ್ನೊಂದು ಎರಡು ವಾರಗಳಲ್ಲಿ ಇದು ಕೊನೆಯಾಗಲಿದೆ. ಟೆಹರಾನ್ ಜೊತೆ ನಡೆಸುವ ಒಪ್ಪಂದದ ಕಾರಣದಿಂದ ನಾವು ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ ಎಂದ ಅವರು, ಟೆಹರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ತೈಲ ಟ್ಯಾಂಕರ್ ಸಂಚಾರಕ್ಕೆ ಅಡ್ಡಿ ಪಡಿಸಿದೆ. ಅವರು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿಲ್ಲ. ಒಪ್ಪಂದ ನಡೆಯಲಿ, ನಡೆಯದೇ ಇರಲಿ ಅದು ಅಪ್ರಸ್ತುತ. ಇರಾನ್‌ನ ಪರಮಾಣು ಸಾಮರ್ಥ್ಯಗಳು ಸಾಕಷ್ಟು ಕುಸಿದಿವೆ ಎನ್ನುವುದು ದೃಢ ಪಟ್ಟಿರುವುದರಿಂದ ನಾವು ಯುದ್ಧದಿಂದ ನಿರ್ಗಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ತೊಂದರೆಗಳಿಂದ ತೈಲ ಕೊರತೆ ಎದುರಿಸುತ್ತಿರುವ ದೇಶಗಳು ಅಮೆರಿಕದಿಂದ ತೈಲ ಖರೀದಿಸಬೇಕು ಅಥವಾ ಸ್ವಲ್ಪ ಕಾಲ ಕಾದು ನೋಡಬೇಕು ಎಂದ ಟ್ರಂಪ್, ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ.
ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುವವರಿಗೆ ಏರ್ ಇಂಡಿಯಾ, ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಹತ್ವದ ಸೂಚನೆ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷದ ಕಾರಣದಿಂದ ಇರಾನ್ ಸಮೀಪವಿರುವ ಹೊರ್ಮುಜ್ ಜಲಸಂಧಿಯ ತೆರವು ಮಾಡಲು ಅಮೆರಿಕದ ವಿನಂತಿಗೆ ಸಹಾಯ ಮಾಡದೇ ಇರುವ ರಾಷ್ಟ್ರಗಳನ್ನು ಉದ್ದೇಶಿಸಿ ಅದರಲ್ಲೂ ಮುಖ್ಯವಾಗಿ ಯುನೈಟೆಡ್ ಕಿಂಗ್‌ಡಮ್ ಅನ್ನು ಉಲ್ಲೇಖಿಸಿ ಬರೆದಿರುವ ಅವರು ಅಮೆರಿಕವು ಇನ್ನು ಮುಂದೆ ಯಾರ ಸಹಾಯಕ್ಕೂ ಬರುವುದಿಲ್ಲ. ನೀವು ನಿಮಗಾಗಿ ಹೋರಾಡಲು ಕಲಿಯಬೇಕು ಎಂದರು.