'ದುಷ್ಟ ಕ್ಯಾನ್ಸರ್ ಇಸ್ರೇಲ್' ಎಂದ ಪಾಕಿಸ್ತಾನಿ ರಕ್ಷಣಾ ಸಚಿವನಿಗೆ ಇಸ್ರೇಲ್ ತಿರುಗೇಟು
ಇಸ್ರೇಲ್ ಅನ್ನು ದುಷ್ಟ ಕ್ಯಾನ್ಸರ್ ಎಂದು ಕರೆದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರುಗೇಟು ನೀಡಿದ್ದಾರೆ. ಇಸ್ರೇಲ್ ಅನ್ನು ನಿರ್ಮೂಲನೆ ಮಾಡುವ ಅವರ ಹೇಳಿಕೆ ಅತಿರೇಕದ್ದಾಗಿದೆ. ಇದು ಯಾವುದೇ ಸರ್ಕಾರ ಸಹಿಸಬಹುದಾದ ಹೇಳಿಕೆಯಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (ಸಂಗ್ರಹ ಚಿತ್ರ) -
ಇಸ್ರೇಲ್: ಇರಾನ್ (Iran), ಇಸ್ರೇಲ್ (Israel), ಯುಎಸ್ (US) ಕದನದಲ್ಲಿ (iran war) ಶಾಂತಿ ಧೂತನಾಗಿರುವ ಪಾಕಿಸ್ತಾನದ (pakistan) ವಿರುದ್ಧ ಈಗ ಇಸ್ರೇಲ್ ಹರಿಹಾಯ್ದಿದೆ. ಪಾಕಿಸ್ತಾನ ರಕ್ಷಣಾ ಸಚಿವನ (Pakistani Defence Minister) ಹೇಳಿಕೆಗೆ ಅದು ಕೆಂಡಾಮಂಡಲವಾಗಿದೆ. ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಇಸ್ರೇಲ್ ವಿರುದ್ಧ ನೀಡಿರುವ ಹೇಳಿಕೆಗೆ ಇಸ್ರೇಲ್ ಪ್ರಧಾನಿ (Israel PM Benjamin Netanyahu) ಕಚೇರಿಯು ತಿರುಗೇಟು ನೀಡಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khwaja Asif) ಅವರು ಇಸ್ರೇಲ್ ಅನ್ನು 'ದುಷ್ಟ, ಕ್ಯಾನ್ಸರ್' ಎಂದು ಕರೆದಿದ್ದು, ಇದು ಇಸ್ರೇಲ್ ಅನ್ನು ಕೆರಳಿಸಿದೆ.
ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕೆ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಪಾಕಿಸ್ತಾನಿ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಅಮೆರಿಕ ಅಧಿಕಾರಿಗಳೊಂದಿಗೆ ಮಾತನಾಡಲು ಇಸ್ಲಾಮಾಬಾದ್‌ಗೆ ನಿಯೋಗ; ಇರಾನ್ ಹೇಳಿದ್ದೇನು?
ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಪಾಕಿಸ್ತಾನಿ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, ಲೆಬನಾನ್‌ನಲ್ಲಿ ಜೆರುಸಲೆಮ್ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿದರು. ಯುರೋಪಿಯನ್ ಯಹೂದಿಗಳನ್ನು ತೊಡೆದು ಹಾಕಲು ಇಸ್ರೇಲ್ "ದುಷ್ಟ ಕ್ಯಾನ್ಸರ್ ಮತ್ತು ಮಾನವೀಯತೆಗೆ ಶಾಪ" ಎಂದು ಹೇಳಿದ್ದಾರೆ.
ಮೊದಲು ಗಾಜಾ, ಅನಂತರ ಇರಾನ್ ಮತ್ತು ಈಗ ಲೆಬನಾನ್‌ನಲ್ಲಿ ಮುಗ್ಧ ನಾಗರಿಕರನ್ನು ಇಸ್ರೇಲ್ ಕೊಲ್ಲುತ್ತಿದ್ದು, ಅವರಿಂದ ರಕ್ತಪಾತ ನಿರಂತರವಾಗಿ ಮುಂದುವರೆದಿದೆ. ಪ್ಯಾಲೆಸ್ಟೀನಿಯನ್ ಭೂಮಿಯಲ್ಲಿ ಈ ಕ್ಯಾನ್ಸರ್ ರಾಷ್ಟ್ರವನ್ನು ನರಕದಲ್ಲಿ ಸುಡುತ್ತಿರುವ ಯುರೋಪಿಯನ್ ಯಹೂದಿಗಳನ್ನು ತೊಡೆದುಹಾಕಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು, ಇಸ್ರೇಲ್‌ನ ವಿನಾಶಕ್ಕೆ ಕರೆ ನೀಡುವುದು ಅತಿರೇಕದ ಹೇಳಿಕೆಯಾಗಿದೆ. ಇದು ಯಾವುದೇ ಸರ್ಕಾರ ಸಹಿಸಬಹುದಾದ ಹೇಳಿಕೆಯಲ್ಲ. ವಿಶೇಷವಾಗಿ ಶಾಂತಿ ಸ್ಥಾಪನೆಗಾಗಿ ತಟಸ್ಥ ಮಧ್ಯಸ್ಥಗಾರನಾಗಿರಬೇಕಿದ್ದ ಪಾಕಿಸ್ತಾನದಿಂದ ಇಂತಹ ಹೇಳಿಕೆ ಸರಿಯಲ್ಲ ಎಂದು ತಿಳಿಸಿದೆ.
The Prime Minister's Office:
— Prime Minister of Israel (@IsraeliPM) April 9, 2026
Pakistan Defence Minister’s call for Israel’s annihilation is outrageous. This is not a statement that can be tolerated from any government, especially not from one that claims to be a neutral arbiter for peace.
ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಕೂಡ ಆಸಿಫ್ ಅವರ ಹೇಳಿಕೆಯನ್ನು ಟೀಕಿಸಿದ್ದು, ಯಹೂದಿ ವಿರೋಧಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಬಯಸುತ್ತದೆ. ಇದು ಸೂಕ್ತ ಹೇಳಿಕೆಯಲ್ಲ. ಇಸ್ರೇಲ್ ಅನ್ನು ಕ್ಯಾನ್ಸರ್ ಎಂದು ಬಣ್ಣಿಸುವುದು ಮೂಲಭೂತವಾಗಿ ಅದರ ನಾಶಕ್ಕೆ ಕರೆ ನೀಡಿದಂತೆಯೇ. ಇಸ್ರೇಲ್ ಅನ್ನು ನಾಶಮಾಡಲು ಬೆದರಿಕೆ ಹಾಕುವ ಗುಂಪುಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಇಸ್ರೇಲ್ ಮುಂದುವರಿಸುತ್ತದೆ ಎಂದರು.
ಪಾಕಿಸ್ತಾನ ಮತ್ತು ಇಸ್ರೇಲ್ ನಡುವಿನ ವಾಗ್ವಾದದ ನಡುವೆ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಇಸ್ಲಾಮಾಬಾದ್ ನಲ್ಲಿ ಶಾಂತಿ ಮಾತುಕತೆಗೆ ಸಿದ್ಧತೆ ನಡೆಸಲಾಗುತ್ತಿದೆ. ಅಮೆರಿಕ ಮತ್ತು ಇರಾನ್‌ನ ನಿಯೋಗಗಳು ಶುಕ್ರವಾರ, ಶನಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಅಮೆರಿಕ ನಿಯೋಗವನ್ನು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮುನ್ನಡೆಸಲಿದ್ದು, ಇದರಲ್ಲಿ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾರ ಜೇರೆಡ್ ಕುಶ್ನರ್, ಶ್ವೇತಭವನ ಮತ್ತು ಪೆಂಟಗನ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇರಾನ್ ನಿಯೋಗವನ್ನು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಮುನ್ನಡೆಸಲಿದ್ದು, ಇದರಲ್ಲಿ ಇರಾನ್‌ನ ರಾಯಭಾರಿ ಡಾ. ರೆಜಾ ಅಮಿರಿ ಮೊಘದಮ್, ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ.