Donald Trump:ಹೈದರಾಬಾದ್ನ ರಸ್ತೆಗೆ ಡೊನಾಲ್ಡ್ ಟ್ರಂಪ್ ಹೆಸರಿಟ್ಟ ತೆಲಂಗಾಣ ಸರ್ಕಾರ; ಯಾಕೆ ಗೊತ್ತಾ?
Donald Trump Avenue Road: ಹೈದರಾಬಾದ್‌ನಲ್ಲಿ ಯುಎಸ್ ಕಾನ್ಸುಲೇಟ್ ಜನರಲ್ ರಸ್ತೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದೆ. ಡೊನಾಲ್ಡ್ ಟ್ರಂಪ್ ಅವೆನ್ಯೂ ರೋಡ್ ಎಂದು ಹೆಸರಿಡಲಾಗಿದೆ. ತೆಲಂಗಾಣ ಸರ್ಕಾರದ ಈ ನಿರ್ಧಾರವು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ಹೈದರಾಬಾದ್: ತೆಲಂಗಾಣ ಸರ್ಕಾರವು ಅಮೆರಿಕದ 45ನೇ ಮತ್ತು 47ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಹೆಸರನ್ನು ರಾಜ್ಯದಲ್ಲಿನ ಯುಎಸ್ ಕಾನ್ಸುಲೇಟ್ ಜನರಲ್ (US Consulate General) ರಸ್ತೆಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ. ಹೈದರಾಬಾದ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಹೈ ಪ್ರೊಫೈಲ್ ರಸ್ತೆಯನ್ನು ಡೊನಾಲ್ಡ್ ಟ್ರಂಪ್ ಅವೆನ್ಯೂ (Donald Trump Avenue) ಎಂದು ಕರೆಯಲು ನಿರ್ಧರಿಸಲಾಗಿದೆ.
ರಾಜ್ಯ ಸರ್ಕಾರವು ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಅಮೆರಿಕ ರಾಯಭಾರ ಕಚೇರಿಗೆ ಪತ್ರ ಬರೆದು ಯೋಜನೆಗಳ ಬಗ್ಗೆ ತಿಳಿಸಲಿದೆ. ಈ ವರ್ಷದ ಆರಂಭದಲ್ಲಿ, ದೆಹಲಿಯಲ್ಲಿ ನಡೆದ ವಾರ್ಷಿಕ ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆ ವೇದಿಕೆ (ಯುಎಸ್‌ಐಎಸ್‌ಪಿಎಫ್) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹೈದರಾಬಾದ್‌ನ ಪ್ರಮುಖ ರಸ್ತೆಗಳಿಗೆ ಪ್ರಮುಖ ಜಾಗತಿಕ ಕಂಪನಿಗಳ ಹೆಸರಿಡಲು ಪ್ರಸ್ತಾಪಿಸಿದ್ದರು.
ಮೋದಿ ಒಬ್ಬ ಮಹಾನ್ ವ್ಯಕ್ತಿ, ಸ್ನೇಹಿತ! ಭಾರತ ಭೇಟಿ ಬಗ್ಗೆ ಸುಳಿವು ಕೊಟ್ರಾ ಡೊನಾಲ್ಡ್ ಟ್ರಂಪ್?
ಈ ಪ್ರಸ್ತಾವನೆ, ಭಾರತವನ್ನು ಪ್ರತಿನಿಧಿಸುವ ರಾಜ್ಯವಾಗಿ ತೆಲಂಗಾಣವನ್ನು ನಿರ್ಮಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಉಪಕ್ರಮದ ಭಾಗವಾಗಿದೆ. ಜೊತೆಗೆ, ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಸಂಸ್ಥೆಗಳ ಗೌರವ ಮತ್ತು ಗುರುತಿನ ಚಿಹ್ನೆಯಾಗಿ ಇನ್ನೂ ಕೆಲವು ರಸ್ತೆಗಳನ್ನು ಮೀಸಲಿಡುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ.
ನಗರದ ರವಿರ್ಯಾಲದಲ್ಲಿರುವ ನೆಹರು ಹೊರ ವರ್ತುಲ ರಸ್ತೆ ಮತ್ತು ಹೊಸದಾಗಿ ಪ್ರಸ್ತಾಪಿಸಲಾದ ರೇಡಿಯಲ್ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಂಬರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ದಿವಂಗತ ಕೈಗಾರಿಕೋದ್ಯಮಿ ಪದ್ಮಶ್ರೀ ರತನ್ ಟಾಟಾ ಅವರ ಹೆಸರಿಡಲಾಗುವುದು. ಸರ್ಕಾರ ಈ ಹಿಂದೆ ರವಿರ್ಯಾಲದಲ್ಲಿರುವ ಇಂಟರ್‌ಚೇಂಜ್‌ನ ಹೆಸರನ್ನು ಟಾಟಾ ಇಂಟರ್‌ಚೇಂಜ್ ಎಂದು ಬದಲಾಯಿಸಿತ್ತು.
ಇದರ ಜೊತೆಗೆ, ಗ್ಲೋಬಲ್ ಮಟ್ಟದಲ್ಲಿ ಗೂಗಲ್ ಮ್ಯಾಪ್‌ಗಳು ಮತ್ತು ಕಂಪನಿಯ ಕೊಡುಗೆ ಮತ್ತು ಪ್ರಭಾವವನ್ನು ಗೌರವಿಸುವಂತೆ ಪ್ರಮುಖ ರಸ್ತೆ ವಿಭಾಗವನ್ನು ಗೂಗಲ್ ಸ್ಟ್ರೀಟ್ ಎಂದು ಹೆಸರಿಡುವ ನಿರ್ಧಾರ ಕೈಗೊಳ್ಳಲಾಗಿದೆ. ಹೈದರಾಬಾದ್‌ನಲ್ಲಿ ಅಮೆರಿಕ ಹೊರತುಪಡಿಸಿ ಕಂಪನಿಯ ಅತಿ ದೊಡ್ಡ ಕ್ಯಾಂಪಸ್ ಸ್ಥಾಪನೆಯೂ ನಡೆಯಲಿದೆ.
Ambassador: ಭಾರತಕ್ಕೆ ಹೊಸ ರಾಯಭಾರಿಯನ್ನು ನೇಮಿಸಿದ ಡೊನಾಲ್ಡ್ ಟ್ರಂಪ್
ಹೈದರಾಬಾದ್ ಮೆಟ್ರೋದಲ್ಲಿ ಭದ್ರತಾ ಸಿಬ್ಬಂದಿಯಾಗಿ 20 ತೃತೀಯ ಲಿಂಗಿಗಳ ನೇಮಕ
ಇತ್ತೀಚೆಗಷ್ಟೇ ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್, ತನ್ನ ಭದ್ರತಾ ವಿಭಾಗದಲ್ಲಿ 20 ತೃತೀಯ ಲಿಂಗಿ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಸಾಮಾಜಿಕ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿತು. ಈ ಹೊಸ ನೇಮಕಾತಿಯು ಮಹಿಳಾ ಭದ್ರತೆ ಹೆಚ್ಚಿಸುವುದರ ಜತೆಗೆ ಎಲ್ಲರಿಗೂ ಸುರಕ್ಷಿತ ಹಾಗೂ ಗೌರವಯುತ ಪ್ರಯಾಣ ವಾತಾವರಣ ನಿರ್ಮಿಸುವಲ್ಲಿ ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ತೆಲಂಗಾಣ ಸರ್ಕಾರವು ಅಂಚಿನಲ್ಲಿರುವ ಸಮುದಾಯಗಳಿಗೆ ಗೌರವ, ಘನತೆ ಮತ್ತು ಸಮಾನ ಅವಕಾಶದ ವಿಶಾಲ ಬದ್ಧತೆಗೆ ಸಾಕ್ಷಿ ಎನಿಸಿಕೊಂಡಿದೆ. ಕಳೆದ ವರ್ಷ ಸರ್ಕಾರವು ತೃತೀಯ ಲಿಂಗಿ ವ್ಯಕ್ತಿಗಳನ್ನು ಸಹಾಯಕ ಸಂಚಾರ ಮಾರ್ಷಲ್‌ಗಳಂತಹ ವಿವಿಧ ಸಾರ್ವಜನಿಕ ಸೇವಾ ವಲಯಗಳಿಗೆ ಸೇರಿಸುವ ನೀತಿಯನ್ನು ಜಾರಿಗೆ ತರಲು ಪ್ರಾರಂಭಿಸಿತ್ತು. ತೃತೀಯ ಲಿಂಗಿ ಸಿಬ್ಬಂದಿಯ ನಿಯೋಜನೆ, ಸುರಕ್ಷಿತ ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣವನ್ನು ನಿರ್ಮಿಸುವ HMRLನ ಧ್ಯೇಯದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.