ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಮಾಸ್ ಮಿಲಿಟರಿ ಗುಪ್ತಚರ ಕಾರ್ಯಾಚರಣೆ ಮುಖ್ಯಸ್ಥನನ್ನು ಹತ್ಯೆಗೈದ ಇಸ್ರೇಲ್

Israel assassinates Shambari: ಹಮಾಸ್ ಮಿಲಿಟರಿ ಗುಪ್ತಚರ ಕಾರ್ಯಾಚರಣೆ ಮುಖ್ಯಸ್ಥ ಇಯಾದ್ ಅಹ್ಮದ್ ಅಬ್ದುಲ್-ರಹಮಾನ್ ಶಂಬರಿಯನ್ನು ಇಸ್ರೇಲ್ ಹತ್ಯೆ ಮಾಡಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಪ್ರಮುಖ ಸಂಚುಕೋರ ಶಂಬರಿ. ಇದಕ್ಕೆ ಪ್ರತೀಕಾರವಾಗಿ ಶಂಬರಿಯನ್ನು ಇದೀಗ ಇಸ್ರೇಲ್ ಹತ್ಯೆಗೈದಿದೆ.

ಸಾಂದರ್ಭಿಕ ಚಿತ್ರ

ಜೆರುಸಲೆಂ, ಏ. 29: ಹಮಾಸ್ ಮಿಲಿಟರಿ ಗುಪ್ತಚರ ಕಾರ್ಯಾಚರಣೆ ಮುಖ್ಯಸ್ಥ ಇಯಾದ್ ಅಹ್ಮದ್ ಅಬ್ದುಲ್-ರಹಮಾನ್ ಶಂಬರಿಯನ್ನು ಇಸ್ರೇಲ್ (Israel) ಹತ್ಯೆ ಮಾಡಿದೆ. ಶಂಬರಿ ಪ್ಯಾಲೆಸ್ತೀನ್‌ ಸಶಸ್ತ್ರ ಉಗ್ರಗಾಮಿ ಗುಂಪು ಹಮಾಸ್‌ನ ಮಿಲಿಟರಿ ಗುಪ್ತಚರ ವಿಭಾಗದ ಮುಖ್ಯಸ್ಥನಾಗಿದ್ದ ಎಂದು ಇಸ್ರೇಲ್‌ ರಕ್ಷಣಾ ಪಡೆಗಳು (IDF) ತಿಳಿಸಿವೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಪ್ರಮುಖ ಸಂಚುಕೋರ ಈ ಅಲ್-ರೆಹಮಾನ್ ಶಂಬರಿ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಭೂ ಕಾರ್ಯಾಚರಣೆಯಲ್ಲಿ ಸಾವಿರಾರು ಹಮಾಸ್ ಭಯೋತ್ಪಾದಕರು ಮತ್ತು ನಾಗರಿಕರು ಮೃತಪಟ್ಟ ನಂತರ ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಾರಣವಾಯಿತು.

2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯ ನಂತರ ಪ್ರಾರಂಭವಾದ ಗಾಜಾ ಯುದ್ಧ ಸದ್ಯ ಕದನ ವಿರಾಮದಿಂದಾಗಿ ನಿಂತಿದೆ. ಆದರೆ ಹಿಂಸಾಚಾರ ಮುಂದುವರಿದಿದ್ದು, ಯುದ್ಧ ವಿರಾಮ ಪ್ರಾರಂಭವಾದಾಗಿನಿಂದ ಕನಿಷ್ಠ 818 ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್ ಜತೆಗಿನ ರಕ್ಷಣಾ ಒಪ್ಪಂದ ಸ್ಥಗಿತಗೊಳಿಸಿದ ಇಟಲಿ

ಈ ಮಧ್ಯೆ ಗಾಜಾ ನಗರದ ಪಶ್ಚಿಮ ಅಲ್-ರಿಮಲ್ ಬಳಿ ಡ್ರೋನ್ ಕಾರಿನ ಮೇಲೆ ಎರಡು ಕ್ಷಿಪಣಿಗಳನ್ನು ಹಾರಿಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ. ಮೃತಪಟ್ಟ ಇಬ್ಬರು ಹಮಾಸ್ ಕಮಾಂಡರ್ ಇಯಾದ್ ಅಲ್-ಶನ್ಬರಿ ಮತ್ತು ಆತನ ಮಗ ಸಲಾಹ್ ಎಂದು ಗುರುತಿಸಲಾಗಿದೆ ಎಂದು ಗಾಜಾದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 10ರಂದು ಕದನ ವಿರಾಮ ಜಾರಿಗೆ ಬಂದಿದ್ದರೂ, ಇಸ್ರೇಲಿ ಸೇನೆ ಮತ್ತು ಹಮಾಸ್ ಎರಡೂ ಪರಸ್ಪರ ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಆರೋಪಿಸಿವೆ.

ಇಸ್ರೇಲ್ ಜತೆ ಕದನ ವಿರಾಮಕ್ಕೆ ಮುಂದಾದ ಲೆಬನಾನ್

ಲೆಬನಾನ್, ಇಸ್ರೇಲ್ ಜತೆ ನೇರ ಮಾತುಕತೆಗಳ ಮೂಲಕ ಯುದ್ಧ ವಿರಾಮ ಒಪ್ಪಂದವನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವ ಯೂಸೆಫ್ ರಾಜ್ಜಿ ತಿಳಿಸಿದ್ದಾರೆ. ಇದು ಇರಾನ್‌ಗೆ ಸಂಬಂಧಿಸಿದ ಪ್ರಾದೇಶಿಕ ರಾಜಕೀಯದಿಂದ ವಿಭಿನ್ನವಾದ ಸ್ವತಂತ್ರ ರಾಜತಾಂತ್ರಿಕ ದಾರಿಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ವರದಿಯಾಗಿದೆ.

ಯೂಸೆಫ್ ರಾಜ್ಜಿ, ಇಸ್ರೇಲ್ ಜತೆ ನೇರ ಸಂಪರ್ಕ ಹೊಂದಿರುವುದು ಪ್ರತ್ಯೇಕ ಲೆಬನಾನ್ ಅನ್ನು ಪರಿಣಾಮಕಾರಿಯಾಗಿ ರೂಪಿಸಿದೆ ಎಂದು ಹೇಳಿದ್ದಾರೆ. ಇದರಿಂದ ಇರಾನ್‌ಗೆ ಸಂಬಂಧಿಸಿದ ವಿಶಾಲ ಪ್ರಾದೇಶಿಕ ಬೆಳವಣಿಗೆಗಳಿಂದ ತನ್ನ ಮಾತುಕತೆಗಳನ್ನು ಪ್ರತ್ಯೇಕಿಸಲು ಬೈರೂತ್ ಉದ್ದೇಶ ಹೊಂದಿದೆ ಎಂಬುದನ್ನು ಅವರು ಒತ್ತಿಹೇಳಿದರು.