ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ಇರಾನ್‌ ಮೇಲೆ ಮುಂದುವರಿದ ಇಸ್ರೇಲ್ ದಾಳಿ, ಖಮೇನಿಯೇ ಟಾರ್ಗೆಟ್‌

ಇಸ್ರೇಲ್​ ಭದ್ರತಾ ಪಡೆಗಳ ಎರಡನೇ ಸುತ್ತಿನ ದಾಳಿಯ ಕಾರಣದಿಂದ ಟೆಹ್ರಾನ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ನಿವಾಸ ಮತ್ತು ಅಧ್ಯಕ್ಷೀಯ ಕಚೇರಿಯನ್ನು ಹೊಂದಿರುವ ಹೈ-ಸೆಕ್ಯುರಿಟಿ ವಲಯವಾದ ಪಾಶ್ಚರ್ ಸ್ಕ್ವೇರ್ ಬಳಿ ಗಮನಾರ್ಹ ಚಟುವಟಿಕೆಗಳು ವರದಿಯಾಗಿವೆ.

ಇರಾನ್‌ ಮೇಲೆ ಮುಂದುವರಿದ ಇಸ್ರೇಲ್ ದಾಳಿ, ಖಮೇನಿಯೇ ಟಾರ್ಗೆಟ್‌

ಖಮೀನಿ

ಹರೀಶ್‌ ಕೇರ ಹರೀಶ್‌ ಕೇರ Jun 14, 2025 7:01 AM

ಟೆಹರಾನ್:‌ ಇಸ್ರೇಲ್​ ಭದ್ರತಾ ಪಡೆಗಳು ಇರಾನ್​ ಮೇಲೆ (Israel-Iran Conflict) ಶುಕ್ರವಾರ ರಾತ್ರಿ ಎರಡನೇ ಸುತ್ತಿನ ವಾಯು ದಾಳಿ ಪ್ರಾರಂಭಿಸಿದ್ದು, ಎರಡನೇ ದಾಳಿಯ ವೇಳೆ ಇರಾನ್​ನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿವಾಸವನ್ನೇ ಟಾರ್ಗೆಟ್​ ಮಾಡಿದೆ ಎನ್ನಲಾಗಿದೆ. ವರದಿಗಳ ಪ್ರಕಾರ ಎರಡನೇ ಸುತ್ತಿನ ದಾಳಿಯಲ್ಲಿ ಇರಾನ್​ನ ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ, ಪರಮಾಣು ಮತ್ತು ಸೇನಾ ನೆಲೆಗಳು ಮತ್ತು ಇರಾನಿನ ಅಧಿಕಾರಿಗಳಿಗೆ ಸಂಬಂಧಿಸಿದ ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಇಸ್ರೇಲ್​ ಭದ್ರತಾ ಪಡೆಗಳ ಎರಡನೇ ಸುತ್ತಿನ ದಾಳಿಯ ಕಾರಣದಿಂದ ಟೆಹ್ರಾನ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿದೆ. ಏತನ್ಮಧ್ಯೆ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ನಿವಾಸ ಮತ್ತು ಅಧ್ಯಕ್ಷೀಯ ಕಚೇರಿಯನ್ನು ಹೊಂದಿರುವ ಹೈ-ಸೆಕ್ಯುರಿಟಿ ವಲಯವಾದ ಪಾಶ್ಚರ್ ಸ್ಕ್ವೇರ್ ಬಳಿ ಗಮನಾರ್ಹ ಚಟುವಟಿಕೆಗಳು ವರದಿಯಾಗಿವೆ.

ಮೆಹರ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಮಧ್ಯ ಇರಾನ್‌ನ ಇಸ್ಫಹಾನ್ ನಗರದಲ್ಲಿ ಬೃಹತ್ ಸ್ಫೋಟದ ಶಬ್ದ ಕೇಳಿಬಂದಿದೆ. ಈ ಪ್ರಾಂತ್ಯವು ಹಲವಾರು ಪ್ರಮುಖ ಪರಮಾಣು ಸೌಲಭ್ಯಗಳಿಗೆ ನೆಲೆಯಾಗಿದೆ, ಆದರೆ ಸ್ಫೋಟದ ಕಾರಣ ಅಥವಾ ನಿಖರವಾದ ಸ್ಥಳದ ಬಗ್ಗೆ ತಕ್ಷಣವೇ ವಿವರಗಳು ಲಭ್ಯವಾಗಿಲ್ಲ. ಇನ್ನೊಂದೆಡೆ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಇರಾನ್ ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿವಾಹಿನಿಯೊಂದು, ಆಳವಾದ ಭೂಗತ ಫೋರ್ಡೊ ಪರಮಾಣು ಸಂಸ್ಕರಣ ತಾಣದ ಸಮೀಪ ಎರಡು ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ವರದಿ ಮಾಡಿದೆ.