ಪಶ್ಚಿಮ ಏಷ್ಯಾ ಸಮರ; ಇಸ್ರೇಲ್ ವೈಮಾನಿಕ ದಾಳಿಗೆ ಇರಾನ್ ಉನ್ನತ ಅಧಿಕಾರಿ ಅಲಿ ಲಾರಿಜಾನಿ ಬಲಿ
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ತೀವ್ರತೆ ಹೆಚ್ಚುತ್ತಿರುವ ನಡುವೆಯೇ, ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪ್ರಮುಖ ನಾಯಕ ಅಲಿ ಲಾರಿಜಾನಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಇದನ್ನು ಇರಾನ್ ಸರ್ಕಾರ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಈ ಬೆಳವಣಿಗೆ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನುಂಟುಮಾಡಿದೆ.
ಅಲಿ ಲಾರಿಜಾನಿ -
ಟೆಹ್ರಾನ್: ಪಶ್ಚಿಮ ಏಷ್ಯಾ (West Asia)ದಲ್ಲಿ ಯುದ್ಧದ (War) ಭೀಕರತೆ ಮುಂದುವರಿದಿದ್ದು, ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ(secretary of Iran’s National Security Council) ಅಲಿ ಲಾರಿಜಾನಿ (Larijani) ಅವರು ರಾತ್ರೋರಾತ್ರಿ ನಡೆದ ವೈಮಾನಿಕ ದಾಳಿ (Air Strike)ಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲ್ (Israel) ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ (Katz) ಹೇಳಿದ್ದಾರೆ. ಆದರೆ, ಈ ಸುದ್ದಿಯ ಬಗ್ಗೆ ಇರಾನ್ (Iran) ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ಹೊರಬಂದಿಲ್ಲ.ಪಶ್ಚಿಮ ಏಷ್ಯಾ (West Asia)ದಲ್ಲಿ ಯುದ್ಧ (War)ದ ಭೀಕರತೆ ಮುಂದುವರಿದಿದ್ದು, ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ(secretary of Iran’s National Security Council) ಅಲಿ ಲಾರಿಜಾನಿ (Larijani ಅವರು ರಾತ್ರೋರಾತ್ರಿ ನಡೆದ ವೈಮಾನಿಕ ದಾಳಿ (Air Strike)ಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲ್ (Israel) ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ (Katz) ಹೇಳಿದ್ದಾರೆ. ಆದರೆ, ಈ ಸುದ್ದಿಯ ಬಗ್ಗೆ ಇರಾನ್ (Iran) ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ಹೊರಬಂದಿಲ್ಲ.
ಯಾರು ಈ ಅಲಿ ಲಾರಿಜಾನಿ?
ಅಲಿ ಲಾರಿಜಾನಿ ಇರಾನ್ ರಾಜಕೀಯದ ಅನುಭವಿ ನಾಯಕ ಮತ್ತು ಸುಪ್ರೀಂ ಲೀಡರ್ ಅಲಿ ಖಮೇನಿಯವರ ಆಪ್ತ ಒಡನಾಡಿಯಾಗಿದ್ದರು. ಈ ಹಿಂದೆ ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದ ಅವರು, ಪ್ರಸ್ತುತ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ (SNSC) ಕಾರ್ಯದರ್ಶಿಯಾಗಿದ್ದರು. ಇರಾನ್‌ನ ರಕ್ಷಣೆ ಮತ್ತು ಪರಮಾಣು ನೀತಿಗಳನ್ನು ರೂಪಿಸುವಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಇರಾನ್‌ನ ಪ್ರಭಾವಿ ಕ್ಲೆರಿಕಲ್ ಕುಟುಂಬಕ್ಕೆ ಸೇರಿದ ಲಾರಿಜಾನಿ, ಅಮೆರಿಕದೊಂದಿಗಿನ ಪರಮಾಣು ಮಾತುಕತೆ ಹಾಗೂ ರಷ್ಯಾ ಮತ್ತು ಚೀನಾದೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿದ್ದರು. ಕಳೆದ ತಿಂಗಳು ಸಹ ಇವರು ಅಮೆರಿಕದೊಂದಿಗೆ ಪರೋಕ್ಷ ಮಾತುಕತೆಗಾಗಿ ಓಮನ್‌ಗೆ ಭೇಟಿ ನೀಡಿದ್ದರು.
ಇರಾನ್-ಇಸ್ರೇಲ್ ಯುದ್ಧ: ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ
ಯುದ್ಧದ ಪ್ರಸ್ತುತ ಸ್ಥಿತಿ
ಇರಾನ್ ವಿರುದ್ಧದ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆಯು 18ನೇ ದಿನಕ್ಕೆ ಕಾಲಿಟ್ಟಿದೆ. 'ಆಪರೇಷನ್ ಎಪಿಕ್ ಫ್ಯೂರಿ' (Epic Fury) ಮತ್ತು 'ರೋರಿಂಗ್ ಲಯನ್' (Roaring Lion) ಎಂಬ ಹೆಸರಿನ ಈ ಕಾರ್ಯಾಚರಣೆಗಳ ಅಡಿಯಲ್ಲಿ ಈಗಾಗಲೇ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಹಲವು ಹಿರಿಯ ಐಆರ್‌ಜಿಸಿ (IRGC) ಕಮಾಂಡರ್‌ಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಲಾರಿಜಾನಿ ಅವರ ಸಾವು ಇರಾನ್ ಆಡಳಿತಕ್ಕೆ ದೊಡ್ಡ ಹೊಡೆತವೆಂದು ಪರಿಗಣಿಸಲಾಗುತ್ತಿದೆ. ಈ ದಾಳಿಗಳು ಇರಾನ್‌ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸಲು ನಡೆಸುತ್ತಿರುವ ಯೋಜಿತ ಕೃತ್ಯದ ಭಾಗವೆಂದು ಇಸ್ರೇಲ್ ತಿಳಿಸಿದೆ. ಸದ್ಯ ಈ ಬೆಳವಣಿಗೆಯಿಂದಾಗಿ ಇಡೀ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.