ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ರೇಲ್‌ ಪ್ರಮುಖ ಪರಮಾಣು ಸಂಶೋಧನಾ ತಾಣದ ಮೇಲೆ ಇರಾನ್ ದಾಳಿ; 40 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ರೇಲ್‌ನ ಪ್ರಮುಖ ಪರಮಾಣು ಸಂಶೋಧನಾ ತಾಣವಾದ ಡಿಮೋನಾ ಮೇಲೆ ಇರಾನ್ ದಾಳಿ ನಡೆಸಿದ್ದು, ಸುಮಾರು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 1958ರಲ್ಲಿ ಸ್ಥಾಪಿಸಲಾದ ಇಸ್ರೇಲ್‌ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರ ದಕ್ಷಿಣ ಇಸ್ರೇಲಿ ಪಟ್ಟಣವಾದ ಡಿಮೋನಾವನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ.

ಸಂಗ್ರಹ ಚಿತ್ರ

ಇಸ್ರೇಲ್: ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ (Iranian ballistic missile) ಶನಿವಾರ ಸಂಜೆ ಇಸ್ರೇಲ್‌ನ (Israel) ಪ್ರಮುಖ ಪರಮಾಣು ಸಂಶೋಧನಾ ತಾಣವಾದ (Nuclear research site) ಡಿಮೋನಾ (Dimona) ಮೇಲೆ ಅಪ್ಪಳಿಸಿದೆ. ಇದರಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 1958ರಲ್ಲಿ ಸ್ಥಾಪಿಸಲಾದ ಇಸ್ರೇಲ್‌ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರ (Israels Nuclear Research Site) ದಕ್ಷಿಣ ಇಸ್ರೇಲ್ ನ ಪಟ್ಟಣವಾದ ಡಿಮೋನಾವನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಪರಮಾಣು ಕೇಂದ್ರದ ಮೇಲಿರುವ ಗುಮ್ಮಟಾಕಾರದ ರಚನೆಗೆ ಹೆಸರುವಾಸಿಯಾದ ಡಿಮೋನಾವನ್ನು ಲಿಟಲ್ ಇಂಡಿಯಾ ಎಂದೇ ಕರೆಯಲಾಗುತ್ತದೆ.

ಲಿಟಲ್ ಇಂಡಿಯಾ ಎಂದೇ ಕರೆಯಲ್ಪಡುವ ಡಿಮೋನಾದಲ್ಲಿ ಹೆಚ್ಚಿನ ಭಾರತೀಯ-ಯಹೂದಿಗಳಿದ್ದಾರೆ. ಇಲ್ಲಿರುವ ಸುಮಾರು ಸುಮಾರು 7,500 ರಷ್ಟು ಮಂದಿ ಮಹಾರಾಷ್ಟ್ರದವರಾಗಿದ್ದಾರೆ. ಈ ಪಟ್ಟಣವು ಭಾರತದೊಂದಿಗೆ ಬಲವಾದ ಸಾಂಸ್ಕೃತಿಕ ನಂಟನ್ನು ಹೊಂದಿದೆ.

Iran- israel war: ಹೊರ್ಮುಜ್‌ ಜಲಸಂಧಿಯತ್ತ ಭಾರತದ ಯುದ್ಧನೌಕೆಗಳು! ಕಾರಣವೇನು?

ಡಿಮೋನಾದಲ್ಲಿನ ವಸತಿ ಪ್ರದೇಶಕ್ಕೆ ಶನಿವಾರ ಸಂಜೆ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಅಪ್ಪಳಿಸಿತ್ತು. ಈ ದಾಳಿಯಿಂದ ಸುಮಾರು 47 ಮಂದಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಇಸ್ರೇಲ್‌ನ ರಾಷ್ಟ್ರೀಯ ತುರ್ತು ವೈದ್ಯಕೀಯ ಸೇವೆಯು ೪೦ಕ್ಕಿಂತಲೂ ಹೆಚ್ಚು ಜನರಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ಇದರಲ್ಲಿ 10 ಮತ್ತು 12 ವರ್ಷದ ಬಾಲಕರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿತ್ತು.

30ರ ವಯಸ್ಸಿನ ಮಹಿಳೆಯೊಬ್ಬರಿಗೂ ಗಾಯವಾಗಿದ್ದು, ಇನ್ನು ಹಲವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಅನೇಕರು ಓಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರೊಬ್ಬರು ತಿಳಿಸಿದರು.

ವಸತಿ ಪ್ರದೇಶದ ಮೇಲೆ ದಾಳಿಯಾಗಿದ್ದು, ಅನೇಕರು ಮನೆಯೊಳಗೆ ಇದ್ದುದರಿಂದ ಹೆಚ್ಚಿನ ಅಪಾಯ ತಪ್ಪಿತು. ಗಾಯಗೊಂಡ ಮಕ್ಕಳಲ್ಲಿ ಒಬ್ಬರು ದಾಳಿಯ ಸಮಯದಲ್ಲಿ ಹೊರಗೆ ಉಳಿದಿದ್ದರು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಡಿಮೋನಾವನ್ನು 1958ರಲ್ಲಿ ಸ್ಥಾಪಿಸಲಾಗಿತ್ತು. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರತಿಬಂಧಿಸುವಲ್ಲಿ ವಿಫಲವಾದ ಕುರಿತು ತನಿಖೆ ನಡೆಸುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು (IDF) ತಿಳಿಸಿವೆ. ಈ ಘಟನೆಯನ್ನು ಖಂಡಿಸಿರುವ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA), ಯುಎನ್ ಕಾವಲು ಸಂಸ್ಥೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮಿಲಿಟರಿ ಸಂಯಮ ಕಾಯ್ದುಕೊಳ್ಳುವಂತೆ ಅದು ಕರೆ ನೀಡಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥ, ಇಸ್ರೇಲ್‌ನ ಡಿಮೋನಾ ನಗರದಲ್ಲಿ ಕ್ಷಿಪಣಿ ದಾಳಿಯಾಗಿರುವುದು ತಿಳಿದಿದೆ. ನೆಗೆವ್‌ನ ಪರಮಾಣು ಸಂಶೋಧನಾ ಕೇಂದ್ರಕ್ಕೆ ಹಾನಿಯಾದ ಬಗ್ಗೆ ಯಾವುದೇ ಸೂಚನೆ ಇಲ್ಲ ಎಂದು ತಿಳಿಸಿದೆ.

Iran-Israel War: ಇಸ್ರೇಲ್‌-ಇರಾನ್‌ ಯುದ್ಧ; ಗಲ್ಫ್‌ ರಾಷ್ಟ್ರಗಳಿಗೆ ಬೆಂಗಳೂರು, ಮಂಗಳೂರಿನಿಂದ ವಿಮಾನಗಳ ಹಾರಾಟ ರದ್ದು

ಡಿಮೋನಾ ಮೇಲೆ ದಾಳಿ ಏಕೆ?

ಯುಎಸ್-ಇಸ್ರೇಲ್ ಸೇನಾ ಪಡೆಯು ಇರಾನ್ ನ ಶಾಹಿದ್ ಅಹ್ಮದಿ-ರೋಶನ್ ನಟಾಂಜ್ ಪುಷ್ಟೀಕರಣ ಸಂಕೀರ್ಣವನ್ನು ಹೊಡೆದ ಬಳಿಕ ಇಸ್ರೇಲ್ ಮೇಲೆ ಈ ದಾಳಿಯಾಗಿದೆ. ಘಟನೆಯಲ್ಲಿ ಯಾವುದೇ ವಿಕಿರಣ ಸೋರಿಕೆಗಳು ಪತ್ತೆಯಾಗಿಲ್ಲ. ಯಾವುದೇ ಹೆಚ್ಚಿನ ಅಪಾಯವಿಲ್ಲ ಎನ್ನಲಾಗಿದೆ.

ನಟಾಂಜ್ ಮೇಲೆ ನಡೆದ ದಾಳಿಗೂ ಇಸ್ರೇಲ್ ಗೂ ಸಂಬಂಧವಿಲ್ಲ ಎಂದು ಇಸ್ರೇಲ್ ಹೇಳಿದೆ. ಈ ಕುರಿತು ತನಿಖೆ ನಡೆಸುವುದಾಗಿ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಮರಿಯಾನೋ ಗ್ರೋಸಿ ತಿಳಿಸಿದ್ದಾರೆ. ನಟಾಂಜ್ ಸೌಲಭ್ಯದ ಮೇಲಿನ ದಾಳಿಯನ್ನು ರಷ್ಯಾದ ವಿದೇಶಾಂಗ ಸಚಿವಾಲಯವು ಖಂಡಿಸಿದೆ.

ವಿದ್ಯಾ ಇರ್ವತ್ತೂರು

View all posts by this author