Israel-Iran Conflict: ಇರಾನ್ ಕ್ಷಿಪಣಿಗಳ ದಾಳಿಗೆ ಇಸ್ರೇಲ್ ಐರನ್ ಡೋಮ್ ಶಕ್ತಿ ಕುಂದಿತಾ? ಅಖಾಡಕ್ಕೆ ರಷ್ಯಾ- ಅಮೆರಿಕ ಎಂಟ್ರಿ!
ಇರಾನ್ ಹಾಗೂ ಇಸ್ರೇಲ್ ನಡುವಿನ ಕದನ ತಾರಕ್ಕೇರಿದೆ. ಉಭಯ ದೇಶಗಳು ಕ್ಷಿಪಣಿಗಳ ಮಳೆಯನ್ನೇ ಸುರಿಸುತ್ತಿವೆ. ಇಸ್ರೇಲ್ನ (Israel-Iran Conflict) ಐರನ್ ಡೋಮ್ (Iron Dome) ವಿಶ್ವದ ಅತ್ಯಂತ ಪ್ರಭಾವಶಾಲಿ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದೀಗ ಈ ಡೋಮ್ಗಳ ಶಕ್ತಿ ಕುಂದುತ್ತಿವೆ ಎಂಬ ವರದಿ ಹೊರಬಿದ್ದಿದೆ.


ಟೆಲ್ ಅವೀವ್: ಇರಾನ್ ಹಾಗೂ ಇಸ್ರೇಲ್ ನಡುವಿನ ಕದನ ತಾರಕ್ಕೇರಿದೆ. ಉಭಯ ದೇಶಗಳು ಕ್ಷಿಪಣಿಗಳ ಮಳೆಯನ್ನೇ ಸುರಿಸುತ್ತಿವೆ. ಇಸ್ರೇಲ್ನ (Israel-Iran Conflict) ಐರನ್ ಡೋಮ್ (Iron Dome) ವಿಶ್ವದ ಅತ್ಯಂತ ಪ್ರಭಾವಶಾಲಿ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದೀಗ ಈ ಡೋಮ್ಗಳ ಶಕ್ತಿ ಕುಂದುತ್ತಿವೆ ಎಂಬ ವರದಿ ಹೊರಬಿದ್ದಿದೆ. ಅಲ್ ಜಜೀರಾ ವರದಿಯ ಪ್ರಕಾರ, ಇತ್ತೀಚೆಗೆ ಇರಾನ್ ಹೈಫಾ ಮತ್ತು ಟೆಲ್ ಅವೀವ್ನಲ್ಲಿರುವ ಸೇನಾ ನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್ಗಳ ಮೂಲಕ ದಾಳಿ ಮಾಡಿತು. ಇದು ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಗಳ ಬಲವನ್ನು ಕೊಂಚ ಮಟ್ಟಿಗೆ ತಗ್ಗಿಸಿದೆ ಎಂದು ಹೇಳಲಾಗಿದೆ.
ಇರಾನ್ ಕ್ಷಿಪಣಿಗಳ ಮೂಲಕ ದಾಳಿಯನ್ನು ನಡೆಸಿದೆ. ಇಸ್ರೇಲ್ನ ದೊಡ್ಡ ಆಸ್ಪತ್ರೆಯ ಮೇಲೆ ಕ್ಷಿಪಣಿಗಳು ಬಿದ್ದಿದ್ದವು. ಕ್ಷಿಪಣಿಗಳು ಬೀಳುವ ವಿಡಿಯೋ ವೈರಲ್ ಆಗಿತ್ತು. ಇದೀಗ ಇರಾನ್ನ ಪ್ರಬಲ ಐರನ್ ಡೋಮ್ನ ಕಾರ್ಯ ಕ್ಷಮತೆಯ ಕುರಿತು ಪ್ರಶ್ನೆಗಳು ಎದ್ದಿವೆ. ಇಸ್ರೇಲ್ ರಕ್ಷಣಾ ಮತ್ತು ಭದ್ರತಾ ವೇದಿಕೆಯ ಅಧ್ಯಕ್ಷ ನಿವೃತ್ತ ಬ್ರಿಗೇಡಿಯರ್ ಜನರಲ್ ಅಮೀರ್ ಅವಿವಿ, ಎನ್ಡಿಟಿವಿ ಜೊತೆ ಮಾತನಾಡುತ್ತಾ, ಐರನ್ ಡೋಮ್ ಒತ್ತಡದಲ್ಲಿದ್ದರೂ, ಅದು ಹೆಚ್ಚಾಗಿ ಅಖಂಡವಾಗಿದೆ ಎಂದು ಹೇಳಿದರು. ಕೇವಲ ಐರನ್ ಡೋಮ್ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ, ಬ್ಯಾಲಿಸ್ಟಿಕ್ ಕ್ಷಿಪಣಿಗಳು - ವಿಶೇಷವಾಗಿ ದೀರ್ಘ-ಶ್ರೇಣಿಯವುಗಳು - ಹೆಚ್ಚಾಗಿ ಆರೋ -3 ನಿಂದ ಪ್ರತಿಬಂಧಿಸಲ್ಪಡುತ್ತವೆ. ಇದು 90 ಪ್ರತಿಶತಕ್ಕಿಂತ ಹೆಚ್ಚು ಯಶಸ್ಸನ್ನು ಹೊಂದಿದೆ ಎಂದು ಇಸ್ರೇಲ್ನ ಬಾಹ್ಯಾಕಾಶ ಆಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಆದರೆ, ಯಾವುದೇ ವ್ಯವಸ್ಥೆಯು ಫೂಲ್ಪ್ರೂಫ್ ಅಲ್ಲ ಎಂದು ಹೇಳಿದ ಅವರು. "100% ತಲುಪುವುದು ಕಷ್ಟ". ಕ್ಷಿಪಣಿ ಮುರಿದಾಗ ಇಸ್ರೇಲ್ನ ಪದರಗಳ ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಳ್ಳುತ್ತವೆ. ಅಂತಹ ಸಂದರ್ಭಗಳಲ್ಲಿ ಬಂಕರ್ಗಳನ್ನು ಬಳಸಬೇಕು ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Israel-Iran Conflict: ಕ್ಷಿಪಣಿಗಳ ಮಳೆಯನ್ನೇ ಸುರಿಸಿದ ಇಸ್ರೇಲ್; ಇರಾನ್ನ ನತಾಂಜ್ ಭೂಗತ ಪರಮಾಣು ಕೇಂದ್ರಕ್ಕೆ ಹಾನಿ
ರಷ್ಯಾ ಬೆಂಬಲ
ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಶುಕ್ರವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವಲ್ಲೇ ಇರಾನ್'ಗೆ ರಷ್ಯಾ ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೆ, ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಅಮೆರಿಕಾಕ್ಕೆ ಎಚ್ಚರಿಕೆಯನ್ನೂ ನೀಡಿದೆ. ಇಸ್ರೇಲ್-ಇರಾನ್ ಸಮರಕ್ಕೆ ಅಮೆರಿಕಾ ಪ್ರವೇಶ ಖಚಿತವಾಗಿರುವ ಹಿನ್ನೆಲೆಯಲ್ಲಿ ರಷ್ಯಾ ಕೂಡ ಇದೀಗ ಎಂಟ್ರಿ ಕೊಡ್ಡಿದ್ದು, ಈ ಬೆಳವಣಿಗೆ ಮತ್ತೊಂದು ಸುತ್ತಿನ ಶೀತಲ ಸಮರಕ್ಕೆ ನಾಂದಿ ಹಾಡುವ ಆತಂತಕಕ್ಕೆ ಕಾರಣವಾಗಿದೆ. ರಷ್ಯಾ ವಿದೇಶಾಂಗ ಇಲಾಖೆ ವಕ್ತಾರೆ ಮಾರಿಯಾ ಜಖರೋವಾ ಅವರ ಅವರ ಮಾತನಾಡಿ, ಇಸ್ರೇಲ್ ಪರವಾಗಿ ನೇರವಾಗಿ ಧುಮಕದಂತೆ ಅಮೆರಿಕಾಕಕ್ಕೆ ಎಚ್ಚರಿಕೆ ನೀಡಿದ್ದಾರೆ.