ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್ ಶಾಲೆಯ 160 ಬಾಲಕಿಯರ ಸಾವಿಗೆ ಅಮೆರಿಕವೇ ಕಾರಣ? ವಿಶ್ವದ ದೊಡ್ಡಣ್ಣ ಈ ಬಗ್ಗೆ ಹೇಳಿದ್ದೇನು?

ಇರಾನ್ ಬಾಲಕಿಯರ ವಸತಿ ಶಾಲೆ ಮೇಲೆ ನಡೆದ ದಾಳಿಗೆ ಅಮೆರಿಕ ಕಾರಣವಾಗಿರಬಹುದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ. ಈ ದಾಳಿಯಲ್ಲಿ ವಸತಿ ಶಾಲೆಯ 160 ಬಾಲಕಿಯರು ಸಾವನ್ನಪ್ಪಿದ್ದರು. ಈ ಕುರಿತು ಅಮೆರಿಕದ ಮಿಲಿಟರಿ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇನ್ನು ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

160 ಇರಾನ್ ಬಾಲಕಿಯರ ಸಾವಿಗೆ ಅಮೆರಿಕ ಕಾರಣ

ಸಂಗ್ರಹ ಚಿತ್ರ -

ವಾಷಿಂಗ್ಟನ್: ಇಸ್ರೇಲ್ ಜೊತೆ ಸೇರಿ ಯುಎಸ್ ಸೇನಾ ಪಡೆಯು ಮೊದಲ ದಿನ ಇರಾನ್ ಮೇಲೆ ನಡೆಸಿದ ದಾಳಿಯಿಂದ (U.S. and Israeli attacks) 160 ಬಾಲಕಿಯರು ಸಾವನ್ನಪ್ಪಿದ್ದರು. ಈ ಘಟನೆಯ ಬಗ್ಗೆ ಅಮೆರಿಕ ಸೇನೆ ತನಿಖೆ ನಡೆಸುತ್ತಿದೆ. ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯ (Minab girls school) ಮೇಲೆ ನಡೆದ ದಾಳಿಗೆ ಅಮೆರಿಕ ಪಡೆಗಳೇ ಕಾರಣವಾಗಿರಬಹುದು ಎಂದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (U.S. Defense Secretary Pete Hegseth ) ಬುಧವಾರ ತಿಳಿಸಿದ್ದಾರೆ. ಆದರೆ ಈ ಕುರಿತು ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.

ಇರಾನ್‌ನ ಬಾಲಕಿಯರ ವಸತಿ ಶಾಲೆಯ ಮೇಲೆ ನಡೆದ ದಾಳಿಗೆ ಅಮೆರಿಕ ಪಡೆಗಳೇ ಕಾರಣವಾಗಿರಬಹುದು ಎಂಬುದಾಗಿ ಅಮೆರಿಕದ ಮಿಲಿಟರಿ ತನಿಖಾಧಿಕಾರಿಗಳು ನಂಬಿದ್ದಾರೆ. ಇದಕ್ಕೆ ಸಂಬಂಧಿಸಿ ಏನು ಪುರಾವೆ ಇದೆ, ಯಾವ ಮದ್ದುಗುಂಡುಗಳನ್ನು ಬಳಸಲಾಗಿದೆ, ಯಾರು ಜವಾಬ್ದಾರರು, ಶಾಲೆ ಮೇಲೆ ಏಕೆ ದಾಳಿ ನಡೆಸಲಾಯಿತು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯಬೇಕಿದೆ. ಇದರ ಬಗ್ಗೆ ಅಮೆರಿಕ ಸೇನೆ ತನಿಖೆ ನಡೆಸುತ್ತಿದೆ ಎಂದು ಪೀಟ್ ಹೆಗ್ಸೆತ್ ಹೇಳಿದರು.

ನೂರಾರು ಕನಸು ಹೊತ್ತು ಲೆಬನಾನ್‍ಗೆ ತೆರಳಿದ ಮುಂಬೈ ಮೂಲದ ಯುವಕ ಯುದ್ಧದ ಚಕ್ರವ್ಯೂಹದಲ್ಲಿ ಬಂಧಿ; ಹೊರ ಬರುವ ದಾರಿ ಕಾಣದೆ ವಿಲವಿಲ

ಸೂಕ್ಷ್ಮ ಮಿಲಿಟರಿ ವಿಷಯಗಳ ಕುರಿತು ಮಾತನಾಡಿದ ಅವರು, ಈ ದಾಳಿಗೆ ಸಂಬಂಧಿಸಿ ಹೊಸ ಪುರಾವೆಗಳು ಲಭ್ಯವಾಗುವ ಸಾಧ್ಯತೆ ಇದೆ. ಇದರ ತನಿಖೆ ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಜಂಟಿಯಾಗಿ ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಮೊದಲ ದಿನ ದಾಳಿ ನಡೆಸಿತ್ತು. ಇದಕ್ಕೆ ಸಂಬಂಧಿಸಿ ಜಿನೀವಾದಲ್ಲಿರುವ ವಿಶ್ವಸಂಸ್ಥೆಯಲ್ಲಿ ಇರಾನ್‌ನ ರಾಯಭಾರಿ ಅಲಿ ಬಹ್ರೇನಿ ಮಾಹಿತಿ ನೀಡಿ ಈ ದಾಳಿಯಲ್ಲಿ 150 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಇದರ ತನಿಖೆಗೆ ಸಂಬಂಧಿಸಿ ಶ್ವೇತಭವನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಇದಕ್ಕೆ ಸಂಬಂಧಿಸಿ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಇರಾನ್ ಆಡಳಿತವು ನಾಗರಿಕರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅಲ್ಲ ಎಂದು ಹೇಳಿದರು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಕೂಡ ಅಮೆರಿಕವು ಉದ್ದೇಶಪೂರ್ವಕವಾಗಿ ಶಾಲೆಯನ್ನು ಗುರಿಯಾಗಿಸಿಕೊಳ್ಳುವುದಿಲ್ಲ. ಅದು ನಮ್ಮ ದಾಳಿಯಾಗಿದ್ದರೆ ಯುದ್ಧ ಇಲಾಖೆಯು ಅದನ್ನು ತನಿಖೆ ಮಾಡುತ್ತದೆ ಎಂದು ತಿಳಿಸಿದರು.

ಇರಾನ್ ನ ವಸತಿ ಶಾಲೆಯ ಮೇಲೆ ನಡೆದಿರುವ ದಾಳಿಗೆ ಯಾರು ಕಾರಣ ಎಂಬುದರ ತನಿಖೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮಂಗಳವಾರ ಆದೇಶಿಸಿದೆ. ದಾಳಿ ನಡೆಸಿದ ಪಡೆಗಳ ಮೇಲೆ ತನಿಖೆ ನಡೆಸುವ ಜವಾಬ್ದಾರಿ ಇದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವಕ್ತಾರೆ ರವಿನಾ ಶಮ್‌ದಾಸನಿ ಜಿನೀವಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

30ಕ್ಕೂ ಹೆಚ್ಚು ಇರಾನ್‌ ಹಡಗುಗಳನ್ನು ನಾಶಪಡಿಸಿದ್ದೇವೆ ಎಂದ ಅಮೆರಿಕ

ಬಾಲಕಿಯರ ಅಂತ್ಯಕ್ರಿಯೆಯ ಚಿತ್ರಗಳನ್ನು ಮಂಗಳವಾರ ಇರಾನಿನ ರಾಜ್ಯ ದೂರದರ್ಶನದಲ್ಲಿ ತೋರಿಸಲಾಗಿದ್ದು, ಉದ್ದೇಶಪೂರ್ವಕವಾಗಿ ಶಾಲೆ ಅಥವಾ ಆಸ್ಪತ್ರೆ ಮೇಲೆ ದಾಳಿ ಮಾಡುವುದು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಯುದ್ಧ ಅಪರಾಧವಾಗಲಿದೆ ಎಂದು ಅವರು ಹೇಳಿದ್ದಾರೆ.