ಜೆರುಸಲೆಮ್, ಫೆ.26: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡು ದಿನಗಳ ಇಸ್ರೇಲ್ ಪ್ರವಾಸದಲ್ಲಿದ್ದಾರೆ. ಮೋದಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel Prime Minister Benjamin Netanyahu) ಆದರದಿಂದ ಸ್ವಾಗತಿಸಿದ್ದಾರೆ. ಇದರ ವಿಡಿಯೊಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ಮಧ್ಯೆ, ಇಸ್ರೇಲ್ ಪ್ರಧಾನಿ ಭಾರತೀಯ ಉಡುಪು ತೊಡುವ ಮೂಲಕ ಆಕರ್ಷಿಸಿದ್ದಾರೆ.
ಬುಧವಾರ (ಫೆ.26) ಸಂಜೆ ಟೆಲ್ ಅವೀವ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೋಜನಕೂಟಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತೀಯ ಉಡುಪಿನಲ್ಲಿ ಹಾಜರಿದ್ದರು. ನನ್ನ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿ ಅಚ್ಚರಿಗೊಳಿಸಿದೆ ಎಂದು ನೆತನ್ಯಾಹು ಎಕ್ಸ್‌ನಲ್ಲಿ ಭಾರತೀಯ ಪ್ರಧಾನಿಯನ್ನು ಸ್ವಾಗತಿಸುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಬಹಳ ಅದ್ಭುತವಾಗಿ ಕಾಣುತ್ತಿದೆ ಎಂದು ಭಾರತದ ಪ್ರಧಾನಿ ಪ್ರಶಂಸಿಸಿದ್ದಾರೆ. ಇದು ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ.
ವಿಡಿಯೊ ವೀಕ್ಷಿಸಿ:
ಇಸ್ರೇಲ್ ಪ್ರಧಾನಮಂತ್ರಿಯವರ ಈ ನಡೆ, ಭಾರತ ಮತ್ತು ಇಸ್ರೇಲ್ ನಡುವಿನ ಬಲವಾದ ಸಹಭಾಗಿತ್ವದ ಸಂಕೇತವಾಗಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿತು. ಇದು ಕೇವಲ ರಾಜತಾಂತ್ರಿಕ ಹಾಗೂ ರಕ್ಷಣಾ ಸಂಬಂಧಗಳನ್ನು ಬಲಪಡಿಸುವುದು ಮಾತ್ರವಲ್ಲದೆ, ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸ್ನೇಹವನ್ನೂ ಪ್ರತಿಬಿಂಬಿಸುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಕಂಡುಬರುವ ನಿಕಟ ಬಾಂಧವ್ಯವನ್ನು ಪುನರುಚ್ಚರಿಸಿತು.
ಇನ್ನೂ ವಿಶೇಷವೆಂದರೆ, ಇಸ್ರೆಲ್ ಪ್ರಧಾನಿ ಹಿಂದಿಯಲ್ಲಿ ಬರೆದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವುದು. ಇದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಮ್ಮ ಜಂಟಿ ಭೋಜನಕ್ಕೆ ಮೊದಲು, ನಾನು ನನ್ನ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸುವ ಮೂಲಕ ಅಚ್ಚರಿಗೊಳಿಸಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಅವರು ಹಿಂದಿಯಲ್ಲಿ ಬರೆದಿದ್ದಾರೆ.
ಇಸ್ರೇಲ್‌ಗೆ ಬಂದಿಳಿದ ನರೇಂದ್ರ ಮೋದಿಯನ್ನು ಬಿಗಿದಪ್ಪಿ ಸ್ವಾಗತಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು ಅವರ ಪೋಸ್ಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಬಹುತ್ ಹೈ ಶಾಂದಾರ್ (ಅದ್ಭುತವಾಗಿದೆ) ಎಂದ ಪ್ರಧಾನಿ ಮೋದಿ, ಭಾರತೀಯ ಉಡುಪಿನ ಬಗೆಗಿನ ನಿಮ್ಮ ಒಲವು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗೆಗಿನ ನಿಮ್ಮ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದಿದ್ದಾರೆ.
ಈ ಸಂದೇಶವನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಾಂಪ್ರದಾಯಿಕ ಭಾರತೀಯ ಉಡುಪುಗಳ ಆಯ್ಕೆಗೆ ಆತ್ಮೀಯ ಸ್ವೀಕೃತಿಯಾಗಿ ನೋಡಲಾಯಿತು. ಇದು ಇಬ್ಬರು ನಾಯಕರ ನಡುವಿನ ಆಳವಾದ ಸಂಬಂಧಗಳನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.
ಅಂದಹಾಗೆ, ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಹದಗೆಡುತ್ತಿರುವುದು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ರಕ್ಷಣಾ ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಬುಧವಾರ (ಫೆ.25) ಇಸ್ರೇಲ್‌ಗೆ ಬಂದಿಳಿದರು.
ಭೇಟಿಯ ಮೊದಲ ದಿನದಂದು ನೆಸ್ಸೆಟ್‌ನಲ್ಲಿ ಭಾಷಣ ಮಾಡಿದರು ಮತ್ತು ನಂತರ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಭವ್ಯ ಭೋಜನ ಸವಿದರು. ಎರಡನೇ ದಿನ, ಭಾರತದ ಪ್ರಧಾನಿ ಮೋದಿ ಅವರು ಯಾದ್ ವಾಶೆಮ್ ಹತ್ಯಾಕಾಂಡದ ಸ್ಮಾರಕಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಹಾಗೂ ನೆತನ್ಯಾಹು ಮತ್ತು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರೊಂದಿಗೆ ಪ್ರಮುಖ ಚರ್ಚೆಗಳನ್ನು ನಡೆಸುವ ನಿರೀಕ್ಷೆಯಿದೆ.