ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ; ಮಸೌದ್ ಪೆಜೆಶ್ಕಿಯಾನ್ ಹೇಳಿದ್ದೇನು?

Iranian President Apologises: ಇತ್ತೀಚಿನ ಇರಾನ್ ದಾಳಿಗಳಲ್ಲಿ ಗುರಿಯಾಗಿರುವ ನೆರೆಯ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಶನಿವಾರ (ಮಾ.7) ಕ್ಷಮೆಯಾಚಿಸಿದ್ದಾರೆ. ಇರಾನ್ ವಿರುದ್ಧ ದಾಳಿ ನಡೆಸಲು ನೆರೆಯ ರಾಷ್ಟ್ರಗಳ ಪ್ರದೇಶಗಳನ್ನು ಬಳಸದ ಹೊರತು, ಅವುಗಳ ಮೇಲಿನ ದಾಳಿಯಿಂದ ದೂರವಿರುವ ನೀತಿಯನ್ನು ಅಳವಡಿಸಿಕೊಂಡಿರುವುದಾಗಿ ಇರಾನ್ ಅಧ್ಯಕ್ಷರು ಹೇಳಿದರು.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (ಸಂಗ್ರಹ ಚಿತ್ರ)

ಟೆಹರಾನ್, ಮಾ.7: ಇತ್ತೀಚಿನ ಇರಾನ್ (Iran) ದಾಳಿಗಳಲ್ಲಿ ಗುರಿಯಾಗಿರುವ ನೆರೆಯ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Iranian President Masoud Pezeshkian) ಶನಿವಾರ (ಮಾ.7) ಕ್ಷಮೆಯಾಚಿಸಿದ್ದಾರೆ. ತಮ್ಮ ದೇಶದ ಮೇಲೆ ಆ ದೇಶಗಳ ಭೂಭಾಗದಿಂದ ದಾಳಿ ಆರಂಭವಾದರೆ ಮಾತ್ರ ಇನ್ನು ಮುಂದೆ ಆ ರಾಷ್ಟ್ರಗಳನ್ನು ಗುರಿಯಾಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇರಾನ್ ದಾಳಿ ಮಾಡಿದ ನೆರೆಯ ರಾಷ್ಟ್ರಗಳಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಪೆಜೆಶ್ಕಿಯನ್ ರಾಜ್ಯ ದೂರದರ್ಶನದಲ್ಲಿ ಪ್ರಸಾರ ಮಾಡಿದ ಭಾಷಣದಲ್ಲಿ ಹೇಳಿದರು. ಇರಾನ್ ವಿರುದ್ಧ ದಾಳಿ ನಡೆಸಲು ನೆರೆಯ ರಾಷ್ಟ್ರಗಳ ಪ್ರದೇಶಗಳನ್ನು ಬಳಸದ ಹೊರತು, ಅವುಗಳ ಮೇಲಿನ ದಾಳಿಯಿಂದ ದೂರವಿರುವ ನೀತಿಯನ್ನು ಅಳವಡಿಸಿಕೊಂಡಿರುವುದಾಗಿ ಇರಾನ್ ಅಧ್ಯಕ್ಷರು ಹೇಳಿದರು.

ಇರಾನ್ ವಿರುದ್ಧದ ದಾಳಿ ಆ ದೇಶಗಳ ಭೂಭಾಗದಿಂದ ಆರಂಭವಾಗದ ಹೊರತು, ನೆರೆಯ ರಾಷ್ಟ್ರಗಳ ಮೇಲೆ ಇರಾನ್ ಯಾವುದೇ ದಾಳಿ ಅಥವಾ ಕ್ಷಿಪಣಿ ದಾಳಿಯನ್ನು ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಈ ನೀತಿಯನ್ನು ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿಯು ಅನುಮೋದಿಸಿದೆ ಎಂದು ಪೆಜೆಶ್ಕಿಯಾನ್ ಹೇಳಿದರು.

7 ನೇ ದಿನಕ್ಕೆ ಕಾಲಿಟ್ಟ ಇರಾನ್‌- ಇಸ್ರೇಲ್‌ ಯುದ್ಧ; ಅಬುಧಾಬಿ, ದುಬೈನಲ್ಲಿ ಭಾರೀ ಸ್ಫೋಟ

ಈ ನೀತಿಗೆ ಇರಾನ್‌ನ ತಾತ್ಕಾಲಿಕ ನಾಯಕತ್ವ ಮಂಡಳಿ ಅನುಮೋದನೆ ನೀಡಿದೆ ಎಂದು ಹೇಳಿದರು. ನೆರೆಯ ದೇಶಗಳೊಂದಿಗೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಇಸ್ರೇಲ್ ಹಾಗೂ ಅಮೆರಿಕದೊಂದಿಗೆ ಉದ್ವಿಗ್ನತೆ ಮುಂದುವರಿದಿದ್ದರೂ, ಟೆಹರಾನ್‌ಗೆ ನೆರೆಯ ದೇಶಗಳ ವಿರುದ್ಧ ಯಾವುದೇ ದ್ವೇಷವಿಲ್ಲ. ಆ ದೇಶಗಳೊಂದಿಗೆ ಮುಖಾಮುಖಿ ಸಂಘರ್ಷವನ್ನು ಇರಾನ್ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಟೆಹರಾನ್ ಶರಣಾಗುವುದಿಲ್ಲ ಎಂದು ಪೆಜೆಶ್ಕಿಯನ್ ಪ್ರತಿಪಾದಿಸಿದರು. ಇರಾನ್ ಜನರು ಶರಣಾಗಬೇಕು ಎಂಬ ಆಸೆಯನ್ನು ಶತ್ರುಗಳು ತಮ್ಮ ಸಮಾಧಿಯವರೆಗೂ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು. ಅಮೆರಿಕಾ ಹಾಗ ಇಸ್ರೇಲ್ ಜೊತೆಗೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ, ಇರಾನ್ ತನ್ನ ನಿಲುವನ್ನು ಬದಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇರಾನ್ ಶಾಲೆಯ 160 ಬಾಲಕಿಯರ ಸಾವಿಗೆ ಅಮೆರಿಕವೇ ಕಾರಣ? ವಿಶ್ವದ ದೊಡ್ಡಣ್ಣ ಈ ಬಗ್ಗೆ ಹೇಳಿದ್ದೇನು?

ಕಳೆದ ಒಂದು ವಾರದಿಂದ ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಕ್ಷಿಪಣಿಗಳನ್ನು ಹಾರಿಸುತ್ತಿದೆ. ದುಬೈ, ಅಬುಧಾಬಿ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಹಲವಾರು ಗಲ್ಫ್ ದೇಶಗಳ ಮೇಲೆ ದಾಳಿ ನಡೆಸಲಾಗಿದ್ದು, ವ್ಯಾಪಕ ಹಾನಿಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಪರಮಾಣು ಮಾತುಕತೆಗಳ ಸ್ಥಗಿತ ಮತ್ತು ಟೆಹರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂಬ ಆರೋಪಗಳ ನಂತರ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್‌ನಾದ್ಯಂತ ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿದವು. ಆಪರೇಷನ್ ಎಪಿಕ್ ಫ್ಯೂರಿ ಎಂದು ಹೆಸರಿಡಲ್ಪಟ್ಟ ಈ ಕಾರ್ಯಾಚರಣೆಯು ಇರಾನ್ ರಾಜಧಾನಿ ಟೆಹರಾನ್ ಸೇರಿದಂತೆ ಅನೇಕ ಇರಾನಿನ ನಗರಗಳನ್ನು ಗುರಿಯಾಗಿಸಿಕೊಂಡಿತು.

ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾದರು. ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಸಹ ದಾಳಿಯಲ್ಲಿ ಮೃತಪಟ್ಟರು.